Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಜಾತಿ ಗಣಿತಿಯಲ್ಲಿ ಈಡಿಗ ಕ್ರಿಶ್ಚಿಯನ್ ಹಾಗೂ ಬಿಲ್ಲವ ಕ್ರಿಶ್ಚಿಯನ್ ಎರಡು ಉಪಜಾತಿಗಳ ಹೆಸರನ್ನು ಕೈಬಿಡಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ  ಸೆ. 03 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಾನು ಕೈಗ್ಗೊಳ್ಳಲಿರುವ ಜಾತಿ ಗಣಿತಿಯಲ್ಲಿ ಈಡಿಗ ಕ್ರಿಶ್ಚಿಯನ್ ಹಾಗೂ ಬಿಲ್ಲವ ಕ್ರಿಶ್ಚಿಯನ್ ಎಂಬ ಎರಡು ಉಪಜಾತಿಗಳ ಹೆಸರನ್ನು ಪ್ರಕಟಿಸಲಾಗಿದೆ ಆದರೆ ಈ ರೀತಿಯಾಗಿ ನಮ್ಮಲ್ಲಿ ಇಲ್ಲ ಆದ್ದರಿಂದ ಪಟ್ಟಿಯಿಂದ ಇವುಗಳನ್ನು ಕೈಬಿಡಬೇಕೆಂದು ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗರ ಸಂಘ (ರಿ.) ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಾನು ಕೈಗ್ಗೊಳ್ಳಲಿರುವ ಜಾತಿ ಗಣಿತಿಯಲ್ಲಿ ಪತ್ರಿಕೆಗಳಲ್ಲಿ ಜಾತಿ ಮತ್ತು ಉಪಜಾತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ವ್ಯತ್ಯಾಸಗಳಿದ್ದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿದೆ. ಸದರಿ ಪಟ್ಟಿಯನ್ನು ಗಮನಿಸಿದಾಗ ಕ್ರಮಸಂಖ್ಯೆ: 318 ರಲ್ಲಿ ಈಡಿಗ ಇದ್ದು 319 ರಲ್ಲಿ ಈಡಿಗ ಕ್ರಿಶ್ಚಿಯನ್ ಎಂದು ಇದೆ ಹಾಗೇ 199ರಲ್ಲಿ ಬಿಲ್ಲವ ಇದ್ದು 190ರಲ್ಲಿ ಬಿಲ್ಲವ ಕ್ರಿಶ್ಚಿಯನ್ ಎಂದು ಇದೆ. ಕ್ರಿಶ್ಚಿನ್ ಎಂಬುದು ಧರ್ಮ ಸೂಚಕ ಶಬ್ದವಾಗಿದ್ದು ಕ್ರಿಶ್ಚಿಯನ್ ಧರ್ಮದ ಒಳಗಡೆ ಈಡಿಗ ಮತ್ತು ಬಿಲ್ಲವ ಜಾತಿ ಯಾವುದೇ ಕಾರಣಕ್ಕು ಬರುವುದಿಲ್ಲ. ಹುಟ್ಟಿನಿಂದ ಅವನು/ಅವಳು ಈಡಿಗ ಅಥವಾ ಬಿಲ್ಲವ ಆಗಿದ್ದು ಆ ನಂತರ ಅವನು/ಅವಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಲ್ಲಿ ಅವನನ್ನು/ಅವಳನ್ನು ಕ್ರಿಶ್ಚಿಯನ್ ಎಂದೇ ಪರಿಗಣಿಸಬೇಕೆಲ್ಲದೇ ಈಡಿಗ ಕ್ರಿಶ್ಚಿಯನ್ ಅಥವಾ ಬಿಲ್ಲವ ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ಮುಂದಿನ ದಿನಗಳಲ್ಲಿ ಅವನು/ಅವಳು ‘ಹಿಂದುಳಿದವರ್ಗ” ಮತ್ತು “ಅಲ್ಪಸಂಖ್ಯಾತಇಲಾಖೆ” ಈ ಎರಡೂ ವರ್ಗದ ಸವಲತ್ತನ್ನು ಪಡೆದುಕೊಂಡು ಸರ್ಕಾರಕ್ಕೆ ಮೋಸ ಎಸಗುವ ಸಾಧ್ಯತೆಗಳು ಇವೆ ಇದರಿಂದ ನಮ್ಮ ಈಡಿಗ ಬಿಲ್ಲವ ಜನಾಂಗದವರಿಗೆ ಸರ್ಕಾರದ ಸವಲತ್ತು ಪಡೆಯಲು ಅನಾನುಕೂಲವು ಆಗುತ್ತದೆ. ಈ ಕಾರಣದಿಂದ ಅವನು/ ಅವಳನ್ನು ಒಂದೇ ಈಡಿಗ ಬಿಲ್ಲವ ಎಂದು ಅಥವಾ ಕ್ರಿಶ್ಚಿಯನ್ ಎಂದು ಮಾತ್ರ ಗುರುತಿಸಲು ಸಾಧ್ಯವಾಗುವಂತೆ ನಮ್ಮ ಸಮಾಜದವತಿಯಿಂದ ಹಾಗೂ ನಮ್ಮ ಸಂಪದ ವತಿಯಿಂದ ಈಡಿಗ ಕ್ರಿಶ್ಚಿಯನ್ ಹಾಗೂ ಬಿಲ್ಲವ ಕ್ರಿಶ್ಚಿಯನ್ ಎಂಬ ಎರಡು ಉಪಜಾತಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಬೇಕೆಂದು ಆಗ್ರಹಿಸುತ್ತೇವೆ.

ಆರ್ಯ ಈಡಿಗರ ಸಂಘ(ರಿ)ದ ಅಧ್ಯಕ್ಷರಾದ ಹೆಚ್.ಜೀವನ್, ಈ ಎನ್ ಕಾಂತರಾಜ್, ಸುರೇಂದ್ರ, ಶಿವಕುಮಾರ್, ಜಗದೀಶ್, ನಾಗೇಂದ್ರ ಪ್ರಸಾದ್ ಟಿ ಸ್ವಾಮಿ, ಅನುರಾಧ ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...