Agnipath ಯೋಜನೆ ಕೈಬಿಡಿ, ಯಾಕೆ ಹಠ ಮಾಡುತ್ತೀರ : ಸಿದ್ದರಾಮಯ್ಯ

1 Min Read

 

ಬೆಂಗಳೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಗ್ನಿಪಥ್ ನಾಲ್ಕು ವರ್ಷ ಮಾತ್ರ ನೇಮಕಾತಿ ಮಾಡಲಾಗುತ್ತಿದೆ. ನಾಲ್ಕು ವರ್ಷದ ಆದ ಮೇಲೆ ಪೆನ್ಷನ್ ಇಲ್ಲ.‌ ಹಾಗಾದರೆ ನಮ್ಮ ಭವಿಷ್ಯ‌ ಏನು ಎಂದು ಅವರು ಕೇಳುತ್ತಿದ್ದಾರೆ.

ಅಗ್ನಿಪಥ ಯೋಜನೆ‌ ಅವೈಜ್ಞಾನಿಕವಾಗಿದೆ. ಯೋಜನೆ ಕೈಬಿಡಿ ಏಕೆ ಹಠ ಮಾಡ್ತೀರಿ. ಇವರ ಬೇಡಿಕೆ ಹೋರಾಟ ನ್ಯಾಯಯುತವಾಗಿದೆ ಎಂದು ಬೆಂಬಲ ಇದೆ. ಆದರೆ ಹಿಂಸಾತ್ಮಕವಾಗಿ ಮಾಡಬಾರದು ಎಂದಿದ್ದಾರೆ.

ಇದೇ ವೇಳೆ ಮಧುಮಾದೇಗೌಡ ಗೆಲುವು ಸಾದಿಸಿದ ಬಗ್ಗೆ ಮಾತನಾಡಿ, ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿದ್ದಾರೆ. ಅದು ಸಾಧನೆಯೇ ಸರಿ. ಇಲ್ಲಿಯವರೆಗೆ ಪಕ್ಷದಿಂದ ಯಾರು ಗೆದ್ದಿರಲಿಲ್ಲ. ಎರಡು ಭಾರಿ ಜೆಡಿಎಸ್ ಶ್ರೀಕಂಠೇಗೌಡರು ಗೆದ್ದಿದ್ದರು. ಜೆಡಿಎಸ್ ನವರು ಭದ್ರಕೋಟೆ ಅಂದುಕೊಂಡಿದ್ದರು. ಆದರೆ ಈ ಭಾರಿ ಅವರ ಅಭ್ಯರ್ಥಿ‌ ಸೋತಿದ್ದಾರೆ. ೧೨೫೦೦ ಮತಗಳ ಅಂತರದಿಂದ ಗೆದಿದ್ದಾರೆ. ಮಂಡ್ಯದಲ್ಲಿ ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರು.

ಹಾಸನದಲ್ಲಿ ಆರು ಜೆಡಿಎಸ್ ಶಾಸಕರಿದ್ದಾರೆ. ಮೈಸೂರಿನಲ್ಲಿ‌ನಾಲ್ವರು ಜೆಡಿಎಸ್ ಶಾಸಕರಿದ್ದಾರೆ. ಚಾಮರಾಜನಗರದಲ್ಲಿ ಮಾತ್ರ ಜೆಡಿಎಸ್ ಇಲ್ಲ. ಈ‌ ನಾಲ್ಕು ಕ್ಷೇತ್ರಗಳು ದಕ್ಷಿಣ ಕ್ಷೇತ್ರಕ್ಕೆ‌ ಬರುತ್ತವೆ. ಗೆಲುವು ನಮ್ಮ ಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ. ಹಿಂದೆ ಸ್ಥಳೀಯ ಸಂಸ್ಥೆಯಿಂದಲೂ‌ ಗೆದ್ದಿದ್ದೆವು. ಈಗ ಪದವೀಧರ ಕ್ಷೇತ್ರದಲ್ಲೂ ಗೆದ್ದಿದ್ದೇವೆ. ಪದವೀಧರು ವಿದ್ಯಾವಂತರು. ಇವರು ಕಾಂಗ್ರೆಸ್ ವಿರುದ್ಧವಾಗಿದ್ದಾರೆಂಬ ಅಭಿಪ್ರಾಯವಿತ್ತು. ಆದರೆ ಈ ಬಾರಿ ಪದವೀಧರರು ಕಾಂಗ್ರೆಸ್ ಕಡೆ ತಿರುಗಿದ್ದಾರೆ. ಕೇಂದ್ರದ ಸರ್ಕಾರದ ವೈಫಲ್ಯ. ಮಹಿಳೆಯರ ಸಮಸ್ಯೆ,ಶಿಕ್ಷಣ ಕ್ಷೇತ್ರದ ಗೊಂದಲ. ಇವುಗಳನ್ನೆಲ್ಲ‌ ನೋಡಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಇದರರ್ಥ ಜನ ಕಾಂಗ್ರೆಸ್ ಪರವಿದ್ದಾರೆ ಅನ್ನೋದು. ಬಿಜೆಪಿಗೆ ವಿರುದ್ಧವಾದ ಅಭಿಪ್ರಾಯ ಜನರಿಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *