Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುರೇನಿಯಂ ಮಾಲಿನ್ಯದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ          

---Advertisement---

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಮೊಬೈಲ್ ಸಂಖ್ಯೆ : 94483 38821

ಸುದ್ದಿಒನ್
ಭಾರತೀಯ ವಿಜ್ಞಾನ ಸಂಸ್ಥೆ (IISC), ಬೆಂಗಳೂರು ಮತ್ತು ಪರಿಸರ ವಿಕಿರಣಶೀಲತೆಯ ಉನ್ನತ ಸಂಶೋಧನಾ ಸಂಸ್ಥೆ ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನಿಗಳು ಡಿಸೆಂಬರ್‌ 2021ರಲ್ಲಿ ಪೂರ್ವ ಕರ್ನಾಟಕದ 73 ಗ್ರಾಮಗಳಲ್ಲಿನ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ನ ನೀರನ್ನು ರಸಾಯನಿಕ ವಿಶ್ಲೇಷಣೆ ಮಾಡಲಾಗಿ 57 ಗ್ರಾಮಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO)ಯು ನಿಗದಿ ಪಡಿಸಿದ ಮಿತಿಗಿಂತ 30 ಹೆಚ್ಚು ಯುರೇನಿಯಂ ಅಂಶ ದೃಢಪಟ್ಟಿದೆ. ಅಲ್ಲದೆ 48 ಗ್ರಾಮಗಳಲ್ಲಿ ಭಾರತೀಯ ಅಣುಶಕ್ತಿ ನಿಯಂತ್ರಣ ಮಂಡಳಿ (AERB) ನಿಗದಿಪಡಿಸಿದ ಮಿತಿಗಿಂತ 60 ಹೆಚ್ಚು ಯುರೇನಿಯಂ ಅಂಶ ಇರುವುದು ತಿಳಿದು ಬಂದಿದೆ.

ಚಿಕ್ಕಬಳ್ಳಾಪುರದ 7 ಗ್ರಾಮಗಳಲ್ಲಿ, ಕೋಲಾರದ 5 ಗ್ರಾಮಗಳಲ್ಲಿ , ತುಮಕೂರಿನ 1 ಗ್ರಾಮದಲ್ಲಿ ಮತ್ತು ಚಿತ್ರದುರ್ಗದ ಒಂದು ಗ್ರಾಮದಲ್ಲಿ ಅಧಿಕ ಪ್ರಮಾಣದ ಯುರೇನಿಯಂ ಅಂಶ ಇರುವುದನ್ನು ಪತ್ತೆ ಹಚ್ಚಲಾಗಿದೆ. ಆದರೆ ಮೇಲಿನ ಎಲ್ಲಾ ಗ್ರಾಮಗಳ ಸಮೀಪದಲ್ಲಿ ಯಾವುದೇ ಪರಮಾಣು ಘಟಕಗಳಿಲ್ಲ, ಆದರೆ ಯುರೇನಿಯಂ ಹೆಚ್ಚಿನ ಅಂಶ ಇರುವಲು ಕಾರಣವೇನೆಂದರೆ, ಭೂವೈಜ್ಞಾನಿಕ ಪ್ರದೇಶಗಳಾದ ಪೂರ್ವ ಧಾರವಾಡ ಕ್ರೀಟನ್‌, ಪುರಾತನ ಶಿಲಾ ವರಣದ ಭಾಗವಾಗಿರುವುದರಿಂದ ಈ ಭಾಗವು ಗ್ರಾನೈಟ್‌ ಮತ್ತು ನೈಸ್ಸ್‌ ನಂತಹ ಯುರೇನಿಯಂ ಹೊಂದಿದ ಶಿಳೆಗಳು ಮಳೆ ಮತ್ತು ಗಾಳಿಯಿಂದ ಸವೆದಾಗ ಯುರೇನಿಯಂ ಅಣುಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ ಮತ್ತು ಕೊಳವೆ ಭಾವಿಗಳಿಂದ ಹೆಚ್ಚಿನ ಪ್ರಮಾಣದ ಅಂತರ್ಜಲವನ್ನು ಉಪಯೋಗುಸುವುದರಿಂದ ಅಂತರ್ಜಲದ ಮಟ್ಟಕುಸಿಯುತ್ತದೆ. ಆಗ ಆಳವದಲ್ಲಿರುವ ಯುರೇನಿಯಂ ಹೊಂದಿದ ಶಿಲೆಗಳು ಗಾಳಿಯ ಸಂಪರ್ಕಕ್ಕೆ ಬರುತ್ತವೆ. ಆಗ ಆಕ್ಸಿಡೈನ್‌ ಹೊಂದಿ ಯುರೇನಿಯಂ ಅಂಶ ನೀರಿನಲ್ಲಿ ಕರುಗವ ರೂಪಕ್ಕೆ ಬದಲಾಗುತ್ತದೆ. ಇಂತಹ ಯುರೇನಿಯಂನಿಂದ ಮಾಲಿನ್ಯಗೊಂಡ ನೀರನ್ನು ಸೇವಿಸುವುದರಿಂದ ಯುರೇನಿಯಂ ಅಂಶ ದೇಹವನ್ನು ಸೇರುತ್ತದೆ ಮತ್ತು ಕೃಷಿಯಲ್ಲಿ ಯುಪಯೋಗಿಸುವ ರಸಗೊಬ್ಬರಗಳಿಂದ ನೈಟ್ರೇಟ್‌ ಕಣಗಳು ಅಂರ್ಜಲದಲ್ಲಿ ವಿಲೀನಗೊಳ್ಳುತ್ತವೆ. ಈ ಅಂಶವು ಕೂಡ ಯುರೇನಿಯಂ ಕರುಗುವಿಕೆಗೆ ಸಹಕರಿಸಿರುತ್ತದೆ.

ವಿಷಕಾರಿ ಅಂಶ ಹಾಗೂ ವಿಕಿರಣಶೀಲ ಅಂಶವೂ ಮಾನವನ ದೇಹಕ್ಕೆ ಮಾರಕವಾಗಿ ಮೂತ್ರಪಿಂಡಗಳ ಕಾಯಿಲೆ ಕ್ಯಾನ್ಸರ್‌, ಜೀರ್ಣಶಕ್ತಿ, ನರಗಳ ದೌರ್ಬಲ್ಯ ಮತ್ತು ಇನ್ನಿತರ ಕಾಯಿಲೆಗಳಿಗೆ ತುತ್ತಾಗುವ ಸಂಭವ ಹೆಚ್ಚು ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದುದರಿಂದ ಮಾನವನು ಸಾದ್ಯವದಷ್ಟು ನೀರಿನ ಘಟಕಗಳಿಂದ ಶುದ್ಧೀಕರಿಸಿದ ನೀರನ್ನು ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಹಾಗೂ ಮುಂಬರುವ ಖಾಯಿಲೆಗಳನ್ನು ದೂರಮಾಡಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ನಮ್ಮ ರಾಜ್ಯದಲ್ಲಿ ಘನ ಸರ್ಕಾರವು ಸುಮಾರು 18,000 ನೀರಿನ ಶುದ್ಧೀಕರಣ ಘಟಕಗಳನ್ನು ಈಗಾಗಲೇ ನಿರ್ಮಿಸಿದೆ ಹಾಗೂ ಈ ಕಾರ್ಯದ ಅಭಿವೃದ್ಧಿ ಮುಂದುವರಿಯುತ್ತದೆ. ಮುಂದಿನ ಪೀಳಿಗೆಗೆ ಅಂತರ್ಜಲ ಲಭ್ಯತೆಗೆ ಪ್ರತಿಯೊಬ್ಬರ ಹೊಣೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now