ಸಾಕಷ್ಟು ಜನಕ್ಕೆ ಬೆಳಗ್ಗೆ ಎದ್ದ ಕೂಡಲೇ ಟೀ, ಕಾಫಿ ಕುಡಿದೇ ಅಭ್ಯಾಸವಿರುತ್ತದೆ. ಖಾಲಿ ಹೊಟ್ಟೆಯಲ್ಲಿಯೇ ಕುಡಿಯುತ್ತಾರೆ. ಆದರೆ ಅದು ಆರೋಗ್ಯಕ್ಕೆ ಅಷ್ಟೇನು ಒಳಿತಲ್ಲ. ಮೈಂಡ್ ರಿಫ್ರೆಶ್ ಆಗೋದಕ್ಕೆಂತ ಈ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ನಾವೀಗ ಹೇಳುವ ಟಿಪ್ಸ್ ಫಾಲೋ ಮಾಡಿದ್ರೆ ಮೈಂಡು ರಿಫ್ರೆಶ್ ಆಗುತ್ತೆ, ಹೆಲ್ತ್ ಚೆನ್ನಾಗಿರುತ್ತೆ.
ದಿನಾ ಬೆಳಿಗ್ಗೆ ಎದ್ದ ಕೂಡಲೇ ಪುದೀನಾ ಮತ್ತು ಕಾಮಕಸ್ತೂರಿ ಬೀಜ ಬೆರೆಸಿದ ಬಿಸಿ ನೀರು ಕುಡಿಯಿರಿ. ಇದರಿಂದ ದೇಹದಲ್ಲಿ ಶೇಕರಣೆಯಾಗಿರುವ ಅಧಿಕ ಕೊಬ್ಬು ಕರಗುತ್ತದೆ. ಈ ಕೊಬ್ಬನ್ನ ಕರಗಿಸಲು ನಾನಾ ಕಸರತ್ತನ್ನ ಮಾಡ್ತೀರಿ. ಆದರೆ ಪುದೀಮಾ ಜೊತೆಗೆ ಸೀಡ್ಸ್ ಬೆರೆಸಿದ ನೀರನ್ನು ಕುಡಿಯುವುದರಿಂದ ಇದೆಲ್ಲವೂ ತಾನಾಗಿಯೇ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಇದರಿಂದ ತೂಕವೂ ಇಳಿಯುತ್ತದೆ. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ನೀರಿಗೆ ನೀವೂ ಕಾಮಕಸ್ತೂರಿ ಬೀಜ ಸಿಗದೆ ಇದ್ದಾಗ ಚಿಯಾ ಸೀಡ್ಸ್ ಬಳಸಬಹುದು. ಚಿಯಾ ಬೀಜಗಳಲ್ಲಿ ಅಧಿಕ Omega – 3 fatty acid ಅಂಶವಿದೆ. ಜೀರ್ಣವಾಗುವ ನಾರಿನಂಶ, ಬಹಳಷ್ಟು ವಿಟಮಿನ್ ಗಳು ಇದ್ದು, ದೇಹದಲ್ಲಿ ಶೇಖರಣೆ ಆಗಿರುವ ಕಲ್ಮಶಗಳನ್ನು, ಹಾನಿಕಾರಕ ವಿಷವನ್ನು ಹೊರಹಾಕಲು ಸಹಕರಿಸುತ್ತದೆ. ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತೆ. ಅಧಿಕ ರಕ್ತದೊತ್ತಡವನ್ನು ಸಮಸ್ಥಿತಿಗೆ ತರುವಲ್ಲಿ ಸಹಕಾರಿಯಾಗುತ್ತದೆ.
ಬೀಜವನ್ನು ರಾತ್ರಿ ಇಡೀ ನೀರಿನಲ್ಲಿ ನೆನೆಸಿಡಿ. ಪುದೀನಾ ಕೂಡ ರಾತ್ರಿಯೇ ನೀರಿಗೆ ಹಾಕುವುದರಿಂದ ಅದರಲ್ಲಿರುವ ಅಂಶ ನೀರಿನಲ್ಲಿ ಬಿಟ್ಟುಕೊಳ್ಳುತ್ತೆ. ದೇಹಕ್ಕೆ ಹೆಚ್ಚಿನ ಲಾಭವೂ ಸಿಗಲಿದೆ. ಪ್ರತಿದಿನ ಈ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.