ರಂಗೋಲಿಯಲ್ಲಿ ಅರಳಿದ ಶ್ರೀ ರಾಮನ ಚಿತ್ರ | ಕಣ್ಮನ ಸೆಳೆದ  ಶ್ರೀರಾಮ, ಸೀತೆ ಹಾಗೂ ಹನುಮಂತನ ವೇಷಧಾರಿ ಮಕ್ಕಳು

1 Min Read

ಸುದ್ದಿಒನ್, ದಾವಣಗೆರೆ, ಜನವರಿ.21  : ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾನಗರದ ಉದ್ಯಾನದಲ್ಲಿ 

‘ಸೂಪರ್ ಮಾಮ್ಸ್ ಆಫ್ ದಾವಣಗೆರೆ’ ಮಹಿಳಾ ತಂಡದ ಸದಸ್ಯೆಯರು  ದೀಪ ಬೆಳಗುವ ಮೂಲಕ ‘ಶ್ರೀರಾಮ ದೀಪಾವಳಿ’ ಆಚರಿಸಿದರು.

ಇದಕ್ಕೂ ಮೊದಲು ಸೂಪರ್ ಮಾಮ್ಸ್ ಆಫ್ ದಾವಣಗೆರೆ ವತಿಯಿಂದ ಮಹಿಳೆಯರು ವಿದ್ಯಾನಗರದ ಶಿವ ಪಾರ್ವತಿ ದೇವಾಲಯದಿಂದ ಶ್ರೀ ರಾಮ ನಾಮ ಜಪಿಸುತ್ತಾ  ಉದ್ಯಾನದವರೆಗೆ ಮೆರವಣಿಗೆ ನಡೆಸಿದರು.

ಬಳಿಕ ಉದ್ಯಾನದಲ್ಲಿ ರಂಗೋಲಿಯಲ್ಲಿ ಅರಳಿದ ಶ್ರೀ ರಾಮನಿಗೆ ಜ್ಯೋತಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದರು. ರಂಗೋಲಿಯಲ್ಲಿ ಮೂಡಿದ್ದ ಶ್ರೀರಾಮನ ಚಿತ್ರದ ಸುತ್ತ ದೀಪಗಳನ್ನು ಇಟ್ಟು ಸಂಭ್ರಮಿಸಿದರು.

‘ಜನವರಿ 22ರಂದು ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಿದ್ದು, ಎರಡನೇ ದೀಪಾವಳಿಯಂತೆ ಆಚರಿಸುತ್ತೇವೆ. ಆ ದಿನ ಅಯೋಧ್ಯೆಗೆ ಹೋಗಲು ಆಗದ ಹಿನ್ನೆಲೆಯಲ್ಲಿ ಒಟ್ಟಾಗಿ ಸೇರಿ ರಾಮನಿಗೆ ನಮನ ಸಲ್ಲಿಸಲಿದ್ದೇವೆ’ ಎಂದು  ತಂಡದ ಸದಸ್ಯೆಯರು ತಿಳಿಸಿದರು.

ಇದೇ ವೇಳೆ ಮಕ್ಕಳು ಶ್ರೀರಾಮ, ಸೀತೆ ಹಾಗೂ ಹನುಮಂತನ ವೇಷ ಧರಿಸಿ ಎಲ್ಲರ ಗಮನ ಸೆಳೆದರು.

Share This Article
Leave a Comment

Leave a Reply

Your email address will not be published. Required fields are marked *