Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಟಕಗಳಿಂದ ದೇವರ ಅಸ್ತಿತ್ವ ಉಳಿಯಲು ಸಾಧ್ಯ : ಎನ್.ಆರ್. ಲಕ್ಷ್ಮೀಕಾಂತ್

---Advertisement---

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 02 : ನಾಟಕ, ಕಲೆ, ಸಂಗೀತ ಮತ್ತು ಸಾಹಿತ್ಯ ಒಡನಾಟದಿಂದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎನ್ ಆರ್. ಲಕ್ಷ್ಮಿಕಾಂತ್ ಅಭಿಪ್ರಾಯಪಟ್ಟರು.

ನೂರಾಡಿ ರಸ್ತೆಯ ವೇದಾವತಿ ನಗರದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಕೃಷ್ಣ ಕೃಪಾಪೋಷಿತ ನಾಟಕ ಮಂಡಳಿ ಏರ್ಪಡಿಸಿದ್ದ ಶ್ರೀ ಶಾಂಭವಿ ಮಹಾತ್ಮೆ ಎಂಬ ಪೌರಾಣಿಕ ನಾಟಕ ಕುರಿತು ಮಾತನಾಡಿದರು.

 

ಪ್ರೇಕ್ಷಕರಿಂದ ಇಂದಿಗೂ ರಂಗಭೂಮಿ ಜೀವಂತವಾಗಿದೆ. ಹರಿಕಥೆ, ನಾಟಕಗಳಿಂದ ದೇವರ ಅಸ್ತಿತ್ವ ಉಳಿಯಲು ಸಾಧ್ಯವಾಗಿದೆ. ಸಂಗೀತ ಮತ್ತು ಸಾಹಿತ್ಯ ಒಲವು ಇರುವವರಲ್ಲಿ ಮನುಷ್ಯತ್ವ ಇರುತ್ತದೆ. ಜನರ ಮನಸ್ಸನ್ನು ಸೃಜನಗೊಳಿಸಲು ಸಂಗೀತ ನಾಟಕಗಳು ಮುಖ್ಯ ಎಂದರು.

 

ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಮಾತನಾಡಿ ನಾಟಕಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗುತ್ತಿದೆ. ಸಂಸ್ಕೃತಿಯ ಪ್ರತೀಕವಾಗಿರುವ ಪೌರಾಣಿಕ ನಾಟಕ ಕಲೆ ಅಸ್ತಿತ್ವ ಕಳೆದುಕೊಳ್ಳದಂತೆ ಕಲೆಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ಆಧುನಿಕತೆಯ ಭರಾಟೆಯ ಟಿವಿ, ಮೊಬೈಲ್ ಬಳಕೆ ಯುಗದಲ್ಲಿ ರಾತ್ರಿಯಿಂದ ಬೆಳಗಿನ ಜಾವದ ತನಕ ಮನೆ ಮಂದಿಯೆಲ್ಲಾ ಕುಳಿತು ನಾಟಕ ನೋಡುತ್ತಿದ್ದ ದಿನಗಳು ಹೆಚ್ಚಾಗಲಿ, ಪಾತ್ರಧಾರಿಗಳು ಉತ್ತಮವಾಗಿ ನಾಟಕವನ್ನು ಪ್ರದರ್ಶಿಸಿದರು. ನಾವು ಮೈಮರೆತು ಕುಳಿತು ವೀಕ್ಷಿಸಿದೇವು ಎಂದು ಪಾತ್ರಧಾರಿಗಳ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

ನಾಟಕಕ್ಕೆ ಮಸ್ಕಲ್ ವಿಶ್ವನಾಥ್ ಸಂಗೀತ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಪಾತ್ರಧಾರಿಗಳಾದ ಚಿತ್ರ ಜಿತ್ ಯಾದವ್, ಟಿಬಿ ಗೊಲ್ಲರಹಟ್ಟಿ ಎನ್. ಲಕ್ಷ್ಮೀಕಾಂತ್, ಎಂ. ಲೋಕೇಶ್, ನಿಜಲಿಂಗಪ್ಪ , ಶ್ರೀನಿವಾಸ್, ಹರೀಶ್, ವೆಂಕಟೇಶ್, ನಟರಾಜ್, ಹೆಚ್.ಆರ್. ತಿಪ್ಪೇಸ್ವಾಮಿ, ಜಗದೀಶ್, ಹನುಮಂತಪ್ಪ, ನಿಂಗಣ್ಣ, ನಂದೀಶ್ ಸೇರಿದಂತೆ ಮತ್ತಿತರರು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now