ಬೆಂಗಳೂರು: ಅಶ್ವತ್ಥ್ ನಾರಾಯಣ್ ಬಹಳ ಅನುಭವಸ್ಥ. ಪರೀಕ್ಷೆಗಳನ್ನು ಮಾಡಿಸುವುದರಲ್ಲಿ. ಈ ಹಿಂದೆ ನರ್ಸ್ ಗಳಿಗೆ ಸರ್ಟಿಫಿಕೇಟ್ ಕೊಡುವುದರಲ್ಲಿ ಅವರ ಬಗ್ಗೆ ಒಂದು ಇತಿಹಾಸವೇ ಇದೆ. ಸ್ವಲ್ಪ ಅದನ್ನಾದರೂ ಮಾತನಾಡಬೇಕಲ್ಲ ಈ ಕಾಂಗ್ರೆಸ್ ನಾಯಕರು. ಆ ಮಾಹಿತಿಯಾದರೂ ಇರಬೇಕಲ್ವಾ. ಅದನ್ನು ಚರ್ಚೆ ಮಾಡಲ್ಲ.
ಈ ಹಿಂದೆ ಸರ್ಟಿಫಿಕೇಟ್ ಕೊಡಿಸುವಂತದ್ದೆ ಒಂದು ಟೀಂ ಇತ್ತು. ಇವರಿಗೆ ಒಂದು ಹೆಸರೇ ಇತ್ತು. ನಾನು ವಿಶ್ವ ಒಕ್ಕಲಿಗ ಅಂತ ನಿನ್ನೆ ಹೇಳಿದ್ರು. ಒಕ್ಕಲಿಗರೆಲ್ಲ ನನ್ನ ಬಂಧುಗಳು ಅಂತ ಹೇಳಿದ್ರುಲ್ಲವೆ. ಯಾವ ವಿಸದಗವ ಒಕ್ಕಲಿಗನೋ, ಯಾವ ಬಂಧುವೋ. ಆ ಸರ್ಟಿಫಿಕೇಟ್ ಗಳನ್ನು ಎಂಥತವರಿಗೆ ಕೊಟ್ರೋ ಇ ರಾಜಕಾರಣಕ್ಕೆ ಬರುವ ಮುಂಚೆ. ಹೆಸರೇನ್ ಇಟ್ಟಿದ್ದರೋ..? ಎಕ್ಸಾಂಗೆ ಬರದೆವಿದ್ದಂತವರಿಗೆಲ್ಲಾ ಸರ್ಟಿಫಿಕೇಟ್ ಕೊಟ್ಟ ಇತಿಹಾಸವಿದೆ. ಇಂಥ ಸರ್ಕಾರವಿದು. ಸರ್ಕಾರದಲ್ಲಿರುವ ಮಂತ್ರಿಗಳು ಈ ರೀತಿ ಇದ್ದಾರೆ. ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು.
ನಾಡಿನ ಜನತೆಗೆ ಜವಬ್ದಾರಿ ಇದೆ. ಆ ಮಕ್ಕಳು ಮನೆ, ಆಸ್ತಿ ಮಾರಾಟ ಮಾಡಿ, ಇಲ್ಲವಯಾರತ್ರನಾದರೂ ಸಾಲ ತೆಗೆದುಕೊಂಡು ದುಡ್ಡು ಕೊಟ್ಟಿದ್ದಾರಲ್ಲ. ದುಡ್ಡುಕೊಟ್ಟಿದ್ದಕ್ಕೆ ಇವತ್ತು ಜೈಲಿಗೆ ಹೋಗ್ತಿದ್ದಾರೆ. ಈಗ ಆ ಸಾಲ ತೀರಿಸೋದು ಹೀಗೆ. ಸೂಸೈಡ್ ಮಾಡ್ಕೊಳ್ಳಬೇಕು ಇನ್ನು. ಅವನತ್ರ ದುಡ್ ವಸೂಲಿ ಮಾಡೋಕ್ ಆಗುತ್ತಾ..? ಕೊಟ್ಟವನು ಕೋಡಂಗಿ ಇಸ್ಕೊಂಡೋನ್ ಈರಭದ್ರ. ತಗೊಂಡವನು ಆರಾಮಾಗಿರ್ತಾನೆ. ಇವ್ರು ಪಾಪ ಜೈಲಲ್ಲಿ ಇದಾರೆ. ಜೈಲಿನಿಂದ ವಾಪಾಸ್ ಬಂದ ಕೆಲವರು ರಾಜಕಾರಣಿಗಳ ಹಿಂದೆ ಓಡಾಡಿಕೊಂಡು ಆರಾಮಾಗಿ ಇರುತ್ತಾರೆ ಅಂತ ಪಿಎಸ್ಐ ಅಕ್ರಮದ ಬಗ್ಗೆ ಮಾತನಾಡಿದ್ದಾರೆ.