Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಪೊಲೀಸರ ಭಯಕ್ಕೋಸ್ಕರ ಹೆಲ್ಮೆಟ್ ಧರಿಸ್ಬೇಡಿ, ಪಿಎಸ್ಐ ಬಾಹುಬಲಿ ಪಡನಾಡ

---Advertisement---

 

ಸುದ್ದಿಒನ್, ಹಿರಿಯೂರು, ಮಾರ್ಚ್. 01 : ಪೊಲೀಸರ ಭಯಕ್ಕೋಸ್ಕರ ಹೆಲ್ಮೆಟ್ ಧರಿಸಬೇಡಿ, ಬದಲಿಗೆ ತಮ್ಮನ್ನು ನಂಬಿಕೊಂಡು ಬದುಕುತ್ತಿರುವ ಕುಟುಂಬದ ಸದಸ್ಯರ ಜೀವ ಉಳಿಸಲು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ಬಾಹುಬಲಿ ಪಡನಾಡ ಹೇಳಿದರು.

ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಂಗೇನಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬೈಕ್ ಸವಾರರನ್ನು ಕುರಿತು
ಮಾತನಾಡಿದರು.

ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದಲ್ಲಿ 500 ರೂಪಾಯಿ ದಂಡ ಕಟ್ಟುವುದು ಅಥವಾ ರಾಜಕಾರಣಿಗಳಿಂದ ಪೋನ್ ಮಾಡಿಸಿ ಪೋಲಿಸರಿಂದ ತಪ್ಪಿಸಿಕೊಳ್ಳುವುದು ಮುಖ್ಯವಲ್ಲ, ಬದಲಿಗೆ ತಮ್ಮ ಪ್ರಾಣ ಉಳಿಯುವುದು ಬಹುಮುಖ್ಯವಾಗಿರುತ್ತದೆ. ಜೀವ ಉಳಿದರೆ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿ ನಾಗರಾಜ್, ನಿಂಗಣ್ಣ,
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರಮೂರ್ತಿ,‌ರಮೇಶ್, ವಿನೋದ್, ರಮೇಶ್, ಬೈಕ್ ಸವಾರು ಹಾಗೂ ಗ್ರಾಮಸ್ಥರು ಇದ್ದರು.

Join WhatsApp

Join Now

Join Telegram

Join Now

Leave a Comment