Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟಾಕ್ಸಿಕ್ ಗೆ ತಟ್ಟಿದ ಯುದ್ಧದ ಬಿಸಿ ಧುರಂಧರ್‌2 ಗೆ ಯಾಕೆ ತಟ್ಟಿಲ್ಲ ಗೊತ್ತಾ..?

---Advertisement---

ಯಶ್ ಅಭಿಮಾನಿಗಳು ನಿರೀಕ್ಷೆಯಿಂದ ಕಾಯ್ತಾ ಇದ್ದ ಟಾಕ್ಸಿಕ್ ಸಿನಿಮಾ ಹೇಳಿದ್ದ ಡೇಟ್ ಗೆ ರಿಲೀಸ್ ಆಗ್ತಿಲ್ಲ‌. ಬದಲಿಗೆ ಜೂನ್ 4ಕ್ಕೆ ಮುಂದೂಡಿಕೆಯಾಗಿದೆ. ಟಾಕ್ಸಿಕ್ ಗೆ ಟಫ್ ಕಾಂಪಿಟೇಷನ್ ಕೊಡ್ತಾ ಇದ್ದ ಧುರಂಧರ್ 2 ಮಾತ್ರ ಡೇಟ್ ಬದಲಾಯಿಸಿಲ್ಲ. ಅದೇ ಡೇಟ್ ಗೆ ರಿಲೀಸ್ ಆಗ್ತಾ ಇದೆ. ಹಾಗಾದ್ರೆ ಟಾಕ್ಸಿಕ್ ಗೆ ಮಾತ್ರ ಯುದ್ಧದ ಬಿಸಿ ತಟ್ಟಿದ್ಯಾಕೆ ಅನ್ನೋ ಪ್ರಶ್ನೆ ಸಾಮಾನ್ಯವಾಗಿಯೇ ಎಲ್ಲರನ್ನ ಕಾಡುತ್ತೆ. ಅದಕ್ಕೂ ಬಹಳ ಮುಖ್ಯವಾದ ಕಾರಣವಿದೆ.

ಗಲ್ಫ್ ರಾಷ್ಟ್ರಗಳಲ್ಲಿ ‘ಧುರಂಧರ್ 2’ ಬಿಡುಗಡೆ ಆಗುತ್ತಿಲ್ಲ. ಕಳೆದ ವರ್ಷ ತೆರೆಕಂಡಿದ್ದ ‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ತಾಣ ಎಂದು ಬಿಂಬಿಸಿದ್ದರಿಂದ ಯುಎಇ, ಸೌದಿ ಅರೇಬಿಯಾ, ಖತಾರ್ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳು ಚಿತ್ರಕ್ಕೆ ನಿಷೇಧ ಹೇರಿದ್ದವು. ಸೀಕ್ವೆಲ್ ಮೇಲೂ ನಿಷೇಧ ಹೇರಲಾಗಿದೆ. ‘ಧುರಂಧರ್ 2’ ಕೂಡ ಮೊದಲ ಭಾಗದ ಕಥೆಯ ಮುಂದುವರಿದ ಭಾಗವಾಗಿದ್ದು, ಪಾಕಿಸ್ತಾನದ ಕುರಿತಾದ ಕಠಿಣ ನಿಲುವು ಹೊಂದಿರುವುದರಿಂದ ಇದು ಕೂಡ ಗಲ್ಫ್‌ನಲ್ಲಿ ಬಿಡುಗಡೆ ಆಗುವುದಿಲ್ಲ. ಹಾಗಾಗಿ ಅಲ್ಲಿನ ಯುದ್ಧದ ಪರಿಸ್ಥಿತಿ ಈ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಆದರೆ ಯಶ್ ವಿಚಾರ ಹಾಗಲ್ಲ. ಯಶ್ ಗೆ ದುಬೈನಲ್ಲೂ ಅಭಿಮಾನಿಗಳಿದ್ದಾರೆ. ಭಾರತೀಯ ಸಿನಿಮಾಗಳಿಗೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳು ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯು ಸಿನಿಮಾದ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರವನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now