Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾವು ಪ್ರತಿದಿನ ಬಳಸುವ ಕುಂಕುಮ ಎಲ್ಲಿಂದ ಬರುತ್ತದೆ ಗೊತ್ತಾ? ದೇಶದ ಬಹುತೇಕ ಕುಂಕುಮ ತಯಾರಾಗುವುದು ಈ ಒಂದೇ ಹಳ್ಳಿಯಲ್ಲಿ!

---Advertisement---

ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಪೂಜೆ, ಹಬ್ಬ, ಶುಭ ಸಮಾರಂಭಗಳು, ಮದುವೆ ಸೇರಿದಂತೆ ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲೂ ಕುಂಕುಮ ಅವಿಭಾಜ್ಯ ಅಂಗವಾಗಿದೆ. ಅಲ್ಲದೆ, ಅನೇಕ ಹಿಂದೂ ಮಹಿಳೆಯರು ಪ್ರತಿದಿನ ಹಣೆಯ ಮೇಲೆ ಕುಂಕುಮ ಧರಿಸುವ ಸಂಪ್ರದಾಯವನ್ನು ಇಂದಿಗೂ ಪಾಲಿಸುತ್ತಿದ್ದಾರೆ.

ಆದರೆ, ನಾವು ಪ್ರತಿನಿತ್ಯ ಬಳಸುವ ಈ ಕುಂಕುಮ ಎಲ್ಲಿಂದ ಬರುತ್ತದೆ ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಅಚ್ಚರಿಯ ಸಂಗತಿಯೆಂದರೆ, ದೇಶದಲ್ಲಿ ಬಳಕೆಯಾಗುವ ಬಹುತೇಕ ಕುಂಕುಮವನ್ನು ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿಯಲ್ಲೇ ತಯಾರಿಸಲಾಗುತ್ತದೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಾಲಾ ತಾಲ್ಲೂಕಿನ ‘ಕೈಮ್’ ಗ್ರಾಮವು ದೇಶದ ಕುಂಕುಮ ತಯಾರಿಕೆಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಕೇರಳ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಕುಂಕುಮ ಪೂರೈಕೆಯಾಗುತ್ತಿದೆ.
ಒಂದು ಕಾಲದಲ್ಲಿ ಈ ಗ್ರಾಮದಲ್ಲಿ ಪ್ರತಿದಿನ 70 ರಿಂದ 80 ಟನ್ ಕುಂಕುಮ ತಯಾರಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇತರೆ ಪ್ರದೇಶಗಳಲ್ಲೂ ಉತ್ಪಾದನೆ ಆರಂಭವಾದ ಪರಿಣಾಮ, ಈಗ ಪ್ರತಿದಿನ ಸುಮಾರು 40 ರಿಂದ 50 ಟನ್ ಕುಂಕುಮ ತಯಾರಿಸಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಗ್ರಾಮದ ಜನರಿಗೆ ಕುಂಕುಮ ತಯಾರಿಕೆ ಕೇವಲ ಉದ್ಯಮವಲ್ಲ, ಅದು ತಲೆಮಾರುಗಳಿಂದ ಬಂದಿರುವ ಒಂದು ಪರಂಪರೆ. ಸುಮಾರು 300 ವರ್ಷಗಳಿಂದ ಕುಟುಂಬದ ಸದಸ್ಯರು ಈ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.ಪ್ರಸ್ತುತ ಗ್ರಾಮದಲ್ಲಿ ಸುಮಾರು 20 ಕುಂಕುಮ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ನೂರಾರು ಕಾರ್ಮಿಕರಿಗೆ ಉದ್ಯೋಗ ಒದಗಿಸಿವೆ. ಕುಂಕುಮದ ಜೊತೆಗೆ ಗಂಧ ಹಾಗೂ ಅರಿಶಿನ ಉತ್ಪನ್ನಗಳನ್ನೂ ಇಲ್ಲಿ ತಯಾರಿಸಲಾಗುತ್ತದೆ.
ವಿಶೇಷವೆಂದರೆ, ಅಯೋಧ್ಯೆಯ ಶ್ರೀರಾಮ ಮಂದಿರ ಸೇರಿದಂತೆ ದೇಶದ ಹಲವು ಪ್ರಸಿದ್ಧ ದೇವಾಲಯಗಳಿಗೂ ಇಲ್ಲಿಂದಲೇ ಕುಂಕುಮ ಪೂರೈಕೆಯಾಗುತ್ತದೆ.ಕುಂಕುಮ ಉತ್ಪಾದನೆಯಿಂದಲೇ ಈ ಗ್ರಾಮದಲ್ಲಿ ವಾರ್ಷಿಕವಾಗಿ ಸುಮಾರು ₹200 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now