Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏರುತ್ತಿರುವ ಚಿನ್ನದ ದರ 2026ಕ್ಕೆ ಎಷ್ಟಾಗಲಿದೆ ಗೊತ್ತಾ..?

---Advertisement---

 

ಬೆಂಗಳೂರು: ಚಿನ್ನ ಕೊಂಡುಕೊಳ್ಳಬೇಕು ಎಂಬ ಮನಸ್ಸಿದ್ದರು ಅದೆಷ್ಟೋ ಜನರಿಗೆ ಎಟುಕದ ಎತ್ತರಕ್ಜೇರಿದೆ ಬಂಗಾರ. ನೋಡ ನೋಡುತ್ತಲೇ ಗಗನಮುಖಿಯಾದ ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಅದರಲ್ಲೂ ವರ್ಷದ ಕೊನೆಯ ತಿಂಗಳಲ್ಲೂ ಏರಿಕೆಯತ್ತಲೇ ಸಾಗಿರುವ ಚಿನ್ನದ ದರ 2026ಕ್ಕೆ ಎಷ್ಟಿರುತ್ತೆ ಎಂಬುದನ್ನ ತಜ್ಞರು ತಿಳಿಸಿದ್ದಾರೆ.

ಯಾರ್ದೇನಿ ರಿಸರ್ಚ್ ಸಂಸ್ಥೆಯ ಮುಖ್ಯಸ್ಥರಾದ ಎಡ್ ಯಾರ್ದೇನಿ ಅವರ ಪ್ರಕಾರ ಚಿನ್ನದ ಬೆಲೆ 2029ಕ್ಕೆ ಗ್ರಾಂಗೆ 31 ಸಾವಿರ ದಾಟಬಹುದು ಎಂಬ ಶಾಕಿಂಗ್ ವಿಚಾರವನ್ನ ತಿಳಿಸಿದ್ದಾರೆ. ಭಾರತದಲ್ಲಿ ಸದ್ಯಕ್ಕೆ ಒಂದು ಗ್ರಾಂಗೆ 13,500 ರೂಪಾಯಿ ಇದೆ. 2025ರಲ್ಲಿ ಚಿನ್ನದ ಬೆಲೆ ಶೇಕಡ 67ರಷ್ಟು ಹೆಚ್ಚಾಗಿದೆ. ಇತ್ತೀಚಿನ ಕೆಲ ವರ್ಷಗಳಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭವು ಸಿಗುತ್ತಾ ಬಂದಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವ ಕಾರಣ ಎಲ್ಲರ ಚಿತ್ತ ಚಿನ್ನದತ್ತಲೇ ನೆಟ್ಟಿದೆ. ಅಂದ್ರೆ ಹೂಡಿಕೆಯತ್ತ ನೆಟ್ಟಿದೆ.

ಅಮೆರಿಕದೊಂದಿಗೆ ಟ್ರೇಡ್ ಮಾಡಿಕೊಳ್ಳಲು ಯಶಸ್ವಿಯಾಗಿಬಿಟ್ಟರೆ ಭಾರತದ ಈಕ್ವಿಟಿ ಮಾರುಕಟ್ಟೆ ಹೊಸ ಎತ್ತರಕ್ಕೆ ಹೋಗುತ್ತದೆ ಎಂದು ಹೇಳುವ ಅವರು, ಭಾರತ ಹಾಗೂ ಚೀನಾ ಈ ಎರಡೂ ದೇಶಗಳ ಮಾರುಕಟ್ಟೆಗಳು ಉತ್ತಮ ಅವಕಾಶ ಕೊಡುತ್ತವೆ ಎಂದಿದ್ದಾರೆ. ಹಾಗೆಯೇ, ಅವರು ಆ ಎರಡು ದೇಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ಭಾರತಕ್ಕೇ ಆದ್ಯತೆ ಕೊಡುತ್ತಾರಂತೆ. ಹಲವು ವರ್ಷಗಳಿಂದ ಭಾರತದ ಮಾರುಕಟ್ಟೆ ಸಾಕಷ್ಟು ಪ್ರಬಕವಾಗಿದೆ ಎಂದೇ ಎಡ್ ಯಾರ್ದೇನಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿಯೇ ಹೂಡಿಕೆ ಮಾಡಲು ಅಥವಾ ಸಂಗ್ರಹಿಸಿಡುವುದಕ್ಕೆ ಚಿನ್ನ ಬೆಸ್ಟ್ ಅಂತಿದ್ದಾರೆ ಹಲವರು. ಚಿನ್ನದ ಬೆಲೆ ಜಾಸ್ತಿಯಾದರೂ ಚಿನ್ನದ ಮೇಲಿನ ಬೇಡಿಕೆ ಕಡಿಮೆಯಾದಂತೆ ಕಾಣಿಸುತ್ತಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now