Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸುದೀಪ್ ಬರ್ತ್ ಡೇಗೂ ಬರ್ಲಿಲ್ಲ ‘ಬಿಲ್ಲ ರಂಗ ಭಾಷಾ’ ಅಪ್ಡೇಟ್ ಕಾರಣ ಏನು ಗೊತ್ತಾ..?

---Advertisement---

ಇಂದು ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಸಂಭ್ರಮ. 50 ವಸಂತಕ್ಕೆ ಕಾಲಿಟ್ಟಿದ್ದಾರೆ. ರಾತ್ರಿಯಿಂದಾನೇ ಕಿಚ್ಚನ ಹುಟ್ಟುಹಬ್ಬದ ಆಚರಣೆ ನಡೆದಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಜೋರು ಸೆಲೆಬ್ರೇಷನ್ ಮಾಡಲಾಗಿದೆ. ಇಂದು ಬೆಳಗ್ಗೆಯಿಂದ ಕೂಡ ಕಿಚ್ಚನ ಮನೆ ಬಳಿ ಅಭಿಮಾನಿಗಳ ಸಾಲುಗಟ್ಟಿ‌ ನಿಂತು ಶುಭ ಹಾರೈಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ತಂಡಗಳು ವಿಶೆಷ ಗಿಫ್ಟ್ ನೀಡುತ್ತವೆ. ಈ ಬಾರಿ ಬಿಲ್ಲ ರಂಗ ಭಾಷಾ‌ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದ್ರೆ ಆ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ.

ಅನೂಪ್ ಬಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೂಡಿ ಬಂದಿತ್ತು. ಅದಾದ‌ ಮೇಲೆ ಇದೇ ಕಾಂಬಿನೇಷನ್ ನಲ್ಲಿ ಬಿಲ್ಲ ರಂಗ ಭಾಷಾ ಸಿನಿಮಾ ಬರುತ್ತೆ ಎಂಬ ವಿಚಾರ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಆದ್ರೆ ಅದರ ಅಪ್ಡೇಟ್ ಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ನಿರ್ದೇಶಕ ಅನೂಪ್ ಬಂಡಾರಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.


‘ನಾನು ನೀಡುವ ಅಪ್ಡೇಟ್ ಗಾಗಿ ನೀವೂ ಕಾಯುತ್ತಾ ಇದ್ದೀರಾ ಅಂತ ನನಗೆ ಗೊತ್ತು. ನಾನು ಕೂಡ ನಿಮ್ಮಂತೆ ಕುತೂಹಲ ಹೊಂದಿದ್ದೇನೆ. ಆದರೆ ಸುದೀಪ್ ನಟನೆಯ ಹಲವು ಸಿನಿಮಾಗಳು ನಡೆಯುತ್ತಿರುವುದರಿಂದ ನಮ್ಮ‌ ಸಿನಿಮಾದ ಅಪ್ಡೇಟ್ ಬೇಡ‌ ಎಂದು ನಮ್ಮ‌ ಸಿನಿಮಾ ತಂಡದವರು ನಿರ್ಧರಿಸಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...