Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯುತ್ ಬಿಲ್ ದಿಢೀರ್ ಹೆಚ್ಚಳಕ್ಕೆ ಕಾರಣವೇನು ಗೊತ್ತಾ..?

Facebook
Twitter
Telegram
WhatsApp

 

 

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಕೊಟ್ಟ ಮಾತಿನಂತೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವುದಕ್ಕೆ ಆದೇಶ ಹೊರಡಿಸಿದೆ‌. ಆದರೆ ಅದಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಆದರೆ ಅದಕ್ಕೂ ಮುನ್ನ ಈ ಬಾರಿಯ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. ಎಲ್ಲರಿಗೂ ಶಾಕಿಂಗ್ ಎನಿಸುವಷ್ಟು ವಿದ್ಯುತ್ ದರ ಬಂದಿದೆ. ವಿದ್ಯುತ್ ಫ್ರಿಯಾಗಿ ಕೊಡ್ತೀವಂತ ಹೇಳಿ ಸರ್ಕಾರವೇ ವಿದ್ಯುತ್ ದರ ಏರಿಕೆ ಮಾಡಿದೆ ಅನ್ನೋದು ಹಲವರ ಬೇಸರವಾಗಿದೆ. ಆದರೆ ವಿದ್ಯುತ್ ದರ ಏರಿಕೆಯಾಗುವುದಕ್ಕೆ ಕಾರಣ ಏನು ಅನ್ನೋದನ್ನ ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತೀ ವರ್ಷ ರಾಜ್ಯ ವಿದ್ಯುತ್ ದರ ನಿಯಂತ್ರಣ ಆಯೋಗ ದರ ಪರಿಷ್ಕರಣೆ ಮಾಡುತ್ತದೆ. ಇದಕ್ಕೆ ಎಲ್ಲಾ ಎಸ್ಕಾಂಗಳಿಂದ ಅರ್ಜಿ ಸಲ್ಲಿಸುತ್ತೇವೆ. ಅದರಂತೆ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ದರ ಪರಿಷ್ಕರಣೆ ಮಾಡಿದ್ದಾರೆ. ಹೀಗಾಗಿ ದರ ಹೆಚ್ಚಳ ಆಗಿದೆ. ಯೂನಿಟ್ ಗೆ 70 ಪೈಸೆ ಹೆಚ್ಚಳ ಆಗಿದೆ. 1 ರಿಂದ 100 ಯೂನಿಟ್ ವಿದ್ಯುತ್ ಬಳಕೆಗೆ 4 ರೂ .75 ಪೈಸೆ. 101 ಯೂನಿಟ್ ಮೇಲೆ ಬಂದರೆ 7 ರೂಪಾಯಿ ಮಾಡಲಾಗಿದೆ.

ಇನ್ನು ಈ ದರ ಏರಿಕೆಯನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಜೂನ್ ನಲ್ಲಿ ಬಿಲ್ ವಿತರಣೆ ಮಾಡಲಾಗಿದೆ. ಕೊಡುವಾಗ ಏಪ್ರಿಲ್ ಹಾಗೂ ಮೇ ಎರಡು ತಿಂಗಳ ಬಿಲ್ ಅನ್ನು ಒಟ್ಟಿಗೆ ಕೊಡಲಾಗಿದೆ. ಹೀಗಾಗಿ ಇಂತದ್ದೊಂದು ಸಮಸ್ಯೆ ಎದುರಾಗಿದೆ ಎನ್ನುತ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!