ಸಾಮಾನ್ಯವಾಗಿ ಸೀಸನ್ ನಲ್ಲಿ ಸಿಗುವ ಹಣ್ಣುಗಳನ್ನು ತಿಂದರೆ ದೇಹಕ್ಕೆ ತುಂಬಾ ಒಳ್ಳೆಯದು. ಪಪ್ಪಾಯ ಅಂತು ಎಲ್ಲಾ ಕಾಲಕ್ಕೂ ಸಿಗುತ್ತದೆ. ಹಲವರು ಪಪ್ಪಾಯ ಅಂದ್ರೆ ಮಾರು ದೂರ ಓಡುತ್ತಾರೆ. ಕೆಲವೊಂದಿಷ್ಟು ಮಂದಿ ಉಷ್ಣ ಅಂತ ತಿನ್ನೋದೆ ಇಲ್ಲ. ಆದರೆ ಈ ಪಪ್ಪಾಯ ತಿನ್ನೋದ್ರಿಂದ ಏನೆಲ್ಲಾ ಲಾಭವಿದೆ ಗೊತ್ತಾ. ಅದರಲ್ಲೂ ಮಾಗಿದ ಪಪ್ಪಾಯ ಹಲವು ಕಾಯಿಲೆಗಳಿಗೆ ರಾಮಬಾಣದಂತೆ. ಹಾಗಾದ್ರೆ ಮಾಗಿದ ಪಪ್ಪಾಯದಿಂದ ಏನೆಲ್ಲಾ ಲಾಭ ಇದೆ ಅನ್ನೋದನ್ನ ನೋಡೋಣಾ.

* ಸಾಕಷ್ಟು ಜನ ಜೀರ್ಣಶಕ್ತಿ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಅಂಥವರು ಖಾಲಿ ಹೊಟ್ಟೆಯಲ್ಲಿ ಮಾಗಿದ ಪಪ್ಪಾಯ ತಿನ್ನುವುದರಿಂದ ಜೀರ್ಣಕ್ರಿಯೆಗೆ ಮುಕ್ತಿಸಿಗಲಿದೆ. ಪಪ್ಪಾಯದಲ್ಲಿ ಹೆಚ್ವಿನ ಪ್ರಮಾಣದಲ್ಲಿ ಫೈಬರ್ ಅಂಶ ಅಡಗಿದೆ. ಇದರಿಂದ ಬರೀ ಜೀರ್ಣಶಕ್ತಿ ಮಾತ್ರವಲ್ಲ ಮಲಬದ್ದತೆಯ ಸಮಸ್ಯೆಗೂ ಪರಿಹಾರ ಸಿಗಲಿದೆ. ಕರುಳಿನ ಸಮಸ್ಯೆ ಇದ್ದರು ಬಗೆಹರಿಯಲಿದೆ.

* ಮನುಷ್ಯನಿಗೆ ಬಹಳ ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಯಾವುದೇ ಕಾಯಿಲೆಗಳು ಕುಗ್ಗಿಸುವುದಿಲ್ಲ. ಮಾಗಿದ ಪಪ್ಪಾಯದಲ್ಲಿ ವಿಟಮಿನ್ ಸಿ ಅತ್ಯುತ್ತಮವಾಗಿದೆ. ಇದು ರೊಇಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಹೆಚ್ಚಾದಷ್ಟು ಜ್ವರ, ಕೆಮ್ಮು, ನೆಗಡಿಯಂತಹ ರೋಗದ ವಿರುದ್ಧ ಹೋರಾಡುವ ಶಕ್ಯಿ ಸಿಗಲಿದೆ.
* ಮಾಗಿದ ಪಪ್ಪಾಯ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುವ ಪ್ರಮುಖ ಖನಿಜವಾಗಿದೆ.
* ಚರ್ಮದ ಕಾಂತಿಯನ್ನು ಪಪ್ಪಾಯ ಹೆಚ್ವಿಸುತ್ತದೆ. ವಿಟಮಿನ್ ಸಿ, ವಿಟಮಿನ್ ಎ ಈ ಪಪ್ಪಾಯದಲ್ಲಿದೆ. ಇವೆಲ್ಲಾ ಸೌಂದರ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹೀಗಾಗಿ ಪಪ್ಪಾಯವನ್ನು ಸೇವಿಸುವುದರಿಂದ ಸೌಂದರ್ಯವೂ ಹೆಚ್ಚಾಗಲಿದೆ. ನಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನವಿರುವ ಪಪ್ಪಾಯವನ್ನು ಪ್ರತಿದಿನ ಸೇವಿಸಿ.

