ಸಾಮಾನ್ಯವಾಗಿ ಆಯುರ್ವೇದದಲ್ಲಿ ನಮ್ಮ ನಡುವೆ ಸಿಗುವ ಮರ, ಗಿಡ, ಬಳ್ಳಿಗಳೇ ಔಷಧಗಳಾಗುತ್ತವೆ. ಅದರಲ್ಲಿರುವ ಔಷಧೀಯ ಗುಣಗಳನ್ನ ಆಯುರ್ವೇದದಲ್ಲಿ ಅರಿತಿರುತ್ತಾರೆ. ಅದರಲ್ಲಿ ಒಂದು ಬಿಲ್ವ ಪತ್ರೆ. ಸಾಮಾನ್ಯವಾಗಿ ಈ ಬಿಲ್ವ ಪತ್ರೆ ಎಲ್ಲರಿಗೂ ಗೊತ್ತು. ಶಿವನಿಗೆ ಇಷ್ಟವಾದಂತ ಪತ್ರೆ ಯಾಗಿರುವ ಕಾರಣ ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಆದರೆ ಇದರಲ್ಲೂ ಔಷಧೀಯ ಗುಣಗಳಿವೆ ಅನ್ನೋದು ನಿಮಗೆ ಗೊತ್ತಾ..?

ಹೌದು ಇದರಲ್ಲಿ ಕರುಳು ಶುದ್ಧ ಮಾಡುವ ಶಕ್ತಿ, ಹಾರ್ಟ್ ಬ್ಲಾಕೇಜ್ ತಡೆಯುವ ಸಾಮರ್ಥ್ಯ ಹಾಗೇ ಉಷ್ಣ ದೇಹ ಇರುವವರು ಇದನ್ನು ಉಪಯೋಗಿಸಿದರೆ ದೇಹ ತಂಪಾಗುತ್ತದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಆಯುರ್ವೇದದ ಪಂಡಿತರು ಹೇಳಿದ ಮಾಹಿತಿಯನ್ನು ಆಧರಿಸಿದ ಲೇಖನವಾಗಿದೆ. ಹಾಗಾದ್ರೆ ಈ ಬಿಲ್ವ ಪತ್ರೆಯನ್ನು ದೇಹದ ಆರೋಗ್ಯಕ್ಕಾಗಿ ಬಳಸುವುದು ಹೇಗೆ ಗೊತ್ತಾ..?

ಒಂದು ವೇಳೆ ನಿಮ್ಮ ಮನೆಯಲ್ಲಿ ಬಿಲ್ವ ಪತ್ರೆಯನ್ನು ದೇವರಿಗೆ ಅರ್ಪಿಸಿದ್ದರೆ, ಅದನ್ನು ಮಾರನೇ ದಿನ ಬಿಸಾಡಬೇಡಿ. ಬದಲಿಗೆ ಅದರಿಂದ ಪೌಡರ್ ಮಾಡಿಕೊಳ್ಳಿ. ಬಿಲ್ವ ಪತ್ರೆಯನ್ನು ಚೆನ್ನಾಗಿ ಒಣಗಿಸಿ. ಬಳಿಕ ಅದನ್ನು ಪುಡಿ ಮಾಡಿ ಶೇಖರಣೆ ಮಾಡಿಟ್ಟುಕೊಳ್ಳಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಆ ಪತ್ರೆಯ ಪೌಡರ್ ಹಾಕಿಕೊಂಡು ಒಂದು ಲೋಟ ನೀರು ಕುಡಿಯಿರಿ. ಇದರಿಂದ ಕರುಳು ಸ್ವಚ್ಛವಾಗುತ್ತದೆ. ಅಷ್ಟೇ ಅಲ್ಲ ಈ ಪೌಡರ್ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ, ದೃಷ್ಟಿಯ ಸಮಸ್ಯೆ ಕಳೆಯುತ್ತದೆ, ಮೆದುಳು ಆಕ್ಟೀವ್ ಆಗಿರುತ್ತದೆ. ಎಷ್ಟೋ ಜನ ಬಿಲ್ವ ಪತ್ರೆಯ ತಂಬುಳಿಯನ್ನು ಮಾಡಿ ಸೇವಿಸುತ್ತಾರೆ. ಎಲೆಯ ಪೌಡರ್ ಕುಡಿಯಲು ಕಷ್ಟ ಎನಿಸಿದರೆ ಈ ರೀತಿಯೂ ಮಾಡಬಹುದು.

