Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ವರ್ತೂರು ಸಂತೋಷ್ ಗೆ ಸಿಕ್ಕ ಹಣವೆಷ್ಟು ಗೊತ್ತಾ..?

---Advertisement---

ಬಿಗ್ ಬಾಸ್ ಸೀಸನ್ 10 ಶೋಗೆ ಇಂದು ತೆರೆಬೀಳುತ್ತಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಫಿನಾಲೆಗೆ ಆರು ಜನ ಎಂಟ್ರಿ ಕೊಟ್ಟಿದ್ದರು.‌ ಫಿನಾಲೆ ವೇದಿಕೆಯಲ್ಲಿ ಒಬ್ಬೊಬ್ಬರೇ ಔಟ್ ಆಗುತ್ತಿದ್ದಾರೆ. ಕಡೆಯಲ್ಲಿ ಸುದೀಪ್ ಅವರೊಂದಿಗೆ ಇಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಹೀಗಾಗಿ ಒಬ್ಬಿಬ್ಬರೇ ಔಟ್ ಆಗುತ್ತಿದ್ದು, ನಾಲ್ಕನೆ ಸದಸ್ಯನಾಗಿ ವರ್ತೂರು ಸಂತೋಷ್ ಔಟ್ ಆಗಿದ್ದಾರೆ.

ವರ್ತೂರು ಸಂತೋಷ್ ಹಳ್ಳಿಕಾರ್ ಹಸುಗಳ ಮೂಲಕ ಕ್ಯಾತಿ ಪಡೆದಿದ್ದರು. ಈಗ ಬಿಗ್ ಬಾಸ್ ಗೆ ಬಂದ ಮೇಲೆ ಅಲ್ಲಿಂದ ಬಂದ ಹಣದಲ್ಲಿ ಹಳ್ಳಿಕಾರ್ ತಳಿಗೆ ಇನ್ವೆಸ್ಟ್ ಮಾಡ್ತೀನಿ ಅಂತಾನೇ ಹೇಳಿದ್ದರು. ಹೀಗಾಗಿಯೇ ವರ್ತೂರು ಸಂತೋಷ್ ಸಾಕಷ್ಟು ಜನ ಬೆಂಬಲ ಸಿಕ್ಕಿತ್ತು. ಮನೆಯಲ್ಲಿರುವ ಕಲಾವಿದರಿಗೆ ಅಷ್ಟೊಂದು ವೋಟ್ಸ್ ಬಂದಿರಲಿಲ್ಲ. ಆದರೆ ವರ್ತೂರು ಸಂತೋಷ್ ಗೆ ಅಷ್ಟು ದೊಡ್ಡ ಮಟ್ಟಕ್ಕೆ ಬಂದಿತ್ತು.

ಫಿನಾಲೆ ವೇದಿಕೆಯಲ್ಲಿ ವರ್ತೂರು ಸಂತೋಷ್ ಐದನೇ ಕಂಟೆಸ್ಟೆಂಟ್ ಆಗಿ ಆದರೂ ಇದ್ದೇ ಇರುತ್ತಾರೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ಫಿನಾಲೆ ತನಕ ವರ್ತೂರು ಸಂತೋಷ್ ಬಂದಿದ್ದರು. ಈಗ ನಾಲ್ಕನೆ ಸದಸ್ಯನಾಗಿ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ವರ್ತೂರು ಸಂತೋಷ್ ಅವರಿಗೆ ಎರಡು ಲಕ್ಷ ಹಣ ಸಿಕ್ಕಿದೆ.

ಸುದೀಪ್ ಅವರು ಹೇಳಿದಂತೆ ಫಿನಾಲೆಗೆ ಬಂದವರು ಯಾರೇ ಹೋದರು ಅವರಿಗೆ ಗಿಫ್ಟ್ ಅಮೌಂಟ್ ಆಗಿ ಎಲ್ಲರಿಗೂ ಹಣ ಸಿಗಲಿದೆ ಎಂದಿದ್ದರು. ಆ ಮೂಲಕ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರಿಗೂ ತಲಾ ಎರಡು ಲಕ್ಷ ಹಣ ಸಿಕ್ಕಿದೆ. ಮೂರನೇ ಕಂಟೆಸ್ಟೆಂಟ್ ಆಗಿ ಬರುವವರಿಗೆ ಐದು ಲಕ್ಷ, ನಾಲ್ಕನೆ ಕಂಟೆಸ್ಟೆಂಟ್ ಗೆ ಏಳು ಲಕ್ಷ, ಐದನೇ ಕಂಟೆಸ್ಟೆಂಟ್ ಆಗಿ ಹೊರ ಬರುವವರಿಗೆ ಹತ್ತು ಲಕ್ಚ ಸಿಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...