ಮೈಸೂರು; ಮೂಡಾ ಹಗರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇನ್ನೇನು ಸಿಎಂ ಸಿದ್ದರಾಮಯ್ಯ ಖುರ್ಚಿಯನ್ನ ಕಳೆದುಕೊಂಡೆ ಬಿಡುತ್ತಾರೆ ಎಂಬಂತ ಸ್ಥಿತಿಯೂ ಬಂದಿತ್ತು. ಆದರೆ ಹೋಗ್ತಾ ಹೋಗ್ತಾ ತಣ್ಣಗಾಗಿತ್ತು. ಇದೀಗ ಮೂಡಾ ಪ್ರಕರಣದಿಂದ ಜಪ್ತಿಯಾದ ಆಸ್ತಿಯ ಬಗ್ಗೆ ಇಡಿ ಅಧಿಕೃತ ಮಾಹಿತಿಯನ್ನ ಪ್ರಕಟ ಮಾಡಿದೆ. ಏನಿಲ್ಲ ಅಂದ್ರು 400 ಕೋಟಿ ಆಸ್ತಿಯನ್ನ ಜಪ್ತಿ ಮಾಡಿದೆ.
ಮೂಡಾ ಹಗರಣದಲ್ಲಿ ಇಡಿ ಮತ್ತೆ 92 ಸೈಟ್ ಗಳನ್ನ ಜಪ್ತಿ ಮಾಡಿದೆ. ಈ ಸೈಟ್ ಗಳ ಮೌಲ್ಯವೇ ಬರೋಬ್ಬರಿ 100 ಕೋಟಿ ಎಂದು ಹೇಳಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 ಕಾಯ್ದೆಯ ಪ್ರಕಾರ ಸಿಎಂ ಸಿದ್ದರಾಮಯ್ಯ ಹಾಗೂ ಇತರರಿಗೆ ಸೇರಿದ 92 ಸೈಟ್ ಗಳನ್ನ ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕೃತವಾಗಿ ಟ್ವೀಟ್ ಮಾಡಿದೆ. ಈ ಮೊದಲು ಮೂಡಾ ಹಗರಣದಲ್ಲಿ ಇಡಿ 162 ಸೈಟ್ ಗಳನ್ನು ಜಪ್ತಿ ಮಾಡಿತ್ತು. 162 ಸೈಟ್ ಗಳ ಮಾರುಕಟ್ಟೆ ಮೌಲ್ಯ 300 ಕೋಟಿ ರೂಪಾಯಿ. ಈಗ 92 ಸೈಟ್ ಗಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂಪಾಯಿ. ಇದುವರೆಗೂ ಒಟ್ಟು 400 ಕೋಟಿ ರೂಪಾಯಿ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಿದ್ದೇವೆ ಎಂದು ಇಡಿ ಮಾಹಿತಿ ನೀಡಿದೆ.
ಮೂಡಾ ಹಗರಣದ ಪ್ರಕರಣ ಬೆಳಕಿಗೆ ಬಂದ ಬಳಿಕ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯ ವಲಯದಲ್ಲಂತೂ ಅಲ್ಲೋಲ ಕಲ್ಲೋಲವನ್ನ ಸೃಷ್ಟಿ ಮಾಡಿತ್ತು. ವಿರೋಧ ಪಕ್ಷಗಳೆಲ್ಲಾ ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿದ್ದರು. ರಾಜೀನಾಮೆಗೆ ಒತ್ತಡ ಹಾಕಿದ್ದರು. ಬಳಿಕ ಲೋಕಾಯುಕ್ತ ಪೊಲೀಸರಿಗೆ ತನಿಖೆಗೆ ವಹಿಸಲಾಗಿತ್ತು. ಇದೇ ಕೇಸನ್ನ ಇಡಿ ಕೂಡ ತನಿಖೆ ನಡೆಸಿತ್ತು. ಇದೀಗ ಇಡೊ ವಶಪಡಿಸಿಕೊಂಡ ಆಸ್ತಿಯ ಮೌಲ್ಯದ ಬಗ್ಗೆ ಟ್ಚೀಟ್ ಮಾಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










