ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ಶಾಸಕ ವೀರೇಂದ್ರ ಪಪ್ಪಿಗೆ ಸಂಬಂಧಿಸಿದಂತೆ ಮನೆ, ಕಚೇರಿ ಸೇರಿದಂತೆ ಒಟ್ಟು 31 ಕಡೆ ದಾಳಿ ನಡೆಸಿದೆ. ದಾಳಿ ವೇಳೆ ಅಪಾರ ಪ್ರಮಾಣದ ನಗದು, ಹಣ ಪತ್ತೆಯಾಗಿದೆ. ವೀರೇಂದ್ರ ಪಪ್ಪಿ ಮನೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇದರಲ್ಲಿ ಒಂದು ಕೋಟಿ ಹಣ ವಿದೇಶಿ ಕರೆನ್ಸಿ ಕೂಡ ಆಗಿದೆ. ಇಷ್ಟೇ ಅಲ್ಲದೇ ಆರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕೂಡ ಪತ್ತೆಯಾಗಿದೆ. ಇವೆಲ್ಲವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮನೆಯಲ್ಲಿ ಸಿಕ್ಕ 10 ಕೆಜಿ ಬೆಳ್ಳಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಬ್ಯಾಂಕ್ ಖಾತೆಗಳನ್ನೆಲ್ಲಾ ಪರಿಶೀಲನೆ ನಡೆಸಿದ್ದು, ವೀರೇಂದ್ರ ಪಪ್ಪಿ ಹಾಗೂ ಆತನ ಸೋದರರಿಗೆ ಸೇರಿದ ಒಟ್ಟು 17 ಬ್ಯಾಂಕ್ ಖಾತೆ, ಎರಡು ಬ್ಯಾಂಕ್ ಲಾಕರ್ ಗಳನ್ನು ಸೀಜ್ ಮಾಡಲಾಗಿದೆ. ತನಿಖೆ ವೇಳೆ ಸಿಕ್ಕ ಎಲ್ಲವನ್ನು ವಶಪಡಿಸಿಕೊಂಡು ಇಡಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.
ವೀರೇಂದ್ರ ಪಪ್ಪಿ ಸೋದರನ ಮಗ ಪೃಥ್ವಿ ದುಬೈನಲ್ಲಿ ಆನ್ಲೈನ್ ಗೇಮಿಂಗ್ ಬಿಸಿನೆಸ್ ಅನ್ನು ನಿರ್ವಹಿಸ್ತಾ ಇದ್ದರು ಎಂದು ಇಡಿ ಹೇಳಿದ್ದು, ಸಿಕ್ಕಿಂನ ಗ್ಯಾಂಗ್ಟಕ್ ನಲ್ಲಿ ಕ್ಯಾಸಿನೋ ಗಾಗಿ ಜಾಗ ಲೀಸ್ ಗೆ ಪಡೆಯಲು ವೀರೇಂದ್ರ ಪಪ್ಪಿ ಸಿಕ್ಕಿಂಗೆ ಹೋಗಿದ್ದರಂತೆ. ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿ ಅವರನ್ನ ಸಿಕ್ಕಿಂನಲ್ಲಿಯೇ ವಶಕ್ಕೆ ಪಡೆದಿದ್ದರು. ಅಲ್ಲಿಂದ ಟ್ರಾನ್ಸಿಟಿ ರಿಮ್ಯಾಂಡ್ ಪಡೆದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಇದೀಗ ಎಲ್ಲದರ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.










