ಮೊಳಕೆ ಬಂದ ತೆಂಗಿನಕಾಯಿ ದೇಹಕ್ಕೆ ಎಷ್ಟು ಲಾಭ ಗೊತ್ತಾ..?

1 Min Read

ನಮ್ಮ ಮನೆಯಲ್ಲಿಯೇ ನಮ್ಮ ರೋಗಗಳಿಗೆ ಮದ್ದು ಅಡಗಿರುತ್ತದೆ. ಆದರೆ ಅದನ್ನು ಗಮನಿಸಬೇಕು ಅಷ್ಟೆ. ಅದರಲ್ಲೂ ಮೊಳಕೆ ಬಂದ ತೆಂಗಿನ ಕಾಯಿ ಅಥವಾ ಮೊಂಗು ದೇಹಕ್ಕೆ ಹಲವಾರು ಉಪಯೋಗವನ್ನ ನೀಡುತ್ತದೆ. ಹೀಗಾಗಿ ತೆಂಗಿನಕಾಯಿಯಲ್ಲಿ ಮೊಳಕೆ ಬಂದಿರೋದು ಏನಾದರೂ ಸಿಕ್ಕಿದರೆ ಇನ್ಮೇಲೆ ಮರೆಯದೆ ತಿನ್ನಿ. ಅದರಿಂದ ದೇಹಕ್ಕೆ ಹಲವು ಲಾಭಗಳು ಇದಾವೆ. ಕೆಲವೊಂದು ಕಡೆ ಮೊಳಕೆ ಬಂದಿರುವ ತೆಂಗಿನಕಾಯಿಯನ್ನೇ ಮಾರಾಟ ಮಾಡುತ್ತಾರೆ. ಹಾಗಾದ್ರೆ ಇದರಿಂದ ಏನೆಲ್ಲಾ ಲಾಭಗಳಿದಾವೆ ಅನ್ನೋದನ್ನ ನೋಡೋಣಾ.

* ಈ ಮೊಳಕೆ ಬಂದಿರುವ ತೆಂಗಿನ ಕಾಯಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಶಕ್ತಿಯನ್ನು ನೀಡುತ್ತದೆ. ಏನರ್ಜಿ ಹೆಚ್ಚಾಗಿ ಸಿಗುವಂತೆ ಆಗುತ್ತದೆ.

* ಫೈಬರ್ ಕಂಟೆಂಟ್ ಹೇರಳವಾಗಿರುತ್ತದೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್‌ ಎಲ್ಲವೂ ಅಧಿಕವಾಗಿಯೇ ಸಿಗುತ್ತದೆ. ಹೀಗಾಗಿ ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಾ ಇರುವವರು ಇದನ್ನ ತಿನ್ನಬಹುದು.

* ಮನುಷ್ಯನಿಗೆ ಬಹಳ ಬೇಕಾಗಿರುವುದು ಇಮ್ಯುನಿಟಿ ಪವರ್. ರೀಗನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ. ಈ ಕಾಯಿಯಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ‌ ಮಾಡುವ ಅಂಶವಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದರಿಂದ ಹೆಚ್ಚಳವಾಗುತ್ತದೆ.

* ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್ ಗುಣಗಳು ಇರುವುದರಿಂದ ಬೇರೆ ಬೇರೆ ರೀತಿಯ ಸೋಂಕು ಆಗದಂತೆ ನಮ್ಮ ದೇಹವನ್ನು ಕಾಪಾಡುತ್ತದೆ.

* ಜೀರ್ಣಕ್ರಿಯೆ ಸಮಸ್ಯೆ ಇರುವವರು ಈ ತೆಂಗಿನಕಾಯಿ ಮೊಳಕೆ ಬಂದಿರುವುದನ್ನು ತಿನ್ನಬಹದು.

* ಕಿಡ್ನಿ ಸಮಸ್ಯೆ ಇರುವವರಿಗೂ ಇದು ಉಪಯೋಗಕಾರಿ. ಮೂತ್ರಪಿಂಡದಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಂಡರೆ ಅಂಥವರು ಇದಮ್ನ ತಿನ್ನುವುದರಿಂದ ಮೂತ್ರಪಿಂಡದ ಸೋಂಕಿಗೆ ಪರಿಹಾರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *