Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿಮ್ಮ ದೇಹದಲ್ಲಿ ಸಾಕಷ್ಟು ನೀರಿನಂಶ ಇದೆಯೇ ಅಥವಾ ಇಲವೇ ? ಎಂಬುದನ್ನು ತಿಳಿಯುವುದು ಹೇಗೆ ? 

Facebook
Twitter
Telegram
WhatsApp

ಸುದ್ದಿಒನ್

ನಮ್ಮ ದೇಹದಲ್ಲಿ ಸಾಕಷ್ಟು ನೀರು ಇದೆಯಾ..? ಆ ನೀರು ನಮ್ಮ ಆರೋಗ್ಯಕ್ಕೆ ಸಾಕಾಗುತ್ತದಾ ? ಅಥವಾ ಇಲ್ಲವಾ ಎಂಬುದನ್ನು ನಾವು ಅಗತ್ಯವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ದೇಹದಲ್ಲಿ ಶೇಕಡ 60 ರಷ್ಟು ನೀರು ಇರುತ್ತದೆ. ನೀರು ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆದರೆ, ದೇಹದಲ್ಲಿನ ನೀರಿನ ಮಟ್ಟ ಸರಿಯಾಗಿರದಿದ್ದರೆ ಅನೇಕ ಸಮಸ್ಯೆಗಳು ಎದುರಾಗಬಹುದು. ಆದರೂ ನಮ್ಮ ದೇಹಕ್ಕೆ ನೀರು ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ ? ಅದರ ವೈಶಿಷ್ಟ್ಯಗಳು ಮತ್ತು ಸಂಪೂರ್ಣ ವಿವರಗಳನ್ನು ಈಗ ತಿಳಿಯೋಣ.

ಲಕ್ಷಣಗಳು

ಆಗಾಗ್ಗೆ ಬಾಯಾರಿಕೆ
ಆಯಾಸ
ಬೆವರುವುದು
ವಾಕರಿಕೆ
ತಲೆತಿರುಗುವಿಕೆ
ಸ್ನಾಯು ಸೆಳೆತ
ಚರ್ಮದ ಮೇಲೆ ಬೆವರು ಇಲ್ಲದಿರುವುದು ನಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದರ ಪ್ರಮುಖ ಲಕ್ಷಣಗಳು.

ನಿತ್ಯ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಒಂದು ದಿನಕ್ಕೆ ಕನಿಷ್ಠ ಮೂರರಿಂದ ಆರು ಲೀಟರ್ ನೀರು ಅಗತ್ಯ. ಸಾಮಾನ್ಯವಾಗಿ ಗಂಡಸರಲ್ಲಿ ಮೂತ್ರದ ಮೂಲಕ ದಿನಕ್ಕೆ 1.5 ಲೀ. ಮತ್ತು ಹೆಂಗಸರಲ್ಲಿ 1.2 ಲೀ. ನೀರು ಹೊರಹೋಗುತ್ತದೆ. ಇಷ್ಟೇ ಅಲ್ಲದೇ ಬೆವರು ಮತ್ತಿತ್ತರ ಚಟುವಟಿಕೆಗಳ ಮೂಲಕ ಸುಮಾರು ಅರ್ಧ ಲೀಟರ್ ನಷ್ಟು ನೀರು ಹೊರಹೋಗುತ್ತದೆ. ಮತ್ತು ಆರೋಗ್ಯ ಮತ್ತು ದೇಹದ ಗಾತ್ರಕ್ಕನುಸಾರವಾಗಿ ನೀರು ಕುಡಿಯಬೇಕು.

ಸಾಕಷ್ಟು ನೀರು ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಮತ್ತು ಶಾಖದ ಹೊಡೆತ (Heat stroke) ಬರದಂತೆ ತಡೆಯುತ್ತದೆ. ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಚರ್ಮವು ನಿಜವಾಗಿಯೂ ಜಲ ಸಂಚಯನದಿಂದಿದೆಯೋ (ಹೈಡ್ರೇಟ್) ಅಥವಾ ಇಲ್ಲವೇ ಎಂಬುದನ್ನು ಸರಳ ಪರೀಕ್ಷೆಯು ಹೇಳಬಹುದು. ಈಗ ನೋಡೋಣ.

ದಿನಕ್ಕೆ ಎಷ್ಟು ನೀರು ಕುಡಿಯಬೇಕು

ನೀರಿನ ಕೊರತೆಯನ್ನು ಕೈಯ ಚರ್ಮದಿಂದ ಕಂಡುಹಿಡಿಯಬಹುದು. ನೀವು ಈ ಪರೀಕ್ಷೆಯಲ್ಲಿ ವಿಫಲರಾದರೆ, ನೀವು ನಿರ್ಜಲೀಕರಣದಿಂದ ಬಳಲುತ್ತಿದ್ದೀರಿ ಎಂದರ್ಥ. ಇದನ್ನು ಹೋಗಲಾಡಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಪರೀಕ್ಷೆಯನ್ನು ಮಾಡುವುದು ತುಂಬಾ ಸುಲಭ.

ನಿಮ್ಮ ಕೈಯ ಚರ್ಮವನ್ನು ಬಿಗಿಯಾಗಿ ಹಿಡಿದುಕೊಳ್ಳಿ. ತೋಳಿನ ಮೇಲೆ ಚರ್ಮವನ್ನು ಎರಡು ಬೆರಳುಗಳಿಂದ ಹಿಡಿದು ಮೇಲಕ್ಕೆ ಎಳೆಯಿರಿ. ವಿಸ್ತರಿಸಿದ ಚರ್ಮವು 2 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಅದರ ಮೂಲ ಸ್ಥಾನಕ್ಕೆ ಮರಳಿದರೆ, ದೇಹವು ಸಾಕಷ್ಟು ನೀರಿನಿಂದ ಕೂಡಿದೆ ಎಂದು, ಒಂದು ವೇಳೆ ಆ ಚರ್ಮವು ಮೂಲ ರೂಪಕ್ಕೆ ಬರದಿದ್ದರೆ ನಿರ್ಜಲೀಕರಣವಾದಂತೆ.

ಮೊದಲೇ ಹೇಳಿದಂತೆ, ನಿರ್ಜಲೀಕರಣವು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನಮ್ಮ ದೇಹದ ಕಾರ್ಯವೂ ತೊಂದರೆಗೊಳಗಾಗುತ್ತದೆ. ಇದನ್ನು ತಪ್ಪಿಸಲು, ನೀವು ಹೆಚ್ಚು ಹೆಚ್ಚು ನೀರು ಕುಡಿಯಬೇಕು.
ಇವುಗಳ ಜೊತೆಗೆ ಸೌತೆಕಾಯಿ, ಮೊಸರು, ಪಪ್ಪಾಯಿ ಮತ್ತು ನೀರಿನಂಶವಿರುವವುಗಳನ್ನು ಸೇವಿಸುವುದು ಒಳ್ಳೆಯದು.
ಇವುಗಳ ಜೊತೆಗೆ ನಿಂಬೆರಸ, ಎಳನೀರು, ಒಆರ್ ಎಸ್, ಸೂಪ್ ಮತ್ತು ಹಾಲು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು.
ಕೆಲಸ ಮಾಡುವಾಗ ಹಗುರವಾದ ಬಟ್ಟೆಗಳನ್ನು ಧರಿಸಿ.
ಆಲ್ಕೋಹಾಲ್, ಧೂಮಪಾನ ಮತ್ತು ಕೆಫೀನ್ ಸೇವನೆಯನ್ನು ಕಡಿಮೆ ಮಾಡಬೇಕು.

ಪ್ರಮುಖ ಸೂಚನೆ : ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ಮಾಹಿತಿಗಾಗಿ ಮಾತ್ರ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!