ಸಾಮಾನ್ಯವಾಗಿ ಸಾಕಷ್ಟು ಜನರಿಗೆ ಯುರಿನ್ ಇನ್ಫೆಕ್ಷನ್ ಸಮಸ್ಯೆ ಕಾಡುತ್ತದೆ. ಪಬ್ಲಿಕ್ ಟಾಯ್ಲೆಟ್ ಬಳಸಿದಾಗ ಅಥವಾ ಸ್ವಚ್ಚತೆ ಇಲ್ಲದ ವಾಶ್ ರೂಮ್ ಬಳಸಿದಾಗ ಇಂಥದ್ದೊಂದು ಸಮಸ್ಯೆ ಕಾಡಬಹುದು. ಅದರಲ್ಲೂ ಹೆಣ್ಣುಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ ಒಂದು ವೇಳೆ ಉರಿ ಮೂತ್ರದ ಸಮಸ್ಯೆ ಇದ್ದಲ್ಲಿ ಈ ಮನೆ ಮದ್ದನ್ನ ಟ್ರೈ ಮಾಡಿ, ಎಷ್ಟು ಬೇಗ ವಾಸಿಯಾಗುತ್ತದೆ ಎಂಬುದನ್ನ ನೋಡಿ.

ಮೊದಲು ಒಂದು ಚಮಚ ಬಾರ್ಲಿ ಪುಡಿಗೆ ಒಂದು ಲೋಟ ನೀರನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪವೂ ಗಂಟು ಇರಬಾರದು. ಬಳಿಕ ಚೆನ್ನಾಗಿ ಕುದಿಯಲು ಬಿಡಿ. ಗಂಟು ಆಗದಂತೆ ಕೈಯಾಡಿಸುತ್ತ, ಬೇಯಿಸಿ. ಚೆನ್ನಾಗಿ ಬೆಂದ ನಂತರ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದಕ್ಕೆ ಅರ್ಧ ಲೋಟ ಆಗುವಷ್ಟು ಮಜ್ಜಿಗೆಯನ್ನು ಬೆರೆಸಿ.

ಈ ರೀತಿ ಬಾರ್ಲಿ ಗಂಜಿ ಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳು ಸಿಗಲಿವೆ. ಉರಿಮೂತ್ರ ಮಾತ್ರವಲ್ಲ ಜೀರ್ಣಕ್ರಿಯೆಗೂ ಈ ಬಾರ್ಲಿ ಗಂಜಿ ಸಹಾಯವಾಗಲಿದೆ. ಪ್ರತಿ ದಿನ ಒಮ್ಮೆ ಈ ರೀತಿ ಬಾರ್ಲಿ ಗಂಜಿ ಮಾಡಿ ಕುಡಿಯುವುದು ದೇಹಕ್ಕೂ ತಂಪು. ಅದರಲ್ಲೂ ಯುರಿನ್ ಇನ್ಫೆಕ್ಷನ್ ಇರುವವರು ಇದನ್ನ ಟ್ರೈ ಮಾಡಲೇಬೇಕಾಗಿದೆ. ಜೊತೆಗೆ ಆರೋಗ್ಯಕ್ಕೂ ಸಾಕಷ್ಟು ಲಾಭವನ್ನು ಕೊಡುವಂತಹ ಗಂಜಿ ಇದಾಗಿದೆ. ಮಾಡುವುದಕ್ಕೂ ಸರಳ ವಿಧಾನವಾಗಿರುವ ಕಾರಣ, ಆರೋಗ್ಯದ ದೃಷ್ಟಿಯಿಂದ ಈ ಗಂಜಿ ಸೇವನೆ ಮಾಡಬಹುದು. ಅಷ್ಟೇ ಅಲ್ಲ ಈಗ ಬೇಸಿಗೆಯಾಗಿರುವ ಕಾರಣ ಬಾರ್ಲಿ ದೇಹಕ್ಕೆ ತಂಪು ಕೂಡ. ಮಜ್ಜಿಗೆಯೂ ತಂಪನ್ನ ನೀಡುತ್ತದೆ. ಹೀಗಾಗಿ ಏನೇನೋ ಟ್ರೈ ಮಾಡುವ ಬದಲು ಈ ಬಾರ್ಲಿ ಗಂಜಿ ಪ್ರಯತ್ನಿಸಿ.

