Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಿರುಪತಿ ದೇವಸ್ಥಾನದ ಬಾಗಿಲು ಹಾಕುವುದಿಲ್ಲ : ಅರ್ಚಕರ ಸ್ಪಷ್ಟನೆ

Facebook
Twitter
Telegram
WhatsApp

ಅಮರಾವತಿ: ತಿರುಪತಿ ತಿಮ್ಮಪ್ಪನ ದೇಗುಲವನ್ನು ಎಂಟು ತಿಂಗಳುಗಳ ಕಾಲ ಮುಚ್ಚಲಾಗುತ್ತದೆ ಎನ್ನಲಾಗುತ್ತಿತ್ತು. ಭಕ್ತಾಧಿಗಳೆಲ್ಲಾ ಆತಂಕದಲ್ಲಿದ್ದರು. ಎಂಟು ತಿಂಗಳುಗಳ ಕಾಲ ದೇವರ ದರ್ಶನವಿಲ್ಲದೆ ಇರುವುದು ಹೇಗೆ ಎಂಬ ಗೊಂದಲದಲ್ಲಿದ್ದರು. ಆದರೆ ಇದೀಗ ದೇವಸ್ಥಾನದ ಅರ್ಚಕರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಅರ್ಚಕರಾದ ವೇಣುಗೋಪಾಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಿಮ್ಮಪ್ಪನ ಮೂಲ ವಿರಾಟ ಮೂರ್ತಿಯ ದರ್ಶನ ಎಂದಿನಂತೆ ಇರಲಿದೆ. ಮಾರ್ಚ್ 1 ರಿಂದ ಚಿನ್ನದ ಲೇಪನ ಕಾರ್ಯ ಆರಂಭವಾಗಲಿದೆ. ಚಿನ್ನದ ಲೇಪನಕ್ಕೆ ಆರು ತಿಂಗಳು ಬೇಕಾಗುತ್ತದೆ. ಇದಕ್ಕೂ ಮುನ್ನ ದೇಗುಲದ ಪಕ್ಕದಲ್ಲಿಯೇ ಒಂದು ತಾತ್ಕಾಲಿಕ ದೇವಸ್ಥಾನವನ್ನು ನಿರ್ಮಿಸಿ, ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗುತ್ತಿತ್ತು. ಇದೀಗ ವಿರಾಟ ಮೂರ್ತಿ ದೇವರ ದರ್ಶನ ಭಾಗ್ಯದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಗರ್ಭಗುಡಿಯ ಬಾಗಿಲನ್ನು ಲೇಪನ ಮಾಡುವ ಸಂದರ್ಭದಲ್ಲಿ ಮುಚ್ಚಲಾಗುತ್ತದೆ. ಲೇಪನ ಕಾರ್ಯ ನಡೆಯುತ್ತಿದ್ದರು ವಿರಾಟ ಮೂರ್ತಿಯ ದರ್ಶನ ಭಾಗ್ಯ ಸಿಗಲಿದೆ ಎಂದಿದ್ದಾರೆ. ಭಕ್ತರು ಎಂದಿನಂತೆ ಬಂದು ದರ್ಶನ ಪಡೆದುಕೊಂಡು, ಪುನೀತರಾಗಬಹುದು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಂಸತ್ತಿಗೆ ಅನುಭವ ಮಂಟಪವೇ ಬುನಾದಿ : ಮಾಜಿ ಸಚಿವ ಎಚ್.ಆಂಜನೇಯ ಅಭಿಮತ

ಚಿತ್ರದುರ್ಗ, ಮೇ 10 : ಪ್ರಸ್ತುತ ರಾಜಕೀಯ ಕಾರಣಕ್ಕಾಗಿ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ, ದ್ವೇಷದ, ಸುಳ್ಳು ಭಾಷಣಗಳ ಪ್ರಭಾವಕ್ಕೆ ಸಂಪೂರ್ಣ ಕಡಿವಾಣ ಹಾಕಲು ಬಸವ ತತ್ತತ್ವೇ ಬ್ರಹ್ಮಾಸ್ತ್ರ ಆಗಿದೆ ಎಂದು

PM Modi: ಇವರು ನನ್ನನ್ನು ಜೀವಂತ ಸಮಾಧಿ ಮಾಡುತ್ತಾರೆ : ಪ್ರಧಾನಿ ನರೇಂದ್ರ ಮೋದಿ

ಸುದ್ದಿಒನ್ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. विकसित भारत के निर्माण के महायज्ञ में आहुति देने

ಹಿಂದೂಗಳ ಜನಸಂಖ್ಯೆ ಪ್ರಮಾಣ ಇಳಿಕೆ : ಸಮಾಜ ಮತ್ತು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು : ಪ್ರಹ್ಲಾದ್ ಜೋಶಿ

  ಹುಬ್ಬಳ್ಳಿ: ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಕೆಯಾಗಿದ್ದು ಮುಸ್ಲಿಂ ಸಮುದಾಯದ ಜನಸಂಖ್ಯೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವರದಿ ಆತಂಕಕಾರಿಯಾಗಿದೆ. ಇದನ್ನು ಸರ್ಕಾರ ಹಾಗೂ

error: Content is protected !!