ಬೆಂಗಳೂರು: ಅಶೋಕ್ ಗೆ, ಯಡಿಯೂರಪ್ಪ ಇಬ್ಬರಿಗೂ ನಮ್ಮ ಕಡೆ ಗಾದೆ ಮಾತಿದೆ. ಕಾಮಾಲೆ ರೋಗದವರಿಗೆಲ್ಲಾ ಹಳದಿಯೇ ಕಾಣುವುದಂತೆ. ಏನೇ ಆದರೂ ಎಲ್ಲವೂ ಕಾಂಗ್ರೆಸ್ ಮೇಲೆ ಹಾಕುವುದು ಅಂತ. ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅವರು ಪೊಲೀಸರ ಮೇಲೆ ಮನವಿ ಮೇಲೆ ಹೋಗಿ, ಗಾಡಿ ಮೇಲೆ ನಿಂತುಕೊಳ್ಳುವುದಕ್ಕೆ ಆಗುತ್ತಾ..? ಪೊಲೀಸ್ ಜೀಪ್ ಮೇಲೆ ನಿಂತು ಮೈಕ್ ಹಿಡಿದುಕೊಳ್ಳೋದಕ್ಕೆ ಆಗುತ್ತಾ..? ಯಾರ ಮೈಕ್, ಯಾರು ಕರೆದರು. ಅವರು ಶಾಂತಿ ಮಾಡಲಿಕ್ಕೆ ಮನವಿ ಮಾಡಲು ಹೋಗಿದ್ದರು. ಅವರಿಗು ಕಲ್ಲಲ್ಲಿ ಹೊಡೆದವರೆ, ಅವರಿಗೂ ಕೈ ಫ್ರಾಕ್ಚರ್ ಆಗಿದೆ. ಬೆನ್ನಿಗೆ ಏಟು ಬಿದ್ದಿದೆ, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ರು. ಹೊರಗೆ ಈಗ ಬಂದಿದ್ದಾರೆ.

ಕಾಂಗ್ರೆಸ್ ನವರು ಮಾಡಿದ್ದಾರೆ ಎಂದರೆ ಅರೆಸ್ಟಗ ಮಾಡಲಿ. ಪ್ರತಿಯೊಂದಕ್ಕು ಹೇಳುತ್ತಾರಲ್ಲ ಒದ್ದು ಒಳಗೆ ಹಾಕಬೇಕು ಅಂತ ಹಾಕಲಿ. ನಿನ್ನೆ ನಾನೇ ಪೊಲೀಸ್ ಕಮಿಷನರ್ ಬಳಿ ಹೋಗಿ ಭೇಟಿ ಮಾಡಿದ್ದೀನಿ, ವಾಸ್ತವಾಂಶ ಕೇಳಿದ್ದೀನಿ. ಮಾರೆಲ್ ಪೊಲೀಸರನ್ನ ಕೈಗೆ ತೆಗೆದುಕೊಂಡರೆ ನಾವ್ಯಾರು ಸಹಿಸಲ್ಲ. ಅದೇ ಸರ್ಕಾರದಲ್ಲಿ ಮಾರೆಲ್ ಪೊಲೀಸ್ ಮೊಟಕು ಮಾಡಿದ್ದರೆ ರಾಜ್ಯದಲ್ಲಿ ಇಂಥ ಸ್ಥಿತಿ ಬರುತ್ತಿರಲಿಲ್ಲ. ಅಶೋಕ್ ಮಾತನಾಡುತ್ತಾರೆ, ಯಡಿಯೂರಪ್ಪ ಅವರು ಮಾತನಾಡುತ್ತಾರೆ ಅಂತ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ. ಈ ರಾಜ್ಯದಲ್ಲಿ ಕಾನೂನು ಇದೆ. ಕಾನೂನು ಪ್ರಕಾರ ಮಾಡಲಿ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಯಾಕೆ ರಾಘವೇಂದ್ರ, ಈಶ್ವರಪ್ಪ ಮೇಲೆ ಕೇಸ್ ಹಾಕಲಿಲ್ಲ. ಸುಮ್ಮನೆ ನಮ್ಮ ಮೇಲೆಲ್ಲಾ ಕೇಸ್ ಹಾಕಿ ನಮ್ಮನ್ನೆಲ್ಲಾ ಜೈಲಿಗೆ ಕಳುಹಿಸಬೇಕೆಂದವ್ರೆ. ಇದು ಫಸ್ಟ್ ಡ್ಯೂಟಿ. ಮೊದಲು ತಮ್ಮ ಮೂತಿಯನ್ನು ಒರೆಸಿಕೊಳ್ಳಲಿ. ಸ್ವಾಮೀಜಿಯವರು ಬಹಳ ವಿಚಾರವಂತರಿದ್ದಾರೆ, ವಿದ್ಯಾವಂತರಿದ್ದಾರೆ, ಪ್ರಜ್ಞಾವಂತರಿದ್ದಾರೆ. ನಾನು ಕೂಡ ಸಾಕಷ್ಟು ಸ್ವಾಮೀಜಿಗಳ ಬಳಿ ಮಾತನಾಡಿದ್ದೀನಿ. ಅವರ ಹೆಸರನ್ನೆಲ್ಲಾ ಬಯಲು ಮಾಡಲು ಆಗಲ್ಲ ಎಂದಿದ್ದಾರೆ.


