ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪಕ್ಷದ ಘನತೆ, ಗೌರವವನ್ನ ಹೇಗೆ ಕಾಪಾಡಬೇಕು ಎಂಬುದು ಬಹಳ ಚೆನ್ನಾಗಿ ಗೊತ್ತು. ಅದರಲ್ಲೂ ತಮ್ಮ ಪಕ್ಷ, ತಮ್ಮ ಮುಖ್ಯಮಂತ್ರಿಗಳನ್ನ ವಿರೋಧ ಪಕ್ಷದ ನಾಯಕರ ಕೈಗಿಟ್ಟು ತಮಾಷೆ ನೋಡುವವರಲ್ಲ. ಸಿಎಂ ಆಗಬೇಕೆಂಬ ಆಸೆ ಇದೆ. ಆದರೂ ಮಾತಿನಲ್ಲಿ ಮುಖ್ಯಮಂತ್ರಿಗಳಿಗೆ ಗೌರವ ನೀಡುವ ಮಾತನ್ನೇ ಆಡ್ತಾರೆ. ರಾಜಕೀಯ ವಲಯದಲ್ಲಿ ಸಿಎಂ ಹುದ್ದೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹೀಗಿರುವಾಗಲೂ ಸಿಎಂ ಜೊತೆಗೆ ಖುಷಿ ಖುಷಿಯಾಗಿ ವೇದಿಕೆಯನ್ನು ಹಂಚಿಕೊಂಡಿದ್ದು, ವಿರೋಧಿ ಬಣಕ್ಕೆ ನಾವೆಲ್ಲ ಒಂದೇ ಎಂಬ ಸಂದೇಶವನ್ನ ಸಾರಿದ್ದಾರೆ.
ವಿಶ್ವ ಮೀನುಗಾರಿಕೆ ಮೇಳ 2025 ಕಾರ್ಯಕ್ರಮವನ್ನು ಹೆಬ್ಬಾಳದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಹಾಗೂ ಡಿಸಿಎಂ ಅತಿಥಿಗಳು ಎಂಬುದು ಮೊದಲೇ ನಿರ್ಧಾರವಾಗಿತ್ತು. ಆದರೆ ಕಳೆದ ಎರಡು ದಿನದಿಂದ ಡಿಕೆ ಶಿವಕುಮಾರ್ ಅವರು ಹೊರಗೆ ಬಂದಿರಲಿಲ್ಲ. ರಾಜಕೀಯ ಬೆಳವಣಿಗೆ ಏನೇನೋ ನಡೆಯುತ್ತಿತ್ತು. ಇದರ ನಡುವೆಯೂ ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಅವರು ನೇರವಾಗಿ ಹೋಗಿ ಆಹ್ವಾನಿಸಿದ್ದರು.
ಇಂದು ಸಿಎಂ ಸಿದ್ದರಾಮಯ್ಯ ಅವರಿದ್ದ ವೇದಿಕೆಗೆ ಡಿಕೆ ಶಿವಕುಮಾರ್ ಅವರು ಕೂಡ ಆಗಮಿಸಿದ್ದರು. ಇಬ್ಬರು ಒಂದೇ ವೇದಿಕೆಯಲ್ಲಿ ಕುಳಿತು ಒಂದಷ್ಟು ಪಿಸು ಧ್ವನಿಯಲ್ಲಿ ಚರ್ಚೆಯನ್ನು ಮಾಡಿದರು. ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಳ್ಳುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ರಾಜಕೀಯವನ್ನು ಹೊರತುಪಡಿಸಿದ ಇಬ್ಬರ ಅನ್ಯೋನ್ಯತೆ ವೇದಿಕೆ ಮೇಲೆ ಕಂಡಿದೆ. ಇದರಿಂದ ವಿರೋಧ ಪಕ್ಷಕ್ಕೂ ಸಂದೇಶ ಕೊಟ್ಟಂತೆ ಆಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











