ದಾವಣಗೆರೆ: ಇಂದು ಬಹಿರಂಗ ಪ್ರಚಾರಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತೆರೆ ಬಿದ್ದಿದೆ. ಡಿಕೆ ಶಿವಕುಮಾರ್ ದಾವಣಗೆರೆ ಅಖಾಡದಲ್ಲಿ ಕೊನೆಯದಾಗಿ ಪ್ರಚಾರ ಮಾಡಿದ್ದಾರೆ. ಆದರೆ ಈ ವೇಳೆ ಜಮೀರ್ ಖಾನ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಲ್ಲ ಎಂಬ ಮಾತನ್ನ ಹೇಳಿದ್ದಾರೆ.
ಬಹಳ ಜನ ಶಾಸಕರು, ನಾನು, ಹ್ಯಾರೀಸ್ ಅವರು ಇನ್ನು ಅನೇಕ ರಾಜಕಾರಣಿಗಳು ಪ್ರಚಾರ ಮಾಡಿದ್ದೇವೆ. ಪ್ರಿಯಾಂಕ ಖರ್ಗೆ, ಮೋಟಮ್ಮನವರು ಸೇರಿದಂತೆ ಇನ್ನು ಹಲವರು ಕೇರಳಗೆಲ್ಲಾ ಹೋಗಿದ್ದೆವು. ಪ್ರಚಾರ ಮಾಡಿ ಬಂದಿದ್ದೇವೆ. ಈ ಸಲ ಎರಡು ಕಡೆ ಬರುವ ಆತ್ಮವಿಶ್ವಾಸವಿದೆ. 10 ವರ್ಷ ಅವರ ಆಡಳಿತವನ್ನ ಜನ ದ್ವೇಷಿಸಿದ್ದಾರೆ. ಬಿಜೆಪಿ ಜೊತೆಗೆ ಅವರದ್ದು ಒಳ ಒಪ್ಪಂದ ಕೂಡ ನಡೆದಿದೆ. ನಾವೂ ಒಳ್ಳೆ ರೀತಿಯಲ್ಲಿ ಪ್ರಚಾರ ಮಾಡಿ ಬಂದಿದ್ದೇವೆ. ಅಲ್ಲಿ ಎಲ್ಲಾ ಪೊಲಿಟಿಕಲ್ ಪಾರ್ಟಿಯಲ್ಲೂ ಶಿಸ್ತಿದೆ. ಅವರಿಂದ ಕಲಿಯೋದು ಬಹಳಷ್ಟಿದೆ. ಕುಟುಂಬ ಸಭೆಗಳನ್ನು ಮಾಡ್ತಾರೆ ಎಂದು ಬೇರೆ ರಾಜ್ಯದ ಚುನಾವಣೆಗಳ ಬಗ್ಗೆ ತಿಳಿಸಿದ್ದಾರೆ.
ಇದೇ ವೇಳೆ ಬಾಗಲಕೋಟೆ ಹಾಗೂ ದಾವಣಗೆರೆಯ ಬೈ ಎಲೆಕ್ಷನ್ ಬಗ್ಗೆ ಮಾತನ್ನಾಡಿ, ಬಹಳ ಚೆನ್ನಾಗಿ ನಡೀತಾ ಇದೆ. ಎರಡು ಕಡೆಯೂ ಗೆದ್ದೆ ಗೆಲ್ಲುತ್ತೇವೆ. ಕೇಂದ್ರ ಸರ್ಕಾರದಿಂದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ಥರದ ರಿಲೀಫ್ ಇಲ್ಲ. ನಾವೂ ಮುಂದಾಲೋಚನೆಯಿಂದ ಐದು ಗ್ಯಾರಂಟಿಗಳನ್ನ ನೀಡಿರುವ ಕಾರಣ ಜನರಿಗೆ ಸ್ವಲ್ಪ ಸಮಾಧಾನದಿಂದ ಇದ್ದಂತೆ ಆಗಿದೆ ಎಂದಿದ್ದಾರೆ.

ಬೈ ಎಲೆಕ್ಷನ್ ಬಳಿಕ ನಾಯಕತ್ವ ಬದಲಾಗುತ್ತೆ ಅನ್ನೋ ಮಾತಿಗೆ 2028ರವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಜಮೀರ್ ಮಾತಿಗೆ, ನಿಮಗ್ಯಾಕೆ ಆ ಸಮಸ್ಯೆ. ಆ ಸಮಸ್ಯೆ ನೀವೂ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಕಾಲ ಅದಕ್ಕೆ ಉತ್ತರ ಕೊಡುತ್ತೆ. ನಾನು ಬೇರೆಯವರಿಗೆ ಉತ್ತರ ಕೊಡೋದಕ್ಕೆ ಆಗುತ್ತಾ ಎಂಬ ಮಾತನ್ನ ಹೇಳಿದ್ದಾರೆ.








