ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ. ಇನ್ನು ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ರಾಮನಗರದಲ್ಲಿ ಡಿಕೆ ಶಿವಕುಮಾರ್ ಭರ್ಜರಿ ಮತದಿಂದ ಗೆಲುವು ಸಾಧಿಸಿದ್ದಾರೆ.
ಈ ವೇಳೆ ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಡಿಕೆ ಶಿವಕುಮಾರ್, ಎಲ್ಲರಿಗೂ ನಮಸ್ಕಾರ. ಅಖಂಡ ಕರ್ನಾಟಕದ ಮಹಾಜನತೆಗೆ, ಅವರ ಎಲ್ಲಾ ಪಾದಗಳಿಗೆ ನನ್ನ ನಮಸ್ಕಾರ. ನಮ್ಮ ಮೇಲೆ ನಂಬಿಕೆ ಇಟ್ಟು ಬಹುಮತ ಕೊಟ್ಟಿದ್ದಾರೆ. ನಾನು ಸದ್ಯಕ್ಕೆ ಮಾತನಾಡುವುದಿಲ್ಲ. ನಮ್ಮ ಕಾರ್ಯಕರ್ತರು ಆಕ್ರೋಶದಲ್ಲಿದ್ದಾರೆ.
ನಮ್ಮ ಕಾರ್ಯಕರ್ತರೆಲ್ಲಾ ರಾಮನಗರದಲ್ಲಿ ಗಲಾಟೆ ಮಾಡ್ತಿದ್ದಾರೆ. ಅವರೇ ಬರಬೇಕು ಅಂತಿದ್ದಾರೆ. ಅಲ್ಲಿಗೆ ಹೋಗಿ ಬರ್ತೀನಿ. ನನ್ನ ದೇವಸ್ಥಾನ ಕಾಂಗ್ರೆಸ್ ಕಚೇರಿ. ಇಲ್ಲಿಗೆ ಬಂದು ನಿಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡ್ತೀನಿ ಎಂದಿದ್ದಾರೆ.
ಡಿಕೆಶಿ ಕಣ್ಣೀರು ಹಾಕಿದ್ದಾರೆ. ಜೈಲಿನಲ್ಲಿದ್ದ ದಿನವನ್ನು ನೆನೆದು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಸೇರಿದಂತೆ ತಮ್ಮೆಲ್ಲಾ ಎಂಎಲ್ಎ ಗಳನ್ನು ನೆನೆದಿದ್ದಾರೆ.