Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ಯಾಸ್ ಸಿಲಿಂಡರ್ ದರ ಏರಿಕೆಗೆ ಸಿಡಿದೆದ್ದ ಡಿಕೆಶಿ..!

---Advertisement---

 

ಬೆಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇದ್ದಕ್ಕಿದ್ದ ಹಾಗೇ 993 ರೂಪಾಯಿ ಏರಿಕೆಯಾಗಿದೆ.‌ ಇದರಿಂದ ಜನಸಾಮಾನ್ಯರಿಗೂ ಹೊರೆ. ಪ್ರತಿದಿನ ಆಟೋ ನಂಬಿಕೊಂಡು ಸಂಚಾರ ಮಾಡುವವರ ಜೇಬಿಗೆ ದೊಡ್ಡದಾಗಿಯೇ ಕತ್ತರಿ ಬೀಳಲಿದೆ. ಈ ಸಂಬಂಧ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ದೇಶದ ಎಲ್ಲಾ ಬಡಜನತೆಗೆ ಬಿಜೆಪಿ ಸರ್ಕಾರ ದ್ರೋಹ ಬಗೆಯುತ್ತಿದೆ. ಎಲೆಕ್ಷನ್ ಆಗ್ಲಿ ಅಂತ ಕಾಯ್ದುಕೊಂಡಿದ್ದರು. ವೋಟಿಂಗ್ ಮುಗಿದ ಕೂಡಲೇ ಎಲ್ಲಾ‌ ಬೆಲೆಯನ್ನು ಜಾಸ್ತಿ ಮಾಡುವುದಕ್ಕೆ ಸೂಚನೆ ಕೊಡುತ್ತಾ ಇದ್ದಾರೆ. ಇವತ್ತು ಹೊಟೇಲ್ ಗಳ ಮುಚ್ಚುವ ಪರಿಸ್ಥಿತಿ ಬಂದಿದೆ. ಸೌದೆ ಭಾಗ್ಯ ಕೊಡ್ತಾ ಇದ್ದಾರೆ. ಅರಣ್ಯ ಇಲಾಖೆ ಅವರು ಸೌದೆಯನ್ನು ತರೋದಕ್ಕೆ ಬಿಡಲ್ಲ. ಮೊದಲೆಲ್ಲಾ ಉಜ್ವಲ‌ ಕೊಡ್ತಾ ಇದ್ದೀವಿ ಅಂತ ಫೋಟೋ‌ ಹಾಕಿಸಿಕೊಂಡು ನಡೆಸಿದ್ರು. ಈಗ ಸಾವಿರಕ್ಕೂ ಹೆಚ್ಚು ರೂಪಾಯಿ ಆಗ್ತಾ ಇದೆ ಅಂದ್ರೆ ಜನ ಬದುಕೋದು ಹೇಗೆ.

ಇದನ್ನ ಗಮನದಲ್ಲಿಟ್ಟುಕೊಂಡೇ ನಾವೂ ಐದು ಗ್ಯಾರಂಟಿಯನ್ನ ಕೊಟ್ಟಿರೋದು. ನಮ್ಮ ರಾಜ್ಯದ ಒಂದೂವರೆ ಲಕ್ಷ ಜನರಿಗೆ, ಒಂದೂವರೆ ಕೋಟಿ ಕುಟುಂಬಗಳಿಗೆ ಸಹಾಯ ಮಾಡಲು ಹೊರಟಿದ್ದೇವೆ. ಈ ರೀತಿ ಮಾಡಿದ್ದು ಖಂಡನೀಯ. ನಾವೂ ಹೋರಾಟ‌ ಮುಂದುವರೆಸುತ್ತೇವೆ. ಅಶೋಕ್, ವಿಜಯೇಂದ್ರ ಯಾರೆಲ್ಲಾ ಬಿಜೆಪಿ ನಾಯಕರಿದ್ದಾರಲ್ಲ ಎಲ್ಲಾ ಬರೀ ಬೊಗಳೇ ನಾಯಕರು. ಬರೀ ಖಾಲಿ ಮಾತು, ಟೀಕೆ ಮಾತುಗಳೆ. ನಿಮಗೆ ಸಾಮಾನ್ಯ ಜನರು, ಕಾರ್ಮಿಕರು, ಬಡ ಜನರ ಮೇಲೆ ವಿಶ್ವಾಸ ಇದ್ದರೆ, ಅವರಿಗೆಲ್ಲಾ ಎಫೆಕ್ಟ್ ಆಗ್ತಾ ಇದೆ. ಇವತ್ತು ನೀವೆ ಧ್ವನಿ ಎತ್ತಿ. ಬೇರೆ ಎಲ್ಲದಕ್ಕೂ ಮಾತಾಡ್ತೀರಾ. ಹಾಗಾದ್ರೆ ಇದನ್ನ ನೀವೂ ಸಮರ್ಥಿಸಿಕೊಳ್ತಾ ಇದ್ದೀರಾ ಎಂಬ ಪ್ರಶ್ನೆ ಮಾಡ್ತಾ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...