Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಸಿಎಂ ಸಿದ್ದರಾಮಯ್ಯ ಎದುರೇ ಅಬ್ಬರಿಸಿದ ಡಿಕೆ ಶಿವಕುಮಾರ್ : ಸಿಎಂ ಖುರ್ಚಿ ಬಗ್ಗೆ ಏನಂದ್ರು..?

---Advertisement---

ಬೆಂಗಳೂರು; ಇಂಧನ ಇಲಾಖೆಯ ಕಾರ್ಯಕ್ರಮದಲ್ಲಿ ಇಂದು ಮುಂದಿನ ಸಿಎಂ ಘರ್ಜನೆ ಜೋರಾಗಿತ್ತು. ಅದರಲ್ಲೂ ಸಿಎಂ ಸಿದ್ದರಾಮಯ್ಯ ಎದುರೇ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಆಗುವ ಆಸೆಯನ್ನ ಜೋರಾಗಿಯೇ ಕೂಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಕೆ ಶಿವಕುಮಾರ್ ಬಣ ಅಂತ ಇದೆ. ಯಾವುದೇ ಕಾರ್ಯಕ್ರಮವಿರಲಿ ಆಯಾ ಅಭಿಮಾನಿಗಳು ಅವರ ಪರ ಘೋಷಣೆ ಕೂಗುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಮುಂದಿನ ಸಿಎಂ ಅಂತಾನೇ ಘೋಷಣೆ ಕೂಗುತ್ತಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಬರೀ ಡಿಕೆ ಡಿಕೆ ಎಂದು ಕೂಗೋದಲ್ಲ. ಮುಂದೆ ಮತ್ತೆ ಡಿಕೆ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಇದ್ದರು. ಅವರ ಮುಂದೆಯೇ ಅಬ್ಬರದ ಭಾಷಣ ಮಾಡಿದ್ದಾರೆ. ಸುಮ್ಮನೆ ಎಲ್ಲರೂ ಡಿಕೆ ಡಿಕೆ ಅನ್ನೋದಲ್ಲ. ನಾವೂ ನಿಮಗಮ ಪರವಾಗಿ ಕೆಲಸ ಮಾಡಿದ್ದೇವೆ. ನೀವೂ ನಮ್ಮ ಉಪಕಾರ ಸ್ಮರಣೆ ಮಾಡಬೇಕು. ಇಲ್ಲಿಗೆ ಬಂದು ಜ್ಯೋತಿ ಬೆಳಗಿಸಿ ಹೋಗುವುದಲ್ಲ. ಮುಂದೆ ಡಿಕೆಯನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಡಿಕೆ ಸರ್ಕಾರ ತರಬೇಕು ಎಂದರು.

2023ರಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗಲೇ ಸಿಎಂ ಆಗುವ ಆಕಾಂಕ್ಷೆಯನ್ನು ಡಿಕೆ ಶಿವಕುಮಾರ್ ವ್ಯಕ್ತಪಡಿಸಿದ್ದರು. ಬೇಡಿಕೆ ಕೂಡ ಇಟ್ಟಿದ್ದರು. ಆದರೆ ಹೈಕಮಾಂಡ್ ನಿಂದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಲಾಯ್ತು. ಈಗಲೂ ಸಿಎಂ ಖುರ್ಚಿಗಾಗಿ ಒಳಗೊಳಗೆ ಕಾದಾಟ ನಡೆಯುತ್ತಾ ಇದೆ.

Join WhatsApp

Join Now

Join Telegram

Join Now

Leave a Comment