ಬೆಂಗಳೂರು: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಈದ್ ಮಿಲಾದ್ ವೇಳೆ ನಡೆದ ಗಲಾಟೆ ಸಂಬಂಧ ಇನ್ನು ಪರಿಸ್ಥಿತಿ ಸಂಪೂರ್ಣವಾಗಿ ಸರಿಯಾಗಿಲ್ಲ. ಪೊಲೀಸರು ಕಾವಲಿದ್ದು, 144 ಸೆಕ್ಷನ್ ಕೂಡ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ಸತ್ಯ ಶೋಧನೆಗೆಂದು ಹೋಗಿದ್ದಾರೆ.
ನಿನ್ನೆ ಬಿಜೆಪಿ ನಾಯಕರ ತಂಡ ಸತ್ಯಶೋಧನೆಗೆಂದು ರಾಗಿಗುಡ್ಡಕ್ಕೆ ಭೇಟಿ ನೀಡಿತ್ತು. ಅಲ್ಲಿ ಹಲವರನ್ನು ಭೇಟಿ ಮಾಡಿ, ನಡೆದ ಘಟನೆಯ ಬಗ್ಗೆ ತಿಳಿಯುವುದಕ್ಕೆ ಪ್ರಯತ್ನಿಸಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯೇ ತಿರುಗೇಟು ನೀಡಿದ್ದರು. ಬಿಜೆಪಿ ನಾಯಕರು ಸತ್ಯಶೋಧನೆಗೆಂದು ಅಲ್ಲಿ ಹೋಗಿರುವುದು ಯಾಕೆಂದು ಹೇಳಿದ್ದರು. ಹಾಗೇ ಕಾನೂನು, ಪೊಲೀಸರು ಇಲ್ವಾ ಎಂದೇ ಉತ್ತರಿಸಿದ್ದರು. ಇದೀಗ ಬಿಜೆಪಿಗರ ಸತ್ಯಶೋಧನೆಯ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

‘ನಾವೂ ಸೂಜಿ ತರಹ ಕೆಲಸ ಮಾಡಿದರೆ, ಬಿಜೆಪಿ ನಾಯಕರು ಕತ್ತರಿ ರೀತಿ ಕೆಲಸ ಮಾಡುತ್ತಾರೆ. ಅವರ ಸತ್ಯಶೋಧಕ ಏನಿದೆ..? ಅವರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಾವೂ ಸಮಾಜವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಸೂಜಿಯ ರೀತಿ ಹೊಲಿಯುವ ಕೆಲಸ ಮಾಡಿದರೆ, ಅವರು ಕತ್ತಿ ಥರ ಒಡೆಯುವ ರೀತಿ ಕೆಲಸ ಮಾಡುತ್ತಿದ್ದಾರೆ. ಇದೆ ಬಿಜೆಪಿಗೂ ಕಾಂಗ್ರೆಸ್ ಗೂ ಇರುವ ವ್ಯತ್ಯಾಸ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








