ವೇದಿಕೆ ಮೇಲೆಯೇ ಹೊಸ ಪಠ್ಯ ಪುಸ್ತಕ ಹರಿದು ಆಕ್ರೋಶ ಹೊರಹಾಕಿದ ಡಿಕೆಶಿ..!

suddionenews
1 Min Read

 

ಬೆಂಗಳೂರು: ಇಂದು ನಗರದಲ್ಲಿ ಪಠ್ಯಪುಸ್ತಕ ಕುರಿತು ಬೃಹತ್ ಪ್ರತಿಭಟನೆಯೇ ನಡೆಯುತ್ತಿದೆ. ರಾಜ್ಯದ ಮೂಲೆ‌ಮೂಲೆಯಿಂದಲೂ ಸಾಕಷ್ಟು ಜನ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಕೂಡ ಜೊತೆಯಾಗಿದ್ದು, ಪಠ್ಯ ಪುಸ್ತಕ ಮಾಡಿದವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಷ್ಕರಣೆಗೊಂಡಿರುವ ಪುಸ್ತಕವನ್ನು ವೇದಿಕೆಯ ಮೇಲೆಯೇ ಹರಿದು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನಾನು ಇದನ್ನು ಸುಟ್ಟು ಹಾಕಬೇಕು ಎಂದು ಬಂದೆ‌. ಆದರೆ ವೇದಿಕೆ ಮೇಲೆ ಸುಡಲು ಆಗಲ್ಲ. ಹಾಗಾಗಿ ಹರಿದು ಹಾಕುತ್ತಿದ್ದೇನೆ ಎಂದಿದ್ದಾರೆ.

ನಾವು ವಿಧಾನಸಭೆಯಲ್ಲಿ ಮಾತಾಡಬೇಕು. ಆದರೆ ಸಮಯ ಬಂದಿಲ್ಲ. ಈ ಹೋರಾಟದ ಜೊತೆ ನಾವು ಇದ್ದೇವೆ ಎಂದು ಹೇಳಲು ಬಂದಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ಹೋರಾಟ ತಂದುಕೊಟ್ಟ ಪಕ್ಷದ ಪ್ರತಿನಿಧಿಯಾಗಿ ಬಂದಿದ್ದೇನೆ. ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯುವವರೆಗೂ ಹೋರಾಟ ಮಾಡ್ತೇವೆ. ಯಾರ್ಯಾರು ಈ ಹೋರಾಟ ಬುನಾದಿ ಹಾಕಿದ್ದೀರಿ ಅವರಿಗೆಲ್ಲಾ ಸಾಷ್ಟಾಂಗ ನಮಸ್ಕಾರ.

ಇದು ನಮ್ಮ ಆಚರಾ ವಿಚಾರ. ಬರಗೂರು ರಾಮಚಂದ್ರಪ್ಪ ಅವರ ಪಠ್ಯ ರಾಜ್ಯ ಸ್ವತ್ತು. ಬರಗೂರು ಪಠ್ಯಪುಸ್ತಕ ಅವತ್ತು ಯಾರು ಸಹ ವಿರೋಧ ಮಾಡಲಿಲ್ಲ. ಮುಂದೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತೆ. ಬಂದಾಗ ನೀವು ಮಾಡಿದ ಪರಿಷ್ಕರಣೆ ಕೆಳಗೆ ಇಳಿಸುತ್ತೇವೆ. ರಾಜಕಾರಣ ಬೇರೆ ರೀತಿ ವ್ಯಾಖ್ಯಾನ ಮಾಡ್ತೇವೆ‌. ನಾಡಿನ ಸಂಸ್ಕೃತಿ ಉಳಿಸಲು ಹೋರಾಟ ಮಾಡುತ್ತಿದ್ದೀರಿ. ನಂಜಾವದೂತ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಕನ್ನಡ ಭಾವುಟ ಹಾಕಿಕೊಂಡು ಕುಳಿತವರೇ.

ಕೆಲ ಸ್ವಾಮೀಜಿಗಳು ಮೈ ಮೇಲೆ ಎಣ್ಣೆ ಹಾಕಿಕೊಂಡು ಕುಳಿತವರೇ.ಮೂರು ಸಾವಿರಕ್ಕೂ ಹೆಚ್ಚು ಮಠಾದೀಶರು ಇದ್ದಾರೆ. ನಮ್ಮ ರಾಜಕಾರಣಕ್ಕೆ ನಿಮ್ಮ ಬೆಂಬಲ ಬೇಡ. ಆದರೆ ಎಲ್ಲಾ ಜಾತಿ, ಧರ್ಮಗಳಿಗೆ ಅಪಮಾನ ಆಗಿದೆ‌. ಹಳ್ಳಿ ಹಳ್ಳಿಯಲ್ಲು ಹೋರಾಟ ಮಾಡೋಣ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *