ಬೆಳಗಾವಿ : ಜಿಲ್ಲೆಯಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವ ಈಶ್ವರಪ್ಪ ಮೇಲೆ ಗರಂ ಆಗಿದ್ದಾರೆ. ಜೊತೆಗೆ ಅವರ ಪ್ರಶ್ನೆಗೆ ಅಷ್ಟೇ ಸಲೀಸಾಗಿ ತಿರುಗೇಟು ನೀಡಿದ್ದಾರೆ. ನೀವೂ ಕಳುಹಿಸಿದ್ದಕ್ಕಷ್ಟೆ ನಾನು ಜೈಲಿಗೋದೆ ಎಂದಿದ್ದಾರೆ.
ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರಚಾರದ ವೇಳೆ ಮಾತಾಡುವಾಗ ಡಿಕೆಶಿ ವಿರುದ್ಧ ಗುಡುಗಿದ್ದರು. ಏನು ತಪ್ಪು ಮಾಡಿ ತಿಹಾರ್ ಜೈಲಿಗೆ ಹೋಗಿದ್ರು..? ಹೆತ್ತ ತಾಯಿ ಕಣ್ಣೀರಿನ ಶಾಪ ಯಾರಿಗೆ ತಟ್ಟುತ್ತದೆ. ಆ ತಾಯಿಗೆ ಕಣ್ಣೀರು ಹಾಕಿಸಿದ್ದು ಯಾರ ತಪ್ಪು. ಡಿಕೆಶಿ ಬಂಡೆ ಯಿಂದ ಎಷ್ಟು ಹಣ ಮಾಡಿದ್ದಾರೆಂದು ಪ್ರಶ್ನಿಸಿದ್ದರು.
ಈಶ್ವರಪ್ಪ ಅವರ ಪ್ರಶ್ನೆಗೆಲ್ಲಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಳಗಾವಿಯಲ್ಲಿ ಉತ್ತರಿಸಿದ್ದು, ಜೈಲಿಗೆ ಯಾಕೆ ಹೋದಿರಿ ಅಂದ್ರೆ ನೀವೂ ಕಳುಹಿಸಿದ್ರಿ ಅದಕ್ಕೆ ನಾನು ಹೋದೆ. ನಿಮಗೆ ಸಪೋರ್ಟ್ ಮಾಡಲಿಲ್ಲ, ನಿಮ್ಮ ಜೊತೆ ಬರಲಿಲ್ಲ ಅಂತ ನೀವೂ ನನ್ನನ್ನ ತಿಹಾರ್ ಜೈಲಿಗೆ ಕಳುಹಿಸಿದ್ರಿ ಎಂದಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ಅವರ ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂಬ ಮಾತಿಗೂ ಚಾಟಿ ಏಟು ಕೊಟ್ಟಿರುವ ಡಿಕೆಶಿ, ಬಿಎಸ್ವೈಗೆ ಈಗ ಆಗಿರುವ ನೋವನ್ನ ಬಿಜೆಪಿ ಮೇಲೆ ಹೇರಲಾಗಲ್ಲ. ದುಃಖ, ದುಮ್ಮಾನ, ರೇಡ್, ಸ್ಥಾನ ಕಳೆದುಕೊಂಡ ನೋವು ಇವೆಲ್ಲವನ್ನು ಹೊರ ಹಾಕಬೇಕಲ್ಲವಾ. ಅದಕ್ಕೆ ನಾವೂ ಫ್ರೀಯಾಗಿದ್ದೀವಿ ಅಂತ ನಮ್ಮ ಮೇಲೆ ಹಾಕ್ತಿದ್ದಾರೆ ಎಂದಿದ್ದಾರೆ.