Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೈಲಿಗೆ ನೀವು ಕಳುಹಿಸಿದ್ರು ನಾನು ಹೋದೆ : ಡಿ ಕೆ ಶಿವಕುಮಾರ್

Facebook
Twitter
Telegram
WhatsApp

 

ಬೆಳಗಾವಿ : ಜಿಲ್ಲೆಯಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವ ಈಶ್ವರಪ್ಪ ಮೇಲೆ ಗರಂ ಆಗಿದ್ದಾರೆ. ಜೊತೆಗೆ ಅವರ ಪ್ರಶ್ನೆಗೆ ಅಷ್ಟೇ ಸಲೀಸಾಗಿ ತಿರುಗೇಟು ನೀಡಿದ್ದಾರೆ. ನೀವೂ ಕಳುಹಿಸಿದ್ದಕ್ಕಷ್ಟೆ ನಾನು ಜೈಲಿಗೋದೆ ಎಂದಿದ್ದಾರೆ.

ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರಚಾರದ ವೇಳೆ ಮಾತಾಡುವಾಗ ಡಿಕೆಶಿ ವಿರುದ್ಧ ಗುಡುಗಿದ್ದರು. ಏನು ತಪ್ಪು ಮಾಡಿ ತಿಹಾರ್ ಜೈಲಿಗೆ ಹೋಗಿದ್ರು..? ಹೆತ್ತ ತಾಯಿ ಕಣ್ಣೀರಿನ ಶಾಪ ಯಾರಿಗೆ ತಟ್ಟುತ್ತದೆ. ಆ ತಾಯಿಗೆ ಕಣ್ಣೀರು ಹಾಕಿಸಿದ್ದು ಯಾರ ತಪ್ಪು. ಡಿಕೆಶಿ ಬಂಡೆ ಯಿಂದ ಎಷ್ಟು ಹಣ ಮಾಡಿದ್ದಾರೆಂದು‌ ಪ್ರಶ್ನಿಸಿದ್ದರು.

ಈಶ್ವರಪ್ಪ ಅವರ ಪ್ರಶ್ನೆಗೆಲ್ಲಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಳಗಾವಿಯಲ್ಲಿ ಉತ್ತರಿಸಿದ್ದು, ಜೈಲಿಗೆ ಯಾಕೆ ಹೋದಿರಿ ಅಂದ್ರೆ ನೀವೂ ಕಳುಹಿಸಿದ್ರಿ ಅದಕ್ಕೆ ನಾನು ಹೋದೆ. ನಿಮಗೆ ಸಪೋರ್ಟ್ ಮಾಡಲಿಲ್ಲ, ನಿಮ್ಮ ಜೊತೆ ಬರಲಿಲ್ಲ ಅಂತ ನೀವೂ ನನ್ನನ್ನ ತಿಹಾರ್ ಜೈಲಿಗೆ ಕಳುಹಿಸಿದ್ರಿ ಎಂದಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ಅವರ ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂಬ ಮಾತಿಗೂ ಚಾಟಿ ಏಟು ಕೊಟ್ಟಿರುವ ಡಿಕೆಶಿ, ಬಿಎಸ್ವೈಗೆ ಈಗ ಆಗಿರುವ ನೋವನ್ನ ಬಿಜೆಪಿ ಮೇಲೆ ಹೇರಲಾಗಲ್ಲ. ದುಃಖ, ದುಮ್ಮಾನ, ರೇಡ್, ಸ್ಥಾನ ಕಳೆದುಕೊಂಡ ನೋವು ಇವೆಲ್ಲವನ್ನು ಹೊರ ಹಾಕಬೇಕಲ್ಲವಾ. ಅದಕ್ಕೆ ನಾವೂ ಫ್ರೀಯಾಗಿದ್ದೀವಿ ಅಂತ ನಮ್ಮ‌ ಮೇಲೆ ಹಾಕ್ತಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಪ್ರಕರಣ : ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲದೆ ಇದ್ದರೆ ಸಿಬಿಐಗೆ ವಹಿಸಲಿ ಎಂದ ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷಗಟು ಹೋರಾಟಗಳು ನಡೆದಿವೆ. ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಕೇಳಿವೆ. ಇದೀಗ ಮಾಜಿ ಸಿಎಂ

ಚಿತ್ರದುರ್ಗ ಸೇರಿದಂತೆ 11 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ

ಬೆಂಗಳೂರು: ಬಿರು ಬೇಸಿಗೆಯಿಂದ ಬೇಯುತ್ತಿದ್ದ ಜನರಿಗೆ ವರುಣರಾಯ ಹಂಗ್ ಬಂದು ಹಿಂಗ್ ತಂಪೆರೆದು ಹೋಗಿದ್ದ. ಇನ್ನು ಮಳೆಯಾಗಲಿದೆ ಎಂದುಕೊಳ್ಳುವಾಗಲೇ ಒಣ ಹವೆ ಜಾಸ್ತಿಯಾಗಿತ್ತು. ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಲೆ ಇತ್ತು. ಇದೀಗ ಮತ್ತೆ ಮಳೆಯಾಗುವ

ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ ಅವರೇ ಇಂದು ಮತ ಚಲಾಯಿಸಿಲ್ಲ : ಕಾರಣವೇನು ಗೊತ್ತಾ..?

ಚಿತ್ರದುರ್ಗ: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮತದಾರರೆಲ್ಲಾ ಬಹಳ ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ. ಆದರೆ ಕೆಲ ಅಭ್ಯರ್ಥಿಗಳು ತಮ್ಮ ಮತವನ್ನು ತಾವೇ

error: Content is protected !!