Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಮ್ಮೆ‌ ವಿಚಾರಕ್ಕೆ 2.5 ಲಕ್ಷ ಕಳೆದುಕೊಂಡ ನಿರ್ದೇಶಕ ಜೋಗಿ ಪ್ರೇಮ್..!

---Advertisement---

ಬೆಂಗಳೂರು: ಮೋಸ ಮಾಡುವವರು ಹೇಗೆ ಬೇಕಾದ್ರೂ ಮೋಸ ಮಾಡ್ತಾರೆ. ಮೋಸ ಹೋಗುವವರು ಎಲ್ಲವೂ ಗೊತ್ತಿದ್ದರು ಒಂದು ಕ್ಷಣ ಯಾಮಾರಿ ಬಿಡ್ತಾರೆ. ಇದು ದೊಡ್ಡ ದುರಂತವೇ ಸರಿ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಸ್ಯಾಂಡಲ್ ವುಡ್ ನಿರ್ದೇಶಕ ಪ್ರೇಮ್. ಗುರುತು, ಪರಿಚಯವೇ ಇಲ್ಲದ ವ್ಯಕ್ತಿಯನ್ನು ನಂಬಿ ಎರಡೂವರೆ ಲಕ್ಷವನ್ನ ಕಳೆದುಕೊಂಡಿದ್ದಾರೆ. ಈ ಬಗ್ಗೆ ಇದೀಗ ದೂರನ್ನು ದಾಖಲಿಸಿದ್ದಾರೆ.

ನಿರ್ದೇಶಕ ಪ್ರೇಮ್ ಸಿನಿಮಾದ ಜೊತೆ ಜೊತೆಗೆ ಹೈನುಗಾರಿಕೆಯಲ್ಲೂ ಬ್ಯುಸಿಯಾಗಿದ್ದಾರೆ. ತೋಟ ಮಾಡಿದ್ದು, ವೆರೈಟಿ ವೆರೈಟಿ ಬೆಳೆ ಬೆಳೆಯುವುದರ ಜೊತೆಗೆ ಪ್ರಾಣಿಗಳನ್ನ ಕೂಡ ಸಾಕಿ ಸಲಹುತ್ತಿದ್ದಾರೆ. ಇದೀಗ ಎರಡು ಎಮ್ಮೆಗಳು ಬೇಕು ಎಂಬ ಕಾರಣಕ್ಕೆ ಈ ರೀತಿಯ ಮೋಸ ಹೋಗಿದ್ದಾರೆ. ಗುಜರಾತ್ ಮೂಲದ ವನರಾಜ್ ಭಾಯ್ ಎನ್ನುವವರ ಜೊತೆಗೆ ಮಾತನಾಡಿದ್ದರು. ಮಾತುಕತೆ ಎಲ್ಲಾ ಒಕೆ ಆದ ಮೇಲೆ ಮುಂಗಡವಾಗಿ ವನರಾಜ್ ಅವರಿಗೆ 25 ಸಾವಿರ ಹಣವನ್ನು ನೀಡಿದ್ದರು. ಈ ಸಂದರ್ಭದಲ್ಲಿ ಆಸಾಮಿ ಸಂಪೂರ್ಣವಾಗಿ ತನ್ನ ಅಡ್ರೆಸ್ ಅನ್ನು ನಕಲಿ ಮಾಡಿ ಕೊಟ್ಟಿದ್ದಾನೆ. ಆದರೆ ಆ ನಾಟಕ ಯಾವುದು ಪ್ರೇಮ್ ಅವರಿಗೆ ಅರ್ಥವಾಗಿಲ್ಲ.

ಅಡ್ವಾನ್ಸ್ ಹಣ ಬಂದ ಕೂಡಲೇ ವಾಟ್ಸಾಪ್ ಮೂಲಕ ತಮ್ಮ ಬಳಿ ಇರುವ ಎಮ್ಮೆಯ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಅದನ್ನ ನಂಬಿ ಎಲ್ಲಾ ಹಣವನ್ನು ಅಂದ್ರೆ ಮಾತುಕತೆಯಾಗಿದ್ದ ಎರಡೂವರೆ ಲಕ್ಷ ಹಣವನ್ನು ಆತನ ಅಕೌಂಟ್ ಗೆ ಹಂತ ಹಂತವಾಗಿ ಕಳುಹಿಸಿದ್ದಾರೆ. ಹಣವೆಲ್ಲಾ ಸೆಟಲ್ ಆದ್ಮೇಲೆ ಅ ಅವ್ಯಕ್ತಿ ನಾಪತ್ತೆಯಾಗಿದ್ದಾನೆ. ಹಣವೂ ಇಲ್ಲ, ಎಮ್ಮೆಯೂ ಇಲ್ಲ ಎಂಬಂಥ ಸ್ಥಿತಿ ಪ್ರೇಮ್ ಅವರದ್ದು. ಈ ಸಂಬಂಧ ಎಲ್ಲಾ ದಾಖಲೆಗಳನ್ನು ನೀಡಿ ದೂರು ದಾಖಲಿಸಲಾಗಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಬೆಳಗ್ಗೆ ಆದ್ರೆ ಇಂಥ ಮೋಸಗಳನ್ನ ನೋಡ್ತಾ ಇರ್ತಾರೆ‌. ಆದ್ರೆ ಗುರುತು ಪರಿಚಯವೆರ ಇಲ್ಲದ ವ್ಯಕ್ತಿಗೆ ಎಲ್ಲಾ ಹಣವನ್ನು ಹಾಕುವುದು ಯಾವ ನಂಬಿಕೆ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment