Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಕ್ಷಿತಾ ಶೆಟ್ಟಿ ಕಲಾವಿದರಿಗೆ ಅವಮಾನ ಮಾಡಿದ್ರಾ..? ಕಿಚ್ಚನ ಉತ್ತರಕ್ಕೆ ಬಂತು ವೀಕ್ಷಕರ ಚಪ್ಪಾಳೆ

---Advertisement---

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾನ ಟಾರ್ಗೆಟ್ ಮಾಡುತ್ತಿರುವವರು ಕಡಿಮೆ ಏನು ಅಲ್ಲ. ಅಶ್ವಿನಿ, ಕಾಕ್ರೋಚ್, ಜಾಹ್ನವಿ, ರಾಶಿಕಾ ಈಗ ಧ್ರುವಂತ್. ಇದೆಲ್ಲದರ ನಡುವೆ ಮನೆಯೊಳಗೆ ಒಂದು ಪದ ಓಡಾಡ್ತಾ ಇರೋದು ಕಲಾವಿದರಿಗೆ ಅವಮಾನ ಮಾಡಿದರು ಎಂದು. ಹಾಗಾದ್ರೆ ರಕ್ಷಿತಾ ನಿಜಕ್ಕೂ ಕಲಾವಿದರಿಗೆ ಅವಮಾನ ಮಾಡಿದ್ರಾ ಅಥವಾ ಕಲಾವಿದರಿಗೆ ಅವಮಾನ ಮಾಡಿದೆ ಅಂತ ಹೇಳಿ ಹೇಳಿ ರಕ್ಷಿತಾನ ಹೊರಗಡೆ ನೋಡುವ ಜನರ ದೃಷ್ಟಿಯಲ್ಲಿ ಕೆಟ್ಟವಳನ್ನಾಗಿ ಮಾಡಬೇಕು ಅಂತಾನಾ..? ಇದಕ್ಕೆಲ್ಲಾ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ ನೋಡಿ.

ಈ ಕಲಾವಿದರಿಗೆ ಅವಮಾನ ಮಾಡಿದೆ, ಚಪ್ಪಲಿ ತೋರಿಸಿದೆ ಎಂಬ ಮಾತೆಲ್ಲ ಕಳೆದ 15 ದಿನದಿಂದ ಅಶ್ವಿನಿ ಬಳಕೆ ಮಾಡುತ್ತಿರುವ ಸಾಲು. ಕಳೆದ ಪಂಚಾಯ್ತಿಯಲ್ಲಿಯೇ ಕಿಚ್ಚ ಇದಕ್ಕೆ ಉತ್ತರ ಕೊಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದು ಆಗಲಿಲ್ಲ. ಈಗ ಮತ್ತೆ ಈ ವಾರವೂ ಅಶ್ವಿನಿ ಅವರಿಂದ ಅದೇ ಸಾಲು ಓಡಾಡುತ್ತಿದೆ. ಅದಕ್ಕೆ ಈ ವಾರ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆ ವಿಚಾರದ ಬಗ್ಗೆ ಕಿಚ್ಚ ಕೇಳಿದಾಗ ಅಶ್ವಿನಿ ಅವರು ಉತ್ತರ ನೀಡಿದ್ದು, ಇದು ನಾಟಕ ಅಂತ ಹೇಳಿಕೊಂಡು ಚಪ್ಪಲಿ ತೋರಿಸ್ತಾ ಇದ್ದೀಯಾ ಅಂದ್ರೆ ನೀನು ಯಾರಿಗೆ ಹೇಳ್ತಾ ಇದ್ದೀಯಾ ಎಂಬ ಮಾತನ್ನ ಅಶ್ವಿನಿ ಹೇಳಿದಾಗ ಅಂದು ರಕ್ಷಿತಾ ಜೊತೆಗಿನ ಮಾತನ್ನು ಪ್ಲೇ ಮಾಡಿದ್ದಾರೆ. ಆಗ ಸುದೀಪ್, ಕಲಾವಿದರಿಗೆ ಚಪ್ಪಲಿ ತೋರಿಸಿದರಾ..? ನಾವೂ ರಾಂಗ್ ಆಗಿ ಹೇಳಿದಾಗ ಯಾರ್ ಯಾರೋ ಎದ್ಬಿಟ್ಟು ಕಲಾವಿದರಿಗೆ ಹೇಳಿದ್ರಂತೆ ಎಂಬ ಮಾತು ಬರುತ್ತೆ. ಯಾಕ್ ಮೇಡಂ ಈ ಕಾರ್ಯಕ್ರಮ ನಡೆಸಿಕೊಡುತ್ತಿರುವ ನಾನೊಬ್ಬ ಕಲಾವಿದ ಅಲ್ವಾ. ಕರ್ನಾಟಕದ ಪ್ರತಿ ಕಲಾವಿದರಿಗೆ ನಾನು ಉತ್ತರ ಕೊಡಬೇಕಿತ್ತು ಇದು ರಾಂಗ್ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now