ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಶಿವಮೊಗ್ಗ; ಮುಸ್ಲಿಮರಿಗೆ ವಸತಿ ಯೋಜನೆಯಲ್ಲಿ ಮೀಸಲಾತಿ ವಿಚಾರ ಈಗ ರಾಜ್ಯದಲ್ಲಿ ಜೋರು ಚರ್ಚೆಯಲ್ಲಿದೆ. ಈ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಇವತ್ತಲ್ಲ ನಾಳೆ ದೇಶದಲ್ಲಿ, ಕರ್ನಾಟಕ ಬಿಡಿ ಅನೇಕ ರಾಜ್ಯದಲ್ಲಿ ಕಾಂಗ್ರೆಸ್ ಬಿಟ್ಟು ಭಾರತೀಯ ಜನತಾ ಪಾರ್ಟಿಗೆ ಮುಸಲ್ಮಾನರು ವೋಟ್ ಹಾಕಿದ್ದಾರೆ ತಾನೆ. ನರೇಂದ್ರ ಮೋದಿಜೀ ಜಿಂದಾಬಾದ್ ಅಂತ ಕೂಗ್ತಾರೆ ತಾನೇ, ಬಿಜೆಪಿ ಬಾವುಟ ಇಡ್ಕೊಂಡು ಹೋಗ್ತಾರೆ ತಾನೇ. ಅದಕ್ಕೋಸ್ಕರ ಹೇಳ್ತಾ ಇರೋದು. ಯಾರೂ ಅಧಿಕಾರಕ್ಕೆ ಬರ್ತಾರೆ ಅಂತ ಗೊತ್ತಾಗುತ್ತೊ ಅವರ ಕಡೆಗೆ ಮುಸಲ್ಮಾನರು ತಿರುಗುತ್ತಾರೆ. ಅಧಿಕಾರ ಇರೋ ಕಡೆ ಮುಸಲ್ಮಾನರು ಹೋಗ್ತಾರೆ.
ಹೀಗಾಗಿ ನಾವೂ ಅಧಿಕಾರದಲ್ಲಿ ಇರೋದು ನಾವೂ, ನಾವೇ ಮುಸಲ್ಮಾನರ ಪರ ಹೋಗಿಬಿಟ್ಟರೆ ರಗಳೆ ಇರಲ್ಲ ಅಂತ ಕಾಂಗ್ರೆಸ್ ನವರು ನೇರ ಮುಸಲ್ಮಾನರಿಗೆ ಬೆಂಬಲ ಕಿಟ್ಟುಕೊಂಡು ಹೋಗ್ತಿದ್ದಾರೆ. ಪ್ರಹ್ಲಾದ್ ಜೋಶಿ ಅವರು ಹೇಳಿದ್ದನ್ನ ನಾನು ಪೇಪರ್ ನಲ್ಲಿ ಓದಿದ್ದೀನಿ. ಕೇಂದ್ರ ಸಚಿವರು, ಜವಾಬ್ದಾರಿ ಇರುವವರು, ಎಲ್ಲಿ ಆ ರೀತಿ ಹೇಳಿಕೆ ಬಂದಿದೆ ಅದನ್ನ ತೋರಿಸಿ ಅಂದಿದ್ದಾರೆ. ಈ ಸುಳ್ಳಿನ ಸರ್ದಾರರು ಇದ್ದಾರಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಆ ಲಾಡ್ ಎನ್ನುವವರು ಬರೀ ಸುಳ್ಳರ. 15% ಮುಸಲ್ಮಾನರಿಗಿದೆ, ತೋರಿಸಿ ಹಾಗಾದ್ರೆ ಅದನ್ನೆ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಗೈಡ್ ಲೈನ್ಸ್ ಏನಿದೆ ಅದು ನಂಗೆ ಗೊತ್ತಿಲ್ಲ. ಆದೇಶದಲ್ಲಿ ಬಿಲ್ಕುಲ್ 15% ಇಲ್ಲ ಅಂತ ಜೋಶಿ ಅವರು ಹೇಳಿದ್ದಾರೆ. ಧರ್ಮಾಧಾರಿತ ರಾಜಕಾರಣ ಬೇಡ ಅಂತ ನಾನೇಳಿದ್ದಲ್ಲ. ಆ ಮಹಾಪುರುಷ ಅಂಬೇಡ್ಕರ್ ಅವರು ಹೇಳಿದ್ದು. ಹಿಂದೂಗಳೇನು ಮನುಷ್ಯರಲ್ವಾ, ಬಡವರಿಲ್ವಾ..? ಎಲ್ಲಾ ಧರ್ಮದವರಿಗೂ ಒಂದೇ ಕಾನೂನು ಅಂದ್ಮೇಲ ಮುಸ್ಲಿಮರಿಗೆ ಬೇರೆ ಕಾನೂನು ಯಾಕೆ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್