Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರಬಂದ್ರಾ..? ಕಲರ್ಸ್ ಕನ್ನಡ ಹೇಳಿದ್ದೇನು..?

---Advertisement---

ಬೆಂಗಳೂರು: ಬಿಗ್ ಬಾಸ್ ನಲ್ಲಿ ಸ್ಪರ್ಧೆ ವಿಚಾರಕ್ಕೆ ಬಂದಾಗ ಮಲ್ಲಮ್ಮನವರನ್ನು ನಾಮಿನೇಟ್ ಮಾಡುವುದೇ ಹೆಚ್ಚು. ಅವರಿಗೆ ಅರ್ಥ ಆಗಲ್ಲ, ಬಿಗ್ ಬಾಸ್ ಮನೆಯಲ್ಲಿ ಮುಂದೆ ಅವರಿಗೆ ಕಷ್ಟವಾಗುತ್ತೆ ಅಂತ. ಕಳೆದ ವಾರವಷ್ಟೇ ಕಿಚ್ಚ ಸುದೀಪ ಅವರು ಮಲ್ಲಮ್ಮನವರ ಬಗ್ಗೆ ಚಂದದ ಮಾತುಗಳನ್ನ ಆಡಿದ್ದರು. ಅವರನ್ನು ಕೂಡ ಒಬ್ಬ ಸ್ಪರ್ಧಿಯಾಗಿ ನೋಡಿ. ಆದರೆ ಆಟ ಶುರು ಮಾಡುವುದಕ್ಕೂ ಮುನ್ನವೇ ಮಲ್ಲಮ್ಮ ಹೊರ ಬಂದರಾ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಸೋಷಿಯಲ್ ಮೀಡಿಯಾದಲ್ಲಿ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಆ ಎಪಿಸೋಡನ್ನ ಗುರುವಾರದಂದು ತೋರಿಸಲಾಗುತ್ತದೆ ಎಂಬ ವಿಚಾರ ಹರಿದಾಡುತ್ತಿದೆ. ಫ್ಯಾಮಿಲಿ ಸಮಸ್ಯೆಯಿಂದ ಇಂಥದ್ದೊಂದು ನಿರ್ಧಾರ ಮಾಡಲಾಗಿದೆ ಎಂಬ ಮಾತನ್ನು ಹೇಳಲಾಗಿದೆ. ಮಲ್ಲಮ್ಮ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಅವರು ಬಿಗ್ ಬಾಸ್ ಮನೆಯಲ್ಲಿ ಉಳಿಯಲೇಬೇಕು ಎಂಬ ಮಹದಾಸೆ ಅವರದ್ದಾಗಿತ್ತು.

ಈ ವಾರದ ನಾಮಿನೇಷನ್ ಆದವರ ಸಾಲಿನಲ್ಲಿ ಮಲ್ಲಮ್ಮ ಕೂಡ ಇದ್ದಾರೆ. ವೀಕೆಂಡ್ ನಲ್ಲಿ ಹೊರ ಬರಬೇಕಾದವರ ಸಾಲಿನಲ್ಲಿ ಮೊದಲೇ ಮಲ್ಲಮ್ಮ ಹೊರ ಬಂದು ಬಿಟ್ಟರಾ ಎಂಬ ಬೇಸರವೂ ಹಲವರನ್ನ ಕಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಾಗೆ ಇದು ಸುಳ್ಳು ಎಂಬುದನ್ನು ಹೇಳಿದೆ. ಈ ಮೂಲಕ ಮಲ್ಲಮ್ಮ ಮನೆಯ ಒಳಗೆ ಇರಬಹುದು ಅಂತಾನು ನಂಬಲಾಗಿದೆ. ಮಲ್ಲಮ್ಮ ಅವರ ಶಕ್ತಿ ಇನ್ನು ಬಿಗ್ ಬಾಸ್ ಮನೆಯಲ್ಲಿ ಅನಾವರಣವೇ ಆಗಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...