ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ನೋಡಿದವರೆಲ್ಲಾ ದಂಗಾಗಿ ಹೋಗಿದ್ದರು. ಪುಷ್ಪ2 ಸಿನಿಮಾ ಬರುತ್ತೆ ಎಂದು ತಿಳಿದ ಮೇಲೆ ಹೆವಿ ಎಕ್ಸ್ಪೆಕ್ಟೇಷನ್ಸ್ ಇಟ್ಟುಕೊಳ್ಳಲಾಯಿತು. ವರ್ಷವೇ ಕಳೆದರೂ ಅದರ ಕ್ರೇಜ್ ಮಾಸಲಿಲ್ಲ, ಡಿಮ್ಯಾಂಡ್ ಕಮ್ಮಿಯಾಗಲಿಲ್ಲ, ಅಭಿಮಾನಿಗಳಂತು ಕಾತುರದಿಂದ ಕಾಯುತ್ತಿದ್ದರು. ಆ ಕಾತುರಕ್ಕೆ ಅಲ್ಲು ಅರ್ಜುನ್ ಹುಟ್ಟು ಹಬ್ಬದ ದಿನ ಒಂದು ಝಲಕ್ ರಿಲೀಸ್ ಮಾಡಲಾಗಿತ್ತು.

ಅಲ್ಲು ಅರ್ಜುನ್ ಹುಟ್ಟುಹಬ್ಬದ ಉಡುಗೊರೆಯಾಗಿ ಒಂದು ಸಣ್ಣ ಟೀಸರ್ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅಲ್ಲು ಅರ್ಜುನ್ ಲುಕ್ ರಿವೀಲ್ ಆಗಿತ್ತು. ಮೈಮೇಲೆ ಸೀರೆಯುಟ್ಟು, ಬಳೆ ತೊಟ್ಟು, ಹಣೆಗೆ ದೊಡ್ಡ ತಿಲಕವಿಟ್ಟು ಕಾಳಿ ಮಾತೆಯಂತೆ ಕಾಣುತ್ತಿದ್ದ ಅಲ್ಲು ಅರ್ಜುನ್, ಕೈನಲ್ಲಿ ಗನ್ ಕೂಡ ಹಿಡಿದಿದ್ದರು. ಇದೀಗ ಈ ವೇಷ ವಿರೋಧಕ್ಕೆ ಕಾರಣವಾಗಿದೆ. ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ದೇವಿಯಾಗಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಸಿನಿಮಾದ ಬಾಯ್ಕಾಟ್ ಗೆ ಒತ್ತಾಯಿಸಲಾಗಿದೆ. ಹಿಂದೂ ಭಾವನೆಗೆ ಧಕ್ಕೆ ಮಾಡಲಾಗಿದೆ, ಈ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುತ್ತಿದ್ದಾರೆ ಕೆಲ ಸಂಘಟನೆಗಳು.

