ಶುಭ ದಿನದಂದು ಮಕ್ಕಳಿಗೆ ಹೆಸರಿಟ್ಟ ಧ್ರುವ ಸರ್ಜಾ : ಆ ಹೆಸರುಗಳೇ ಅದ್ಭುತ

1 Min Read

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಇಬ್ಬರು ಮಕ್ಕಳು. ಒಂದು ಗಂಡು, ಮತ್ತೊಂದು ಹೆಣ್ಣು ಮಗು. ಮೊದಲ ಮಗು ಹೆಣ್ಣು. ಆದರೆ ಬಹಳ ದಿನಗಳಾದರೂ ಮೊದಲ ಮಗುವಿಗೂ ನಾಮಕರಣ ಮಾಡಿರಲಿಲ್ಲ. ಎರಡನೇ ಮಗು ಗಂಡಾದ ಮೇಲೂ ಯಾವಾಗ ನಾಮಕರಣ ಮಾಡುತ್ತಾರೆ ಎಂಬ ಕುತೂಹಲವಿತ್ತು. ಅಭಿಮಾನಿಗಳು ಸಹ ಕುತೂಹಲದಿಂದಾನೇ ಮಕ್ಕಳ ನಾಮಕರಣಕ್ಕಾಗಿ ಕಾಯುತ್ತಾ ಇದ್ದರು.

ಧ್ರುವ ಸರ್ಜಾ ಸಿಕ್ಕಾಗಲೂ ಅಭಿಮಾನಿಗಳು ಆ ಬಗ್ಗೆ ಕುತೂಹಲ ಹೊರ ಹಾಕುತ್ತಿದ್ದರು. ಮಕ್ಕಳಿಗೆ ನಾಮಕರಣ ಯಾವಾಗ ಮಾಡುತ್ತೀರಾ ಅಂತ. ಒಂದೊಳ್ಳೆ ಗಳಿಗೆ ನೋಡಿಕೊಂಡು ನಾಮಕರಣ ಮಾಡುತ್ತೀನಿ ಅಂತಾನೇ ಧ್ರುವ ಸರ್ಜಾ ಮಾಹಿತಿ‌ನೀಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಾಂಕ ನಿಗದಿಯಾದಾಗಲೇ ಧ್ರುವ ಸರ್ಜಾ ಕೂಡ ನಿರ್ಧಾರ ಮಾಡಿದ್ದರು. ಆ ಶುಭ ಗಳಿಗೆಯ ದಿನವೇ ಮಕ್ಕಳಿಗೆ ನಾಮಕರಣ ಮಾಡುವುದಾಗಿ ಹೇಳಿದ್ದರು.

ಧ್ರುವ ಸರ್ಜಾ ಫ್ಯಾಮಿಲಿ ಹೇಳಿಕೇಳಿ ಆಂಜನೇಯನ ಭಕ್ತರು. ಒಂದು ಊಹೆ ಮಾಡಲಾಗಿತ್ತು. ಆಂಜನೇಯನಿಗೆ ಸಂಬಂಧಿಸಿದ ಹೆಸರನ್ನೇ ಇಡಬಹುದು ಎಂದು. ಇದೀಗ ಆ ಹೆಸರುಗಳು ಏನಿರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ತನ್ನಿಬ್ಬರು ಮಕ್ಕಳಿಗೆ ವಾವ್ ಎನಿಸುವಂತ ಹೆಸರುಗಳನ್ನೇ ಇಟ್ಟಿದ್ದಾರೆ.

ಧ್ರುವ ಸರ್ಜಾ ತಮ್ಮ ಮಗಳಿಗೆ ರುದ್ರಾಕ್ಷಿ ಧ್ರುವ ಸರ್ಜಾ ಹಾಗೂ ಮಗನಿಗೆ ಹಯಗ್ರೀವ ಧ್ರುವ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಪಂಚಮುಖಿ ಆಂಜನೇಯನಿಗೆ ಇರುವ ಮತ್ತೊಂದು ಹೆಸರೇ ಹಯಗ್ರೀವ. ಆಂಜನೇಯನ ಹೆಸರನ್ನೇ ಮಗನಿಗೆ ಇಟ್ಟಿದ್ದಾರೆ. ಈ ಸುಂದರ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಇಡೀ ಕುಟುಂಬಸ್ಥರು ಪಾಲ್ಗೊಂಡು ಮಕ್ಕಳಿಗೆ ಆಶೀರ್ವಾದ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks