in ,

ಧೃವ ನಾರಾಯಣ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಠ : ಮಾಜಿ ಸಚಿವ ಹೆಚ್.ಅಂಜನೇಯ

suddione whatsapp group join

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ(ಮಾ.11) : ಪಕ್ಷದ ನಾಯಕರಾದ ಧೃವ ನಾರಾಯಣ ರವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಠವಾಗಿದೆ. ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅವರು ಅವರ ಅದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವರಾದ ಹೆಚ್.ಅಂಜನೇಯ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧೃವ ನಾರಾಯಣರವರ ಸಂತಾಪ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇವರು ಎರಡು ಬಾರಿ ಶಾಸಕರಾಗಿ ಎರಡು ಬಾರಿ ಸಂಸದರಾಗಿ ಉತ್ತಮ ಕೆಲಸವನ್ನು ಮಾಡಿದ್ದಾರೆ, ಇಂದಿಗೂ ಸಹಾ ಅವರ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ ಅವರು ಈ ಬಾರಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಯಾರಿಯನ್ನು ನಡೆಸಿದ್ದರು. ಸಮಾಜ ಸೇವಕರಾಗಿ ಹಲವಾರು ಜನರ ಕಷ್ಟಗಳಿಗೆ ಪರಿಹಾರವನ್ನು ನೀಡಿದ ವ್ಯಕ್ತಿಯಾಗಿದ್ದರು ಎಂದರು.

ನಾನು ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಅವರ ಕ್ಷೇತ್ರಕ್ಕೆ 400 ಕೋಟಿ ರೂಗಳ ವಿವಿಧ ರೀತಿಯ ಕಾಮಗರಿಯನ್ನು ನೀಡಿದೆ. ಅವರ ಮನೆಯವರು ಸಹಾ ತೊಂದರೆಗೆ ಒಳಗಾಗಿದ್ದರೂ ಸಹಾ ಧೃವ ನಾರಾಯಣರವರು ಸಮಾಜ ಮುಖಿಯಾಗಿ ಕೆಲಸವನ್ನು ತಮ್ಮ ಜೀವಿತಾವಧಿ ಕಾಲದಲ್ಲಿ ಮಾಡಿದ್ದಾರೆ.

ತಮ್ಮ ಮನೆಯವರ ನೀವು ರಾಜಕೀಯ ಒತ್ತಡ, ನೋವಿನ ನಡುವೆಯೂ ಸಹಾ ಸ್ನೇಹ ಜೀವಿಯಾಗಿದ್ದ ಅವರು 60 ವರ್ಷ ಸಾಯುವ ವಯಸ್ಸ್ ಅಲ್ಲ, ಇನ್ನೂ ಸಾಧನೆ ಮಾಡುವ ಕಾಲವಾಗಿತ್ತು ಧೃವ ನಾರಾಯಣರವರನ್ನು ಕಳೆದು ಕೊಂಡ ಕಾಂಗ್ರೆಸ್ ಅವರ ಕುಟುಂಬದ ದುಃಖದಲ್ಲಿ ಕಾಂಗ್ರೆಸ್ ಸಹಾ ಭಾಗಿಯಾಗಲಿದೆ ಎಂದರು.

ಜಿಲ್ಲಾಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಹುಟ್ಟಿ ಆಕಸ್ಮಿಕ ಸಾವು ಖಚಿತ ಯಾರು ಯೋಚಿಸದ ಸಮಯದಲ್ಲಿ ಸಾವು ಸಂಭವಿಸುತ್ತದೆ. ಧೃವ ನಾರಾಯಣ ಸಾವು ಎಲ್ಲರಿಗೂ ಸಹಾ ನಷ್ಠವನ್ನುಂಟು ಮಾಡಿದೆ. ಅವರು ನಡೆದು ಬಂದ ದಾರಿ ನಮೆಗೆಲ್ಲಾ ದಾರಿ ದೀಪವಾಗಬೇಕಿದೆ. ಚಿತ್ರದುರ್ಗಕ್ಕೆ ಅವರ ಸಂಪರ್ಕ ಇದೆ ಆರೋಗ್ಯ ಭಾಗ್ಯ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿಗಳಾಗಿ ಆಗಮಿಸಿದ್ದರು. ಬೇರೆಯವರಿಗೆ ಮಾದರಿಯಾಗಿದ್ದರು. ಸಮಸ್ಯೆ ಎದುರಾದಾಗ ಎಲ್ಲವನ್ನು ಸಹಾ ಧೈರ್ಯದಿಂದ ಎದುರಿಸುತ್ತಿದ್ದರು ಎಂದರು.

ಕಾರ್ಯಕ್ರಮದಲ್ಲಿ ಓ.ಶಂಕರ್, ಬಿ.ಟಿ.ಜಗದೀಶ್, ಹಾಲಸ್ವಾಮಿ, ಸಂಪತ್ ಕುಮಾರ್ ಮೈಲಾರಪ್ಪ, ಪ್ರಚಾರ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಚೋಟು ಸೇರಿದಂತೆ ಇತರರು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಡೆಕ್ ಮಹೀಂದ್ರಾ ಗ್ರೂಪ್ ಸೇರಿದ ಮೋಹಿತ್ ಜೋಶಿ..!

ಚಳ್ಳಕೆರೆ ಕ್ಷೇತ್ರದ ಯುವ ಮತದಾರರ ಬೆಂಬಲ ಅಭಿವೃದ್ಧಿಗೆ : ಶಾಸಕ ಟಿ.ರಘುಮೂರ್ತಿ