Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧನರಾಜ್ ಕಾಮಿಡಿಗೆ ಲಾಯರ್ ಜಗದೀಶ್ ಕೋಪ ಠುಸ್..!

---Advertisement---

 

 

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ಶುರುವಾಗಿವೆ. ಟಾಸ್ಕ್ ಗಳು ಶುರುವಾದಾಗಲೇ ಜಗಳಗಳು ಹೆಚ್ಚಾಗುವುದು. ಗೆಲ್ಲುವುದಕ್ಕೆಂದು ಆಡುವ ಆಟಗಳು ಅಲ್ಲಿ ಸ್ಪರ್ಧೆಯಾಗಿ ಕಾಣಿಸುತ್ತದೆ. ನಾನೇ ಗೆಲ್ಲಬೇಕೆಂಬ ಛಲವೂ ಒಬ್ಬರಿಗೊಬ್ಬರಲ್ಲಿ ಶುರುವಾಗುತ್ತೆ. ಇಂದು ಆಟ ಆಡುವಾಗಲೇ ಕಾಮಿಡಿಯೂ ನಡೆದಿದೆ.

 

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಚೈತ್ರಾ ಕುಂದಾಪುರ, ಜಗದೀಶ್, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಮಾನಸ, ಮೋಕ್ಷಿತಾ ಇವರುಗಳು ನಾಮಿನೇಷನ್ ಆಗಿದ್ದಾರೆ. ಇದರ‌ ನಡುವೆ ನಾಮಿನೇಷನ್ ನಿಂದ ಪಾರಾಗುವುದಕ್ಕೂ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದೆ. ನೇತಾಡುವ ಬುಟ್ಟಿಗಳಿಗೆ ಕೈನಲ್ಲಿ ತೆಗೆದುಕೊಂಡು ಹೋಗಿ ಮಣ್ಣು ತುಂಬಿಸುವುದು.

 

ಪ್ರತಿಸಲ ಟಾಸ್ಕ್ ಕೊಟ್ಟಾಗಲು ಬಿಗ್ ಬಾಸ್ ಒಬ್ಬರನ್ನ ರೆಫ್ರಿಯಾಗಿ ನಿಲ್ಲಿಸುತ್ತದೆ. ಈ ಬಾರಿ ರೆಫ್ರಿಯಾಗಿ ಧನರಾಜ್ ಆಚಾರ್ಯ ನಿಂತಿದ್ದಾರೆ. ರೂಲ್ಸ್ ಏನು, ಹೇಗೆ ಆಡಬೇಕು ಎಂಬುದನ್ನು ಓದಿ ಹೇಳಿದ್ದಾರೆ. ಆದರೆ ಲಾಯರ್ ಜಗದೀಶ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿಯೇ ಮುಂದೆ ಇರುತ್ತಾರೆ. ಯಾರಿಗೂ ಹಾನಿ ಮಾಡಬಾರದು ಎಂಬುದು ರೂಲ್ಸ್ ನಲ್ಲಿ ಇದೆ. ಆದರೆ ಲಾಯರ್ ಜಗದೀಶ್ ಆಡುವಾಗ ಯಮುನಾ ಅವರನ್ನು ತಳ್ಳಿ ಬೀಳಿಸಿದ್ದಾರೆ. ಆಗ ಧನರಾಜ್ ತಳ್ಳುವಂತೆ ಇಲ್ಲ. ರೂಲ್ಸ್ ಬ್ರೇಕ್ ಎಂದು ಚೀರಿದ್ದಾರೆ.

 

ಧನರಾಜ್ ಈ ರೀತಿ ಹೇಳಿದ್ದಕ್ಕೆ ಲಾಯರ್ ಜಗದೀಶ್ ಕೆಂಡಾಮಂಡಲರಾಗಿದ್ದಾರೆ. ರೆಫ್ರಿ ಆಗೋದಕ್ಕೆ ಫಿಟ್ ಇಲ್ಲ ಎಂದು ಜಗದೀಶ್ ಹೇಳಿದ ಕೂಡಲೇ ಧನರಾಜ್, ಹೋಯ್ ಸುಮ್ಮನೆ ಕೂತ್ಕೊ ಅಂತೀರಾ. ನೀನ್ ಯಾರ್ ಹೇಳೋಕೆ ಎಂದು ಚೀರಿದ್ದಾರೆ. ಆದರೆ ಧನರಾಜ್ ಮುಖದಲ್ಲಿ ಕೋಪಕ್ಕಿಂತ ಹೆಚ್ಚಾಗಿ ಆ ಕೋಪದಲ್ಲೂ ಕಾಮಿಡಿಯೇ ಕಾಣಿಸುತ್ತಾ ಇತ್ತು. ಬಿಗ್ ಬಾಸ್ ಮನೆಗೆ ಧನರಾಜ್ ಬಂದಾಗಿನಿಂದ ಬಿಗ್ ಬಾಸ್ ಆಟ ಆಡಿಸುತ್ತಿದೆ. ಒಳ್ಳೆ ಎಂಟರ್ ಟೈನರ್ ಆಗಿದ್ದಾರೆ.

 

ಈ ಜಗಳ ಅತಿರೇಕಕ್ಕೆ ಹೋಗಿತ್ತು. ಕೈ ಸನ್ನೆಯನ್ನು ಧನರಾಜ್ ಕಾಮಿಡಿ ಮಾಡಿದ್ದಾರೆ. ಸದಾ ಕೋಪದಲ್ಲಿದ್ದ ಜಗದೀಶ್ ಮುಖದಲ್ಲೂ ಧನರಾಜ್ ಇಮೋಜಿ ನಗು ತರಿಸಿದೆ. ಮುಖದಲ್ಲಿ ನಗು ಮೂಡಿದ್ದು ಕಾಣಿಸಿದೆ. ಮನೆ ಮಂದಿಯೆಲ್ಲಾ ಜೋರಾಗಿ ನಕ್ಕಿದ್ದಾರೆ. ಜಗಳದ ನಡುವೆಯೂ ಧನರಾಜ್ ಮಾತಿನಿಂದ ಮನೆ ತಣ್ಣಗೆ ಆಗಿದೆ. ಧನರಾಜ್ ಕೋಪ ಮಾಡಿಕೊಂಡರೆ ಸಿನಿಮಾದಲ್ಲಿ ಸಾಧುಕೋಕಿಲಾ ಅವರನ್ನೇ ನೋಡಿದಂತೆ ಫೀಲ್ ಆಯ್ತು. ಧನರಾಜ್ ಅವರಿಂದ ಒಂದೊಳ್ಳೆ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...