ಬೆಂಗಳೂರು: ಮೇಕೆದಾಟು, ಎತ್ತಿನಹೊಳೆ ಬಗ್ಗೆ ಮಾತನ್ನಾಡಿದಾಗ, ಅಸೆಂಬ್ಲಿಯಲ್ಲಿ ಈ ವಿಚಾರವನ್ನ ತೆಗೆದ್ವಿ. ಪಾರ್ಲಿಮೆಂಟ್ ನಲ್ಲಿ ಮಾತನಾಡಲಿ. ನಮ್ಮ ಕಾಲದಲ್ಲಿ ಏನು ಮಾಡುದ್ವಿ ಅಂತ ನಾವು ಹೇಳ್ತೀವಿ. ಪಾಪ ಅವರಿಗೆ ಸುಮ್ಮನೆ ಡಿಸ್ಟರ್ಬ್ ಮಾಡೋದು ಸರಿ ಅಲ್ಲ. ಈ ವಯಸ್ಸಲ್ಲಿ ಅಟ್ಯಾಕ್ ಮಾಡಿದಂತೆ ಆಗುತ್ತೆ. ನಂಗೆ ಅಟ್ಯಾಕ್ ಮಾಡೋದು ಇಷ್ಟ ಇಲ್ಲ. ಪರಿಹಾರವನ್ನ ಅವರೇ ಹೇಳಲಿ. ಈ ವಯಸ್ಸಲ್ಲಿ ಮನಸ್ಸನ್ನ ನೋಯಿಸೋದು ಬೇಡ ಅಂತ ಹೇಳಿ ಏನು ಮಾತನ್ನಾಡ್ತಿಲ್ಲ ಎಂದಿದ್ದಾರೆ.
ಇಂದಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ತುಂಬಿದೆ. ಆ ಜರ್ನಿ ಬಗ್ಗೆ ಮಾತನ್ನಾಡುತ್ತಾ, ಇವತ್ತು ಬರೀ ಶಾಸಕರಿಗೆ ಮಾತ್ರ ಔತಣಕೂಟಕ್ಕೆ ಕರೆದಿದ್ದೀನಿ ಎಂದಿದ್ದಾರೆ. ಗ್ಯಾಸ್ ಬೆಲೆ ಏರಿಕೆಯ ಬಗ್ಗೆ ಮಾತನ್ನಾಡುತ್ತಾ, ಪಾರ್ಲಿಮೆಂಟ್ ನಲ್ಲಿ ಚರ್ಚೆ ಮಾಡಬೇಕು. ಇವತ್ತಿನ ತನಕ ಚರ್ಚೆ ಮಾಡುವುದಕ್ಕೆ ಅವಕಾಶವನ್ನೆ ಕೊಡ್ತಾ ಇಲ್ಲ. ಅದಕ್ಕಾಗಿ ನಮ್ಮೆಲ್ಲಾ ಸಂಸದರು, ಇಂಡಿಯಾ ಒಕ್ಕೂಟದ ಸಂಸದರು ಪ್ರತಿಭಟನೆ ಮಾಡಿದ್ದಾರೆ.
ಯಾಕೆ ಅವರಿಗೆ ಭಯ. ಸ್ಟಾಕ್ ಇಲ್ಲ. ಡೀಸೆಲ್ ಬೆಲೆ ನಿನ್ನೆನೆ ವುಮೆನ್ಸ್ ಡೇ ದಿನವೇ ಏರಿಕೆಯಾಗಿದೆ. ಸಂಸದರ್ಯಾಕೆ ಮಾತಾಡ್ತಾ ಇಲ್ಲ. ಗ್ಯಾಸ್ ಬೆಲೆ ಏರಿಕೆ ಆಗಿದೆ. ಎಂಪಿಗಳು ಅದಕ್ಕೆ ಮಾತನ್ನಾಡಬೇಕು ಅಲ್ವಾ. ಎಲ್ಲಾದಕ್ಕೂ ಧ್ವನಿ ಎತ್ತುತ್ತಾರೆ. ಬಹಳ ವಿಚಿತ್ರವಾಗಿ ಧ್ವನಿ ಎತ್ತುತ್ತಾರೆ, ಈಗ ಗ್ಯಾಸ್ ಬೆಲೆ ಏರಿಕೆಯ ಬಗ್ಗೆನು ಧ್ವನಿ ಎತ್ತಬೇಕು ಅಲ್ವಾ ಎಂದಿದ್ದಾರೆ. ಬೆಂಗಳೂರು, ಮೈಸೂರು ನಗರ ಭಾಗದಲ್ಲಿ ಈಗಾಗಲೇ ಹೊಟೇಲ್ ಗಳಲ್ಲಿ ಗ್ಯಾಸ್ ಸಿಲಿಂಡರ್ ಗಳ ಕೊರತೆ ಉಂಟಾಗಿದೆ. ಇದರಿಂದ ಹೊಟೇಲ್ ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದೊದಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











