Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗಕ್ಕೆ ದೇವಾಂಗ ಜ್ಯೋತಿ ಆಗಮನ : ಮುಖಂಡರಿಂದ ಸ್ವಾಗತ

---Advertisement---

 

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 25 : ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ 2026ರ ಅಂಗವಾಗಿ ಬುಧವಾರ ಚಿತ್ರದುರ್ಗ ನಗರಕ್ಕೆ ದೇವಾಂಗ ಜ್ಯೋತಿ ಆಗಮಿಸಿತು.

ನಗರದ ಬುರುಜನಹಟ್ಟಿ ವೃತ್ತದ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ ದೇವಾಂಗ ಜ್ಯೋತಿ ಯಾತ್ರೆಗೆ ದೇವಾಂಗ ಸಮಾಜದ ಶೆಟ್ರು ಡಿ.ಬಿ. ಗೋವಿಂದ್ರಪ್ಪ, ಗೌಡ್ರು ಡಿ.ಜಿ. ರಂಗನಾಥ್ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು.

ಹಂಪಿ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘ ಆಶ್ರಯದಲ್ಲಿ ಮೇ 9 ಮತ್ತು 10 ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ಕೇತ್ರದಲ್ಲಿ ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತ ಸಮಾವೇಶ 2026 ಹಾಗೂ ದಯಾನಂದ ಸ್ವಾಮೀಜಿಯವರ 36ನೇ ವರ್ಷದ ಪಟ್ಟಾಭೀಷೇಕ ಮತ್ತು ತುಲಭಾರ ಸಮಾರಂಭ ನಡೆಯಲಿದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಒಡಿಸ್ಸಾ, ಚತ್ತಿಸ್ಘಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿನ ದೇವಾಂಗ ಸಮಾಜದವರನ್ನು ಒಗ್ಗೂಡಿಸಿ ಬೃಹತ್ ಸಮಾವೇಶವನ್ನು ಮಾಡಲಾಗುತ್ತಿದೆ. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಗೌಡ್ರು ಡಿ.ಜಿ. ರಂಗನಾಥ್ ಮನವಿ ಮಾಡಿದರು.

 

ಸಮಾಜದ ಹೆಚ್.ಯೋಗೇಶ್, ಕೃಷ್ಣಮೂರ್ತಿ, ಚಂದ್ರು, ಶ್ರೀನಿವಾಸ್ ಬಿ, ಜಿ.ಕಾಂತರಾಜ್, ಎನ್.ಮಾರುತಿ, ಸುರೇಶ್. ಎಸ್. ಗೋವಿಂದಪ್ಪ, ಶ್ರೀನಿವಾಸ್.ಎಸ್, ಪರಮೇಶ್.ಡಿ.ಪಿ. ಸಿದ್ದೇಶ್, ಕೃಷ್ಣಮೂರ್ತಿ.ಬಿ.ಜಿ, ಚಂದ್ರಶೇಖರ್.ಎಲ್, ರಂಗನಾಥ್ ಬಿ, ಶಿವಮ್ಮ, ಮಮತಾ ಇತರರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...