ಮಳೆಗಾಲ ಶುರುವಾಯ್ತು ಮದರೆ ಸೊಳ್ಳೆಗಳಿಂದ ಶುರುವಾಗುವ ಕಾಯಿಲೆಗಳು ಹೆಚ್ಚಾಗುತ್ತವೆ. ಅದರಲ್ಲೂ ಇತ್ತಿಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದಾವೆ. ಸೊಳ್ಳೆಗಳ ನಾಶಕ್ಕೆ ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಜನ ಕೂಡ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಇನ್ನು ಡೆಂಗ್ಯೂ ಬಾರದಂತೆ ತಡೆಯಲು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹಡಚ್ಚಾಗಿರಬೇಕಾಗುತ್ತದೆ. ಅದನ್ನು ಆಹಾರ ಮೂಲಕವೂ ರೂಢಿಸಿಕೊಳ್ಳಬಹುದು.
* ಡೆಂಗ್ಯೂ ಜ್ವರ ಇದ್ದವರು, ಬಾರದಂತೆ ಎಚ್ಚರ ಬಹಿಸುವವರು ಶಕಂಜಿ ನೀರನ್ನು ಕುಡಿಯಿರಿ. ಒಂದು ನಿಂಬೆ ಹಣ್ಣಿನ ರಸ ತೆಗೆದು, ಅದಕ್ಕೆ ನೀರಿ, ಸಕ್ಕರೆ, ಉಪ್ಪು, ಹುರಿದ ಜೀರಿಗೆ ಪುಡಿ ಬಳಸಿ ಕುಡಿಯಿರಿ.
* ಮೊಸರು, ಬೇಳೆಕಾಳು, ಕ್ವಿನೋವಾ, ಅಮರನಾಥ, ಸತ್ತು, ಕಡಿಮೆ ಕೊಬ್ಬು ಇರುವ ಪನೀರ್ ಮತ್ತು ತೌಫು ಸೇವಿಸಿ.
* ಫಾಲಿಕ್ ಆಮ್ಲ ಮತ್ತು ವಿಟಮಿನ್ ಕೆ ಇರುವ ಆಹಾರ ಸೇರಿಸಿ. ಕಿವಿ, ದಾಳಿಂಬೆ, ಬ್ರಾಕೋಲಿ ಮತ್ತು ಪಾಲಕವು ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಈ ಆಹಾರಗಳು ಸಂಪೂರ್ಣ ಚೇತರಿಕೆಗೆ ತುಂಬಾ ನೆರವಾಗಲಿದೆ.
* ಪಪ್ಪಾಯಿ ಎಲೆಯ ರಸವು ಉತ್ತಮ ಪರಿಹಾರವಾಗಿದೆ. ಪಪ್ಪಾಯಿ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಇದು ಡೆಂಗ್ಯೂಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ದಿನಕ್ಕೆ ಎರಡು ಬಾರಿ ಪಪ್ಪಾಯಿ ಎಲೆಯ ರಸವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.
* ಮೊದಲು ಡೆಂಗ್ಯೂ ಬಾರದಂತೆ ತಡೆಯಲು ಮನೆಯ ಬಳಿಯೆಲ್ಲಾ ಸ್ವಚ್ಛತೆಯನ್ನು ಕಾಪಾಡಿ. ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳ ತಾಣವಾಗಿದ್ದರೆ ಅದನ್ನು ಕ್ಲೀನ್ ಮಾಡಿ.