Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

Democracy Rally: ಇವತ್ತು ಹ್ಯಾರಿಸ್‌ ಅವ್ರು ಓಡ್ಸಿದ ಬೈಕ್‌ ಬೆಲೆ ಎಷ್ಟು ಗೊತ್ತಾ?

---Advertisement---

 

ಬೆಂಗಳೂರು: ಇವತ್ತು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕಂಠೀರವ ಸ್ಟೇಡಿಯಂನಿಂದ ವಿಧಾನಸೌಧದವರೆಗೆ ನಡೆದ ಬೈಕ್‌ ಜಾಥಾ ಹಲವಾರು ಕಾರಣಗಳಿಂದಾಗಿ ಎಲ್ಲರ ಗಮನ ಸೆಳೆದಿದೆ.

ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರು ತಾವು ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಯಜ್ಡಿ ಬೈಕ್‌ ಓಡಿಸಿ ಮತ್ತೊಮ್ಮೆ ಇಡೀ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ. ಅದೇ ರೀತಿ ಇವತ್ತು ಶಾಂತಿನಗರ ಶಾಸಕರು, ಬಿಡಿಎ ಅಧ್ಯಕ್ಷರಾದ ಎನ್‌.ಎ. ಹ್ಯಾರಿಸ್‌ ಅವರು ಓಡಿಸಿದ ಬೈಕ್‌ ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ಹ್ಯಾರಿಸ್‌ ಅವರು ಓಡಿಸಿದ ಬೈಕ್‌ ನೋಡಿದ ಮೇಲೆ ನೆಟ್ಟಿಗರು ಅದರ ಬೆಲೆ ಎಷ್ಟು ಎಂದು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾರೆ. ಅಂದಹಾಗೆ ಇವತ್ತು ರ್ಯಾಲಿಯಲ್ಲಿ ಓಡಿಸಿದ ಎಲ್ಲಾ ಬೈಕ್‌ಗಳಿಗಿಂತ ಹ್ಯಾರಿಸ್‌ ಅವರು ಓಡಿಸಿದ ಬೈಕ್‌, ತುಂಬಾನೆ ಎಕ್ಸ್‌ಪೆನ್ಸಿವ್‌ ಅಂತೆ.

ಅಂತರ್ಜಾಲದಲ್ಲಿ ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಹ್ಯಾರಿಸ್‌ ಅವರು ಓಡಿಸಿದ ಹಾರ್ಲೆ ಡೇವಿಡ್‌ಸನ್‌ ಫ್ಯಾಟ್‌ ಬಾಯ್‌ ಬೈಕ್‌ನ ಮಾರುಕಟ್ಟೆ ಬೆಲೆ 31 ಲಕ್ಷ ರೂಪಾಯಿಗೂ ಹೆಚ್ಚಿದೆ. ಬೈಕ್‌ ಓಡಿಸಿದ ಫೋಟೊವನ್ನು ಹ್ಯಾರಿಸ್‌ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಜನ ತುಂಬಾನೇ ಹ್ಯಾಂಡ್‌ಸಮ್‌ ಆಗಿ ಕಾಣ್ತಿದ್ದೀರಾ ಎಂದು ಕಮೆಂಟ್‌ ಮಡ್ತಿದ್ದಾರೆ.

https://www.facebook.com/share/p/1aXjwZmGK7/

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now