ಅಡಿಕೆ ಬೆಳೆಗಾರರಿಗೆ ಬೇಸರದ ಸಂಗತಿ ಇದಾಗಿದೆ. ಕಷ್ಟ ಒಟ್ಟು ಬೆಳೆಯನ್ನು ಉಳಿಸಿಕೊಂಡರು ಬೆಲೆ ಮಾತ್ರ ಕುಸಿತ ಕಂಡಿದೆ. ಈಚೆಗಷ್ಟೇ ಒಳ್ಳೆಯ ಬೆಲೆ ಸಿಕ್ಕಿತ್ತು. ಆದರೆ ಇದೀಗ ದಿಢೀರನೇ ಅಡಿಕೆ ಬೆಲೆ 45 ಸಾವಿರ ರೂಪಾಯಿ ಆಸುಪಾಸಿಗೆ ಕುಸಿದೆ. ಸುಮಾರು ಹತ್ತು ಸಾವಿರ ರೂಪಾಯಿ ವ್ಯತ್ಯಾಸವಾಗಿದೆ. ಇದಿ ಸಹಜವಾಗಿಯೇ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ರಾಶಿ ಅಡಿಕೆ ಬೆಲೆ 55 ಸಾವಿರ ರೂಪಾಯಿ ಮೀರಿತ್ತು. ಆ ಬಳಿಕ ಬೆಲೆಯಲ್ಲಿ ಕುಸಿತ ಕಾಣುತ್ತಲೇ ಇದೆಯೇ ವಿನಃ ಹೆಚ್ಚಾಗುತ್ತಿಲ್ಲ. 45 ಸಾವಿರ ಆಸುಅಸಿನಲ್ಲಿ ಮಾರಾಟವಾಗುತ್ತಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ರಾಶಿ ಅಡಿಕೆ ಬೆಲೆ ಗರಿಷ್ಠ 48,000 ರೂಪಾಯಿಗೆ ಮಾರಾಟವಾಗಿದೆ. ಉಳಿದಂತೆ 44-46 ಸಾವಿರ ರೂಪಾಯಿ ನಡುವೆಯೇ ಮಾರಾಟವಾಗುತ್ತಿದೆ. ಸೋಮವಾರ ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ 30,199 ಒದ್ದರೆ ಗರಿಷ್ಠ 48,451 ರೂಪಾಯಿ ಆಗಿತ್ತು. ಹಾಗೇ ಕೆಂಪುಗೋಟು ಕ್ವಿಂಟಾಲ್ ಗೆ ಕನಿಷ್ಠ 20,899 ಇದ್ದರೆ ಗರಿಷ್ಠ 32,199 ಆಗಿತ್ತು.
ಒಂದು ಕಡೆ ಅಡಿಕೆ ಬೆಲೆ ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ತೆಂಗು ಬೆಳೆಗಾರರಿಗೆ ಬಹಳ ಕಾಯುವಿಕೆ ನಂತರ ಬೆಲೆ ಏರಿಕೆಯ ಸಿಹಿ ಸಿಕ್ಕಿದೆ. 10,000 ರೂಪಾಯಿ ಕೂಡ ದಾಟದ ಕೊಬ್ಬರಿ ಧಾರಣೆ, ಕಳೆದ ಕೆಲವು ದಿನಗಳಿಂದ 12,000 ರೂಪಾಯಿ ದಾಟಿದೆ. ಸೋಮವಾರ ತಿಪಟೂರು ಮಾರುಕಟ್ಟೆಯಲ್ಲಿ ಕನಿಷ್ಠ 11,500 ರೂಪಾಯಿ ಗರಿಷ್ಠ 12,000 ರೂಪಾಯಿ ಆಗಿತ್ತು. ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8,000 ರೂಪಾಯಿ ಮತ್ತು ಗರಿಷ್ಠ 12,000 ರೂಪಾಯಿ ಆಗಿತ್ತು.