Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರದ ನಿರ್ಧಾರಕ್ಕೆ ಸಚಿವರಿಂದ ಬೇಸರ : ಸಿದ್ದರಾಮಯ್ಯ ಏನಂದ್ರು..?

---Advertisement---

ಬೆಂಗಳೂರು: ರೈತರ ಹೋರಾಟಕ್ಕೆ ಸಿದ್ದರಾಮಯ್ಯ ಸ್ಪಂದಿಸಿದ್ದು, ಒಂದು ಟನ್ ಕಬ್ಬಿಗೆ 3300 ರೂಪಾಯಿ ನಿಗದಿ‌ ಮಾಡಿದ್ದಾರೆ. ಈ ನಿರ್ಧಾರ ಕೆಲವೊಂದು ಭಾಗದ ರೈತರಿಗೆ ಖುಷಿ ಕೊಟ್ಟಿದ್ರೆ ಇನ್ನು ಕೆಲ ರೈತರಿಗೆ ಬೇಸರ ತರಿಸಿದೆ. ಅದಲ್ಲದೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬೇಸರ ತರಿಸಿದೆ. ಅದರಲ್ಲೂ ಸಚಿವ ಮುರುಗೇಶ್ ನಿರಾಣಿ, ನಮಗೇಳಿದ್ದೇ ಒಂದು ಅವರು ಮಾಡಿದ್ದೆ ಒಂದು ಎಂಬ ಬೇಸರ ಹೊರ ಹಾಕಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಎದುರುಗಡೆನೇ ಇದೆಲ್ಲ ಹೇಳಿರುವುದು. ಹೇಳಿರುವುದು ಒಂದು ಮಾಡುವುದು ಒಂದು ಅಲ್ಲ. ಜೂಮ್ ಮೀಟಿಂಗ್ ನಲ್ಲಿ ಬಂದಾಗ ಜಿಲ್ಲಾಧಿಕಾರಿ ಬಂದು ಹೇಳಿದ ಮೇಲೆ ಒಪ್ಪಿದ್ದಾರೆ. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ 50 ರೂಪಾಯಿನ ಫ್ಯಾಕ್ಟರಿ ಅವರು ಕೊಡಬೇಕು. ಸರ್ಕಾರ 50 ರೂಪಾಯಿ ಕೊಡುತ್ತೆ. ಡಿಸಿ ಏನ್ ಹೇಳಿದ್ದಾರೆ, 10.25ಕ್ಕೆ 3100+100 ಮೇಲೆ ರಿಕವರಿ ಇದ್ರೆ, 11.25 ರಿಕವರಿ ಇದ್ರೆ 3200+100 ಈ ರೀತಿ ಆಗಿರೋದು. ಇದನ್ನ ಆದೇಶದಲ್ಲಿ ಹೊರಡಿಸಲಾಗುತ್ತದೆ. ಶಿವಾನಂದ ಪಾಟೀಲ್ ಅವರು ಅಲ್ಲಿಯೇ ಅನೌನ್ಸ್ ಮಾಡಲಿದ್ದಾರೆ ಎಂದಿದ್ದಾರೆ.

ಕಳೆದ 9 ದಿನದಿಂದ ರೈತರು ಮಾಡುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಂತೆ ಆಗಿದೆ. ಪ್ರಸ್ತುತ ಬರ್ತಾ ಇದ್ದಂತ ಬೆಲೆಗೆ ಹೋಲಿಕೆ ಮಾಡಿಕೊಂಡರೆ ಈಗ 100 ರೂಪಾಯಿ ಜಾಸ್ತಿ ಮಾಡಿದ್ದಾರೆ. ಇದನ್ನ ಒಪ್ಪಿದ ಬೆಳಗಾವಿ ರೈತರು ಹೋರಾಟವನ್ನು ಕೈಬಿಟ್ಟಿದ್ದಾರೆ. ಆದರೆ ವಿಜಯಪುರ, ಬಾಗಲಕೋಟೆ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಅವರನ್ನ ಸರ್ಕಾರ ಹೇಗೆ ಮನವೊಲಿಸುತ್ತೆ ಎಂಬುದನ್ನ ನೋಡಬೇಕಿದೆ. ಸರ್ಕಾರದ ನಿರ್ಧಾರಕ್ಕೆ ಒಪ್ಪಿ ಪ್ರತಿಭಟನೆ ಕೈ ಬಿಡ್ತಾರಾ ನೋಡಬೇಕಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now