Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಶಕಗಳ ಬೇಡಿಕೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಸ್ತು : ಪ್ರಕಾಶ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ, ಮೊಳಕಾಲ್ಮೂರು.
ಮೊ : 93806 27082

ಸುದ್ದಿಒನ್, ಮೊಳಕಾಲ್ಮುರು, ಅಕ್ಟೋಬರ್. 14 : ತಾಲೂಕಿನ ಶೋಷಿತ ಸಮುದಾಯಗಳ ದಶಕಗಳ ಕನಸು ನನಸಾಗುತ್ತಿದ್ದು ಪಟ್ಟಣದ ಹೊರ ವಲಯದ ಹಾನಗಲ್ ರಸ್ತೆಯಲ್ಲಿ ಅಕ್ಟೋಬರ್ 15ರಂದು ನಡೆಯಲಿರುವ ಅಂಬೇಡ್ಕರ್ ಭವನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಸರ್ವ ಸಮುದಾಯದವರು ಭಾಗಿಯಾಗಿ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ್ ಹೇಳಿದರು.

 

ಪಟ್ಟಣದ ಕನ್ನಡ ಭವನದಲ್ಲಿ ಮಂಗಳವಾರದಂದು ನಡೆದ “ಮೊಳಕಾಲ್ಮುರು ತಾಲೂಕು ಮಾದಿಗ ಮಹಾಸಭಾ” ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಶೋಷಿತರ ಮಹಾನ್ ನಾಯಕ ಡಾ. ಬಿ. ಆರ್ ಅಂಬೇಡ್ಕರ್ ಅವರ ಭವನಗಳು ಈಗಾಗಲೇ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ, ಸರ್ಕಾರಗಳು ಅಂಬೇಡ್ಕರ್ ಭವನಕ್ಕೆ ನಿವೇಶನಗಳನ್ನು ಮತ್ತು ಅನುದಾನಗಳನ್ನು ನೀಡುತ್ತಾ ಗೌರವ ಸೂಚಿಸುತ್ತ ಬಂದಿವೆ.ನಮ್ಮ ತಾಲೂಕಿನಲ್ಲಿ ಇಲ್ಲಿವರೆಗೂ ದಮನಿತರ ಧ್ವನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನಕ್ಕೆ ಒಂದು ಇಂಚು ಜಾಗವನ್ನು ಯಾವುದೇ ಜನಪ್ರತಿನಿಧಿಗಳು ನೀಡಿರಲಿಲ್ಲ,ಇಂತಹ ಸಂದರ್ಭದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ತಮ್ಮ ಇಚ್ಛಾಶಕ್ತಿ ಮೆರೆದು ಅಂಬೇಡ್ಕರ್ ಭವನ ನಿರ್ಮಿಸಲು ಒಂದೂವರೆ ಎಕರೆ ಜಮೀನು ಮಂಜೂರು ಮಾಡಿಸಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಎರಡು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ, ಹೆಚ್ಚುವರಿ ಅನುದಾನಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಸಿ ಮಹದೇವಪ್ಪ ಜತೆ ಮಾತನಾಡಿ ಶೀಘ್ರದಲ್ಲಿ ಹೆಚ್ಚುವರಿಯಾಗಿ 2ಕೋಟಿ ರೂಪಾಯಿ ಬಿಡುಗಡೆ ಬಗ್ಗೆ ಚರ್ಚಿಸಿದ್ದಾರೆ. ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ಅನುದಾನ ನೀಡುವುದಾಗಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶಾಸಕ ಎನ್ ವೈ ಗೋಪಾಲಕೃಷ್ಣ ಪ್ರಾಮಾಣಿಕವಾಗಿ ಅನುದಾನ ತರುತ್ತೇನೆ ಎಂದು ವಾಗ್ದಾನ ನೀಡಿದ್ದಾರೆ. ಶೋಷಿತ ಸಮುದಾಯಗಳ ದಶಕಗಳ ಕನಸು ನನಸಾಗುತ್ತಿದೆ ಪ್ರತಿಯೊಬ್ಬರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಬಿಜಿಕೆರೆ ನಾಗಭೂಷಣ್ ಮಾತನಾಡಿ, ತಾಲೂಕಿನ ಪಟ್ಟಣದ ಹೊರವಲಯದಲ್ಲಿರುವ ಹಾನಗಲ್ ರಸ್ತೆಗೆ ಹೊಂದಿಕೊಂಡಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿಗದಿಯಾಗಿದೆ, ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರ ಇಚ್ಛಾಶಕ್ತಿ ಮತ್ತು ಅವರಿಗಿರುವ ಬದ್ಧತೆಯಿಂದ ಅಂಬೇಡ್ಕರ್ ಭವನಕ್ಕೆ ನಿವೇಶನ ಹಾಗೂ ಅನುದಾನ ಸಿಕ್ಕಿದೆ ಶಾಸಕರಿಗೆ ಸಮುದಾಯದಿಂದ ಧನ್ಯವಾದಗಳು ತಿಳಿಸಬೇಕು.ಅಕ್ಟೋಬರ್ 15ರಂದು ನಡೆಯುವ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಪ್ರತಿ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಚಲನಚಿತ್ರ ನಿರ್ದೇಶಕ ಶ್ರೀನಿವಾಸ್ ಮೂರ್ತಿ ಮಾತನಾಡಿ,ತಾಲೂಕಿನಲ್ಲಿ ನಿರ್ಮಾಣವಾಗಲು ಸಜ್ಜುಗೊಳ್ಳುತ್ತಿರುವ ಅಂಬೇಡ್ಕರ್ ಭವನವು ಬೃಹತ್ ಕಟ್ಟಡವಾಗಿದೆ, ಡಾ. ಬಿ ಆರ್ ಅಂಬೇಡ್ಕರ್ ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಲ್ಲ,ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಧ್ಯೇಯದೊಂದಿಗೆ ದೇಶವನ್ನೇ ಮುನ್ನಡೆಸಿದ ವ್ಯಕ್ತಿ.ನಮ್ಮಲ್ಲಿ ಯಾವುದೇ ಭೇದಗಳಿದ್ದರು ಎಲ್ಲವು ಮರೆತು ಸಮುದಾಯದ ಹಿತಕ್ಕೋಸ್ಕರ ನಡೆಯುತ್ತಿರುವ ಒಂದೊಳ್ಳೆ ಕಾರ್ಯಕ್ಕೆ ಪ್ರತಿಯೊಬ್ಬರು ಪಕ್ಷಾತೀತವಾಗಿ ಭಾಗವಹಿಸಬೇಕು.

ದಲಿತ ಸಂಘಟನೆಗಳು ಒಗ್ಗಟ್ಟಿನ ಮಂತ್ರ ಜಪಿಸಬೇಕು.ದಲಿತರು ಮಾತ್ರವಲ್ಲದೆ ತಾಲೂಕಿನ ಜನಸಮೂಹ,ಪ್ರತಿಯೊಂದು ವರ್ಗದವರು ಡಾ. ಬಿಆರ್ ಅಂಬೇಡ್ಕರ್ ಭವನ ನಿರ್ಮಾಣದ ಭೂಮಿ ಪೂಜೆಗೆ ಪಾಲ್ಗೊಳ್ಳುವ ಮೂಲಕ ಗೌರವ ಸೂಚಿಸಬೇಕು ಎಂದರು.

ಸಮುದಾಯದ ಮುಖಂಡರಾದ ಚಿಕ್ಕೋಬನಹಳ್ಳಿ ಕರಿಬಸಪ್ಪ, ಯರ್ಜೆನಹಳ್ಳಿ ನಾಗರಾಜ್, ಕೋನಸಾಗರ ನಾಗೇಂದ್ರಪ್ಪ,ಪರಿವರ್ತನಾ ವೇದಿಕೆಯ ಮರ್ಲಹಳ್ಳಿ ಎಸ್ ಪರಮೇಶ್, ಮರಿಸ್ವಾಮಿ ಸೇರಿದಂತೆ ಹಲವರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now