ಬಳ್ಳಾರಿ: ವಿಮ್ಸ್ ನ ಐಸಿಯುನಲ್ಲಿ ಭಾರೀ ಅವಘಡ ಸಂಭವಿಸಿದೆ. ವಿದ್ಯುತ್ ಸಮಸ್ಯೆಯಿಂದಾಗಿ ವೆಂಟಿಲೇಟರ್ ಇಲ್ಲದೆ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ಮೃತರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಪರಿಹಾರ ಘೋಷಿಸಿದ್ದಾರೆ.
ಘಟನೆಯಲ್ಲಿ 30 ವರ್ಷದ ಶಟ್ಟೆಮ್ಮ, 38 ವರ್ಷದ ಮೌಲಾ ಹುಸೇನ್ ಸಾವನ್ನಪ್ಪಿದ ರೋಗಿಗಳು. ಮೃತರ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಈ ವಿಚಾರ ಇಂದು ಕಲಾಪದಲ್ಲೂ ಹೆಚ್ಚು ಸದ್ದು ಮಾಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಘಟಬೆಯನ್ನು ಖಂಡಿಸಿದ್ದರು. ಹಣವಿದ್ದರು, ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಿರಲಿಲ್ಕವೇಕೆ ಎಂದು ಪ್ರಶ್ನಿಸಿದರು. ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆಕ್ರೋಶ ಹೊರ ಹಾಕಿದ್ದರು. ಇದಕ್ಕೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ಕೂಡ ನೀಡಿದ್ದರು. ವಿದ್ಯುತ್ ಸಮಸ್ಯೆಯಿಂದ ಇದು ಆಗಿರುವುದಲ್ಲ. ಮಹಿಳೆಗೆ ಹಾವು ಕಚ್ಚಿತ್ತು, ಮೃತ ಪುರುಷನಿಗೆ ಅನಾರೋಗ್ಯದ ಸಮಸ್ಯೆ ಇತ್ತು ಎಂದು ಸ್ಪಷ್ಟಪಡಿಸಿದ್ದರು.