Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಮ್ಸ್ ನಲ್ಲಿ ಇಬ್ಬರು ರೋಗಿಗಳ ಸಾವು ಪ್ರಕರಣ : ತಲಾ ಐದು ಲಕ್ಷ ಘೋಷಿಸಿದ ಸಿಎಂ

Facebook
Twitter
Telegram
WhatsApp

ಬಳ್ಳಾರಿ: ವಿಮ್ಸ್ ನ ಐಸಿಯುನಲ್ಲಿ ಭಾರೀ ಅವಘಡ ಸಂಭವಿಸಿದೆ. ವಿದ್ಯುತ್ ಸಮಸ್ಯೆಯಿಂದಾಗಿ ವೆಂಟಿಲೇಟರ್ ಇಲ್ಲದೆ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ‌. ಆಸ್ಪತ್ರೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ಮೃತರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಪರಿಹಾರ ಘೋಷಿಸಿದ್ದಾರೆ.

ಘಟನೆಯಲ್ಲಿ 30 ವರ್ಷದ ಶಟ್ಟೆಮ್ಮ, 38 ವರ್ಷದ ಮೌಲಾ ಹುಸೇನ್ ಸಾವನ್ನಪ್ಪಿದ ರೋಗಿಗಳು. ಮೃತರ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಈ ವಿಚಾರ ಇಂದು ಕಲಾಪದಲ್ಲೂ ಹೆಚ್ಚು ಸದ್ದು ಮಾಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಘಟಬೆಯನ್ನು ಖಂಡಿಸಿದ್ದರು. ಹಣವಿದ್ದರು, ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಿರಲಿಲ್ಕವೇಕೆ ಎಂದು ಪ್ರಶ್ನಿಸಿದರು. ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಆಕ್ರೋಶ ಹೊರ ಹಾಕಿದ್ದರು. ಇದಕ್ಕೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ಕೂಡ ನೀಡಿದ್ದರು. ವಿದ್ಯುತ್ ಸಮಸ್ಯೆಯಿಂದ ಇದು ಆಗಿರುವುದಲ್ಲ. ಮಹಿಳೆಗೆ ಹಾವು ಕಚ್ಚಿತ್ತು, ಮೃತ ಪುರುಷನಿಗೆ ಅನಾರೋಗ್ಯದ ಸಮಸ್ಯೆ ಇತ್ತು ಎಂದು ಸ್ಪಷ್ಟಪಡಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗಕ್ಕೆ ಪ್ರಿಯಾಂಕ ಗಾಂಧಿ ಭೇಟಿ..ಅಭ್ಯರ್ಥಿ ಚಂದ್ರಪ್ಪಗೆ ಅನುಕೂಲವೆಂದ ಮಾಜಿ ಸಚಿವ ಆಂಜನೇಯ

ಲೋಕಸಭಾ ಚುನಾವಣೆಯ ಹಿನ್ನೆಲೆ ಪ್ರಿಯಾಂಕ ಗಾಂಧಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇಂದು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದು, ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಈ ಬಗ್ಗೆ ಮಾಜಿ ಸಚಿವ

ಬರ ಪರಿಹಾರ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ನೀಡದಿರುವುದಕ್ಕೆ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ,

ಬೇಸಿಗೆಯಲ್ಲಿ ಕಣ್ಣುಗಳ ಆರೋಗ್ಯಕ್ಕೆ ಹೀಗೆ ಮಾಡಿ…

ಸುದ್ದಿಒನ್ : ಕಣ್ಣಿನ ಉರಿಯು ಬೇಸಿಗೆಯಲ್ಲಿ ಯಾರನ್ನಾದರೂ ಬಾಧಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಸೂರ್ಯನ ಬಿಸಿಲು, ಧೂಳು ಮತ್ತು ವಾಯು ಮಾಲಿನ್ಯವು ಕಣ್ಣುಗಳ ಉರಿ, ಕಿರಿಕಿರಿ ಮತ್ತು ಕೆಂಪಗಾಗುವುದು ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಣ್ಣಿನ ಕಿರಿಕಿರಿಯನ್ನು

error: Content is protected !!