ಮೈಸೂರು: ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಪ್ರಕರಣವನ್ನು ಪೊಲೀಸ್ ಕಮಿಷನರ್ ತನಿಖೆ ನಡೆಸಿದ್ದಾರೆ. ಎಫ್ಎಸ್ಎಲ್ ಅಧಿಕಾರಿಗಳು ಕೂಡ ತನಿಖೆ ನಡೆಸಿದ್ದಾರೆ. ಗ್ಯಾಸ್ ಲೀಕೇಜ್ ನಿಂದಾನೇ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ.
ಮೃತ ಕುಮಾರಸ್ವಾಮಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು. ಕಳೆದ 30 ವರ್ಷದಿಂದ ಮೈಸೂರು ಜಿಲ್ಲೆಯ ಯರಗನಹಳ್ಳಿಯಲ್ಲಿ ವಾಸವಾಗಿದ್ದಾರೆ. ಇವರು ವಾಸವಿದ್ದ ಮನೆ ತೀರಾ ಚಿಕ್ಕದು. 10 ಅಡಿ ಉದ್ದ 20 ಅಡಿ ಅಗಲದ ಮನೆ. ಈ ಮನೆಯಲ್ಲಿಯೇ ಮೂರು ಗ್ಯಾಸ್ ಸಿಲಿಂಡರ್ ಗಳನ್ನು ಇಟ್ಟುಕೊಂಡಿದ್ದರು. ಸಿಲಿಂಡರ್ ಸಹಾಯದಿಂದಾನೇ ಇಸ್ತ್ರಿ ಮಾಡುತ್ತಿದ್ದರು. ಮನೆಯಲ್ಲಿ ಎರಡೇ ಕಿಟಕಿ ಇದ್ದ ಕಾರಣ, ಗ್ಯಾಸ್ ಹೊರಗೆ ಹೋಗಲು ಆಗಿಲ್ಲ.
ತಂದೆ-ತಾಯಿ ರೂಮಲ್ಲಿ ಮಲಗಿದ್ದರೆ ಇಬ್ಬರು ಮಕ್ಕಳು ಹಾಲ್ ನಲ್ಲಿ ಮಲಗಿದ್ದರು. ಸಂಬಂಧಿಕರ ಮದುವೆಗೆಂದು ಚಿಕ್ಕಮಗಳೂರಿಗೆ ಹೋಗಿದ್ದವರು ಕಳೆದ ಸಂಜೆ ಮನೆಗೆ ಬಂದಿದ್ದಾರೆ. ಕಳೆದ ಸೋಮವಾರ ಮಲಗಿದ್ದವರು. ಅವರ ಸಂಬಂಧಿಕರು ಕರೆ ಮಾಡಿದರು ರೆಸ್ಪಾನ್ಸ್ ಇರಲಿಲ್ಲ. ಅಕ್ಕಪಕ್ಕದವರಿಗೆ ಕುಮಾರಸ್ವಾಮಿ ಇದ್ದಾರಾ ಎಂಬುದನ್ನು ನೋಡುವುದಕ್ಕೆ ಹೇಳಿದ್ದಾರೆ. ಬಾಗಿಲು ಬಡಿದಾಗ ಘಟನೆ ಬೆಳಕಿಗೆ ಬಂದಿದೆ.
ಎಲ್ಲರ ಕಿವಿ, ಮೂಗು ಮತ್ತು ಬಾಯಲ್ಲಿ ರಕ್ತ ಸೋರುತ್ತಾ ಇತ್ತು. ಗ್ಯಾಸ್ ಸ್ಮೆಲ್ ಕೂಡ ಬರುತ್ತಿತ್ತು. ಫೈರ್ ಡಿಪಾರ್ಟ್ಮೆಂಟ್, ಎಫ್ಎಸ್‌ಎಲ್ ತಂಡ ಬಂದು ಡೋರ್ ಓಪನ್ ಮಾಡಿದ್ದೇವೆ. ಆಗಲೂ ಗ್ಯಾಸ್ ಸ್ಮೆಲ್ ಬರ್ತಿತ್ತು. ಆಗ ಎಲ್ಲಾ ಡೋರ್ ಓಪನ್ ಮಾಡಿ ನಂತರ ಒಳ ಹೋಗಿ ನೋಡಿದ್ದೇವೆ. ಮನೆಯಲ್ಲಿ ಮೂರು ಗ್ಯಾಸ್ ಇತ್ತು ಮೇಲ್ನೋಟಕ್ಕೆ ಒಂದು ಸಿಲಿಂಡರ್ ಲೀಕ್ ಆಗಿದೆ ಎಂದು ಪೊಲೀಸ್ ಕಮಿಷನರ್ ರಮೇಶ್ ಬಾನೊತ್ ಮಾಹಿತಿ ನೀಡಿದ್ದಾರೆ.